Asianet Suvarna News Asianet Suvarna News

ದೃಶ್ಯಂ ಚಿತ್ರದ ಖ್ಯಾತ ನಟನಿಂದ ನಾಲ್ಕು ವರ್ಷದ ಬಾಲಕಿ ಅತ್ಯಾಚಾರ? ಅಮ್ಮನಿಂದ ದೂರು ದಾಖಲು!

ದೃಶ್ಯಂ ಚಿತ್ರದ ಖ್ಯಾತ ನಟನಿಂದ ನಾಲ್ಕು ವರ್ಷದ ಬಾಲಕಿ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು ಬಾಲಕಿ ತಾಯಿ  ದೂರು ದಾಖಲು ಮಾಡಿದ್ದಾರೆ.  ಆಗಿದ್ದೇನು?  
 

Drushyam actor Koottickal Jayachandran booked on charge of sexual assault on minor girl suc
Author
First Published Jun 11, 2024, 12:55 PM IST

ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕುಟಿಕಲ್ ಜಯಚಂದ್ರನ್‌ರವರ ವಿರುದ್ಧ ಅತ್ಯಾಚಾರ ಕೇಸ್​ ದಾಖಲಾಗಿದ್ದು, ಈ ಸಂಬಂಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿಲ  ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕೋಝಿಕ್ಕೋಡ್‌ನ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟ ಜಯಚಂದ್ರನ್ ಕೌಟುಂಬಿಕ ಕಲಹವನ್ನು ಲಾಭವಾಗಿ ಬಳಸಿಕೊಂಡು ನಾಲ್ಕು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮನವಿ ಮೇರೆಗೆ ಕಸಬಾ ಠಾಣಾ ಪೊಲೀಸರು ದೂರುದಾರರ ಮನೆಗೆ ತೆರಳಿ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಜಯಚಂದ್ರನ್ ಅವರು ಮಲಯಾಳಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದು, ಸಾಕಷ್ಟು ಹೆಸರು ಮಾಡಿದ್ದಾರೆ. ಮೋಹನ್‌ಲಾಲ್-ಜೀತು ಜೋಸೆಫ್ ಥ್ರಿಲ್ಲರ್ ದೃಶ್ಯಂನಲ್ಲಿ ಖಳನಟನಾಗಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.  ಮಿಮಿಕ್ರಿ ಕಲಾವಿದರೂ ಆಗಿರುವ ಇವರು, ಜಗತಿ ವರ್ಸಸ್ ಜಗತಿ ಮತ್ತು ಕಾಮಿಡಿ ಟೈಮ್‌ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದರು. ದೃಶ್ಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಒರು ಸೆಕೆಂಡ್ ಕ್ಲಾಸ್ ಯಾತ್ರಾ, ಮಿಶಿಮ್, ನಾರದನ್, ಮೈ ಬಾಸ್, ಡಿಟೆಕ್ಟಿವ್ ಮುಂತಾದ ಅನೇಕ ಹಿಟ್ ಚಲನಚಿತ್ರಗಳಲ್ಲಿ  ನಟಿಸಿದ್ದಾರೆ.

ಇನ್ಮುಂದೆ ಯಾವ ಸಂಧಾನಕ್ಕೂ ಹೋಗಲ್ಲ... ಥೂ ನಮ್ಮ ಜನ್ಮಕ್ಕೆ... ಪ್ರಥಮ್​ ಕೆಂಡಾಮಂಡಲ ಆಗಿದ್ದೇಕೆ?

ಸದ್ಯ ಜಯಚಂದ್ರ ಅವರನ್ನು ಬಂಧಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಇವರು ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತಿಳಿದು ಬಂದಿದೆ. ಬಾಲಕಿ ಧರಿಸಿದ್ದ ಬಟ್ಟೆಗಳು ಧೂಳು ತುಂಬಿಕೊಂಡಿದ್ದರಿಂದ ಹಾಗೂ ಹರಿದಿರುವುದನ್ನು ಗಮನಿಸಿದ ಪಾಲಕರು ಗಾಬರಿಗೊಂಡು ಮಗಳಿಗೆ ಪ್ರಶ್ನಿಸಿದಾಗ ಆಕೆ ತನ್ನದೇ ಆದ ರೀತಿಯಲ್ಲಿ ಭಯಾನಕ ಘಟನೆ ವಿವರಿಸಿದ್ದಾಳೆ ಎನ್ನಲಾಗಿದೆ. ಇದಾದ ಬಳಿಕ  ಜಯಯಚಂದ್ರನ್‌ ದುಷ್ಕೃತ್ಯ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಾಯಿ ನೀಡಿದ ದೂರು ದಾಖಲಾಗಿದೆ. ಘಟನೆ ನಡೆದ ಬಳಿಕ  ನಟ ಜಯಚಂದ್ರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೂರು ನೀಡಿ ಎರಡು ದಿನಗಳಾದರೂ,  ವಿಚಾರಣೆ ಆರಂಭಗೊಂಡಿದೆಯಾದರೂ  ಆರೋಪಿಯ ಬಂಧನವಾಗಿಲ್ಲ ಎಂಬ ಬಗ್ಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.  ಬಾಲಕಿಯ ಪೋಷಕರು ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಅತ್ಯಾಚಾರದ ಹಿಂದೆ ನಟ ಮಾತ್ರವಲ್ಲದೇ  ಅಪ್ರಾಪ್ತನೊಬ್ಬನ ಕೈವಾಡವಿದೆ ಎನ್ನಲಾಗುತ್ತಿದೆ. ಆದರೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ.

ಶಾರುಖ್​ ಖಾನ್​- ಅಕ್ಷಯ್​ ಕುಮಾರ್​ರನ್ನು ಒಂದು ಮಾಡಿದ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮ!
 

Latest Videos
Follow Us:
Download App:
  • android
  • ios