Asianet Suvarna News Asianet Suvarna News

ಸ್ವಲ್ಪ ವಯಸ್ಸಾದ್ಮೇಲೆ ಪೋಷಕರೇ ಮಕ್ಕಳಾಗ್ತಾರೆ, ನಾವು ಅವರಿಗೆ ಪಾಲಕರಾಗಬೇಕು: ಜಾನ್ವಿ ಕಪೂರ್ ಪ್ರೌಢ ಮಾತು

ಬಾಲಿವುಡ್ ಯಂಗ್ ಸ್ಟಾರ್ ಜಾನ್ವಿ ಕಪೂರ್ ಆದರ್ಶ ವ್ಯಕ್ತಿತ್ವ ಹೊಂದಿದ್ದಾರೆ. ಅವರ ನಟನೆ ಮಾತ್ರವಲ್ಲ ನಡವಳಿಕೆ, ಮಾತು ಅಭಿಮಾನಿಗಳನ್ನು ಸೆಳೆಯುತ್ತದೆ. ಪಾಲಕರ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಸೂಕ್ತ ಸಲಹೆಯನ್ನು ನೀಡಿದ್ದಾರೆ.
 

Janhvi Kapoor Says Parents Become Children After A Certain Age roo
Author
First Published Jul 23, 2024, 10:24 AM IST | Last Updated Jul 23, 2024, 11:36 AM IST

ಬಾಲಿವುಡ್ ನಟಿ ಹಾಗೂ ಶ್ರೀದೇವಿಯ ಮುದ್ದಿನ ಮಗಳು ಜಾನ್ವಿ ಕಪೂರ್ ಬರೀ ನಟನೆ ವಿಷ್ಯದಲ್ಲಿ ಮಾತ್ರವಲ್ಲ ಸ್ಟೈಲ್, ತಮ್ಮ ಜೀವನ ಶೈಲಿಯಿಂದಲೂ ಯುವಕರನ್ನು ಆಕರ್ಷಿಸುತ್ತಾರೆ. ಜಾನ್ವಿ ಮಾತು ಅನೇಕರಿಗೆ ಸ್ಪೂರ್ತಿ ಅಂದ್ರೆ ತಪ್ಪಾಗೋದಿಲ್ಲ. ಇಳಿ ವಯಸ್ಸಿನಲ್ಲಿ ಪಾಲಕರನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಜಾನ್ವಿ ಕಪೂರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಈಗಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗ್ತಿದೆ. ಮಕ್ಕಳು ತಮ್ಮ ಕೆಲಸ, ಕುಟುಂಬದಲ್ಲಿ ಬ್ಯುಸಿಯಾಗಿ, ಹೆತ್ತವರನ್ನು ಮರೆಯುತ್ತಿದ್ದಾರೆ. ಹೆತ್ತವರ ಆರೈಕೆ ಅವರಿಂದ ಸಾಧ್ಯವಾಗ್ತಿಲ್ಲ. ಈ ಸಮಯದಲ್ಲಿ ಜಾನ್ವಿ (Jhanvi) ಹೇಳಿದ ಮಾತು ಎಲ್ಲರ ಗಮನ ಸೆಳೆದಿದೆ. ಜಾನ್ವಿ, ವಯಸ್ಸಾದ ಪಾಲಕರನ್ನು (Parents)  ಹೇಗೆ ಟ್ರೀಟ್ ಮಾಡ್ಬೇಕು, ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ.

'ರಾಮಾಯಣ' ಚಿತ್ರದಲ್ಲಿ ಮೂಗು ಕತ್ತರಿಸಿಕೊಳ್ಳೋ 'ಶೂರ್ಪನಖಿ' ಪಾತ್ರಕ್ಕೆ ಆಯ್ಕೆಯಾದ ಬಾಲಿವುಡ್ ಬ್ಯೂಟಿ!

ವಯಸ್ಸಾದ ಪಾಲಕರು ಮಕ್ಕಳಂತೆ : ಒಂದು ನಿರ್ದಿಷ್ಟ ವಯಸ್ಸಿನ ನಂತರ ನಾವು ನಮ್ಮ ಹೆತ್ತವರನ್ನು ನೋಡಿಕೊಳ್ಳಬೇಕು. ನಮ್ಮ ಹೆತ್ತವರ ಆರೈಕೆ ಮಾಡೋದು ನಮ್ಮ ಕರ್ತವ್ಯ (Duty) . ಅವರು ನಮ್ಮ ಮಕ್ಕಳಾಗುತ್ತಾರೆ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಜನರು ಹೆತ್ತವರನ್ನು ಕಠೋರವಾಗಿ ನೋಡ್ತಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಅವರಿಗೆ ಹೆತ್ತವರು ಸಮಸ್ಯೆ ಎನ್ನಿಸಲು ಶುರುವಾಗ್ತಾರೆ. ಆದ್ರೆ ಹೆತ್ತವರು ಹಾಗಾಗಲು ಕಾರಣ ಅವರ ಹೆತ್ತವರು, ಅವರ ಸಮಸ್ಯೆ, ಅವರ ಜವಾಬ್ದಾರಿಗಳಾಗಿರುತ್ತದೆ. ಇದ್ರಲ್ಲಿ ಪೋಷಕರ ತಪ್ಪಿರೋದಿಲ್ಲ. ಇದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ಕ್ಷಮಿಸಿದಂತೆ ಪೋಷಕರನ್ನು ಕ್ಷಮಿಸಬೇಕು. ಅವರ ಮೇಲೆ ಪ್ರೀತಿ ತೋರಿಸಬೇಕು. ಅವರ ಜೊತೆಗಿರಬೇಕು ಎನ್ನುತ್ತಾರೆ ಜಾನ್ವಿ ಕಪೂರ್.

