Asianet Suvarna News Asianet Suvarna News

ಇನ್ಮುಂದೆ ಯಾವ ಸಂಧಾನಕ್ಕೂ ಹೋಗಲ್ಲ... ಥೂ ನಮ್ಮ ಜನ್ಮಕ್ಕೆ... ಪ್ರಥಮ್​ ಕೆಂಡಾಮಂಡಲ ಆಗಿದ್ದೇಕೆ?

ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರನ್ನು ಒಂದು ಮಾಡುವೆ ಎಂದಿದ್ದ ಪ್ರಥಮ್​ ಅವರು ಕೆಂಡಾಮಂಡಲ ಆಗಿದ್ದೇಕೆ? ಅವರು ಹೇಳಿದ್ದೇನು?
 

Pratham angy with netizens with regard to  Nivedita Gowda  Chandan Shetty divorce case suc
Author
First Published Jun 9, 2024, 5:54 PM IST

 ಕ್ಯೂಟ್​ ಕಪಲ್​ ಎಂದೇ ಕರೆಯಲ್ಪಡುತ್ತಿದ್ದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್​ ಕೊಟ್ಟಿರುವ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಿದೆ. ಇದು ನಿಜವೋ, ಸುಳ್ಳೋ ಎಂದು ಅಭಿಮಾನಿಗಳು ತಡಕಾಡುವಷ್ಟರಲ್ಲಿಯೇ ಸುದ್ದಿ ತಿಳಿದ ದಿನವೇ ಡಿವೋರ್ಸ್​ ಕೂಡ ತೆಗೆದುಕೊಂಡು ಆಗಿತ್ತು. ವಿಚ್ಛೇದನ ಕೋರಿ ಇಬ್ಬರೂ ಕೋರ್ಟ್​ಗೆ ಹೋಗಿದ್ದಾರೆ ಎನ್ನುವ ಸುದ್ದಿಯಾಗುತ್ತಲೇ ಕೋರ್ಟ್​ ಡಿವೋರ್ಸ್​ ಕೂಡ ಕೊಟ್ಟು ಬಿಟ್ಟಿದೆ. ಈಗ ಇವರಿಬ್ಬರ ಡಿವೋರ್ಸ್​ಗೆ ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ನಿಜವಾದ ಕಾರಣ ಮಾತ್ರ ಸದ್ಯ ಎಲ್ಲಿಯೂ ರಿವೀಲ್​ ಆಗಿಲ್ಲ. ಮೊನ್ನೆ ಮೊನ್ನೆಯವರೆಗೂ ಒಟ್ಟಿಗೇ ಇದ್ದವರು ದಿಢೀರ್​ ಈ ನಿರ್ಧಾರಕ್ಕೆ ಬಂದ್ರಾ ಅಥ್ವಾ ಮೊದಲೇ ಪ್ಲ್ಯಾನ್​ ಹಾಕಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊನೆಯವರೆಗೂ ನಡೆದುಕೊಂಡ್ರಾ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.