ಜಾನ್ವಿ ಪಾಲಕರ ಮೇಲೆ ಪ್ರೀತಿ ತೋರಿಸೋ ಬಗ್ಗೆ ಮಾತನಾಡಿದ್ದು ಇದೇ ಮೊದಲಲ್ಲ. ಅನೇಕ ಬಾರಿ ನಟಿ ಪಾಲಕರ ಬಗೆಗಿರುವ ಪ್ರೀತಿ, ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ತಂದೆ ಬೋನಿ ಕಪೂರ್‌ಗೆ ವಯಸ್ಸಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದ ಜಾನ್ವಿ, ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಬಯಸಿರುವುದಾಗಿ ಹಂಚಿಕೊಂಡಿದ್ದರು.

ಭಾರತದ ಪ್ರತಿಯೊಬ್ಬರಿಗೆ ಹೆತ್ತವರನ್ನು ಗೌರವಿಸುವ ಮತ್ತು ಕಾಳಜಿ ವಹಿಸಲು ಬಗೆ ತಿಳಿದಿರಬೇಕು. ಇದು ನಮ್ಮ ಹಕ್ಕು. ಪಾಶ್ಚಿಮಾತ್ಯ ಸಂಸ್ಕೃತಿ ಏನೇ ಇರಲಿ, ನಾವು ಭಾರತದ ಪದ್ಧತಿಯನ್ನು ಬಿಡಬಾರದು ಎಂದು ಈ ಹಿಂದೆ ಕೂಡ ಎಂದು ಜಾನ್ವಿ ಕಪೂರ್ ಹೇಳಿದ್ದರು.

ಮಕ್ಕಳಿರುವಾಗ ಎಲ್ಲರಿಗೂ ಅವರ ಅಪ್ಪ- ಅಮ್ಮ ಸೂಪರ್ ಮ್ಯಾನ್, ಸೂಪರ್ ವುಮೆನ್ ಆಗಿರ್ತಾರೆ. ತಂದೆ – ತಾಯಿ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದು ಭಾವಿಸ್ತಾರೆ. ಅದೇ ದೊಡ್ಡವರಾದ್ಮೇಲೆ ಪಾಲಕರು ಮನುಷ್ಯರು ಎಂಬುದು ಗೊತ್ತಾಗುತ್ತದೆ. ಅವರು ತಪ್ಪು ಮಾಡಲು ಸಾಧ್ಯವಿಲ್ಲ ಎಂಬುದು ಮನಸ್ಸಿನಲ್ಲಿ ತಳವೂರಿರುವ ಕಾರಣ, ಅವರು ತಪ್ಪು ಮಾಡಿದ್ರೆ ನಿಮಗೆ ಅದನ್ನು ಸಹಿಸೋದು ಕಷ್ಟವಾಗುತ್ತೆ ಎನ್ನುತ್ತಾರೆ ಜಾನ್ವಿ.

ಸದಾ ಒಂದಲ್ಲ ಒಂದು ವಿಷ್ಯದ ಬಗ್ಗೆ ಮಾತನಾಡಿ ಸುದ್ದಿಯಲ್ಲಿರುವ ಜಾನ್ವಿ, ಟ್ರೋಲರ್ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. ನಿಮ್ಮನ್ನು ನೀವು ಗಂಭೀರವಾಗಿ ಪರಿಗಣಿಸಬೇಡಿ. ಇದು ಸಾಮಾಜಿಕ ಜಾಲತಾಣದ ಕಲ್ಚರ್. ನೀವು ಪ್ರಸಿದ್ಧಿಯಾಗಿರಿ, ಬಿಡಿ, ಟ್ರೋಲಿಂಗ್, ಜನರ ಕಮೆಂಟ್ ಸಾಮಾನ್ಯ. ಇದಕ್ಕೆ ನೀವು ಹೆಚ್ಚು ಪ್ರಾಮುಖ್ಯತೆ ನೀಡಬೇಡಿ. ನಿಮ್ಮ ಪ್ರತಿಭೆ ಹಾಗೂ ಸ್ವಯಂ ಸುಧಾರಣೆಗೆ ಆದ್ಯತೆ ನೀಡಿ ಎಂದಿದ್ದಾರೆ. 

ಬರೋಬ್ಬರಿ ಮೂರು ಪ್ಯಾನ್ ಇಂಡಿಯಾ ಸಿನ್ಮಾಗೆ ಹೀರೋಯಿನ್ ಆದ ಬಾಲಿವುಡ್ ನಟಿ, ಆಲಿಯಾ, ದೀಪಿಕಾ ಅಲ್ಲ!

ಫುಡ್ ಪಾಯ್ಸನ್ ಸಮಸ್ಯೆಯಿಂದ ಜುಲೈ 18ರಂದು ಆಸ್ಪತ್ರೆ ಸೇರಿದ್ದ ಜಾನ್ವಿ ಜುಲೈ 20ರಂದು ಡಿಸ್ಜಾರ್ಜ್ ಆಗಿದ್ದಾರೆ. ಜಾನ್ವಿ ಸದ್ಯ ಉಲ್ಜ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದ್ದು, ಜಾನ್ವಿ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ. 

Latest Videos
Follow Us:
Download App:
  • android
  • ios