ಇದರ ನಡುವೆಯೇ ಒಳ್ಳೆ ಹುಡುಗ ಪ್ರಥಮ್​ ಇಬ್ಬರನ್ನೂ ಕರೆಸಿ ಸಂಧಾನ ಮಾಡಲು ಮುಂದಾಗಿದ್ದರು. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಲಿರುತ್ತದೆ. ಇವರಿಬ್ಬರೂ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ರಿತಿಕ್ ರೋಷನ್, ದೀಪಿಕಾ ಪಡುಕೋಣೆ ಆಗೋದಕ್ಕಾಗಲ್ಲ ಇಬ್ಬರೂ ಒಂದಾಗಬೇಕು. ಇವರನ್ನು ಒಂದುಗೂಡಿಸಲು ನಟ ಧ್ರುವ ಸರ್ಜಾ ಮಧ್ಯಸ್ಥಿಕೆವಹಿಸಬೇಕು ಎಂದು ನಟ ಒಳ್ಳೆಹುಡುಗ ಖ್ಯಾತಿಯ ಪ್ರಥಮ್ ಬುದ್ಧಿಪಾಠ ಹೇಳಿದ್ದರು. ಸಿನಿಮಾ ಇಂಟಸ್ಟ್ರಿಯಲ್ಲಿ ನಟ ಧ್ರುವ ಸರ್ಜಾ ಅವರ ಮಾತನ್ನ ಚಂದನ್ ಕೇಳ್ತಾರೆ. ಹೀಗಾಗಿ, ನಿವೇದಿತಾ ಹಾಗೂ ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌‌ಗೆ ಒಳ್ಳೆದಾಗಲಿ ಎಂದು ಧ್ರುವ ಪೊಗರು ಸಿನೆಮಾದಲ್ಲಿ ಚಾನ್ಸ್ ಕೊಟ್ಟರು. ಪ್ರೀತಿ ಇದ್ದರೆ ಚಂದನ್ ಧ್ರುವ ಮಾತನ್ನ ಕೇಳ್ತಾರೆ. ಮಿಲನ ಸಿನೆಮಾದಲ್ಲಿಯೂ ವಿಚ್ಚೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಮುಂದೆ ಬೇರಾವುದು ದೊಡ್ಡದಲ್ಲ. ಬೇಕಾದರೆ ಮಿಲನ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳಿಸುತ್ತೇನೆ. ಅದನ್ನ ನೋಡಿಯಾದರೂ ಚಂದನ್ ಮನಸ್ಸು ಬದಲಾಯಿಸಲಿ ಎಂದಿದ್ದರು.  

ಚಂದನ್‌ಶೆಟ್ಟಿಗೆ ಪ್ರಥಮ್ ಪ್ರೇಮಪಾಠ; ಲವ್ ಮ್ಯಾರೇಜ್ ಆದ್ರೆ ನಮ್ಮ ಜುಟ್ಟು ಅವರ ಕೈಲಿರುತ್ತದೆ

ಆದರೆ ಇಷ್ಟು ಹೇಳುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಪ್ರಥಮ್​ ವಿರುದ್ಧ ಭಾರಿ ಟೀಕೆಗಳ ಸುರಿಮಳೆಯಾಗುತ್ತಿದೆ. ಕಂಡವರ ಮನೆ ವಿಚಾರ ನಿಮಗ್ಯಾಕೆ, ಅವರ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದಾರೆ ಎಂದಿದ್ದ ನೆಟ್ಟಿಗರು, ಅವರಿಬ್ಬ ವಿಚಾರವನ್ನು ತಮ್ಮ ಜನಪ್ರಿಯತೆ, ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.  ಇದರಿಂದ ಪ್ರಥಮ್​ ರೊಚ್ಚಿಗೆದ್ದಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಅವರು, ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು, ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ; ಹಾಳಾದ ಕೆಲವು ಯೂಟ್ಯೂಟ್ ವಿಡಿಯೋ ನಾನ್ ಹೇಳಿದ್ದಕ್ಕೆ ಏನೇನೋ ಶೀರ್ಷಿಕೆ ಹಾಕಿವೆ. ಇಲ್ಲಿಗೆ ನಿಲ್ಲಿಸಿ, ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ. ಥೂ ನಿಮ್ ಜನ್ಮಕ್ಕೆ.ಏನೇನೋ ಹಾಕ್ತೀರಲ್ರೋ...ಹಾಳಾದವ್ರೇ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. 

ಇದರ ಮಧ್ಯೆಯೇ, ನಿವೇದಿತಾ ಮತ್ತು ಚಂದನ್​ ಗೌಡ ನಟಿಸಿರುವ ಕ್ಯಾಂಡಿಕ್ರಷ್​ ಚಿತ್ರದ ಕುರಿತು  ಚರ್ಚೆ ಶುರುವಾಗಿದೆ. ಇದರಲ್ಲಿ ಚಂದನ್​ ಮತ್ತು ನಿವೇದಿತಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್​ ಇನ್ನೂ ಮುಗಿದಿಲ್ಲ. ಅಷ್ಟೇ ಅಲ್ಲದೇ ಚಿತ್ರದ ಕ್ಲೈಮ್ಯಾಕ್ಸ್​ ಶೂಟಿಂಗ್ ಕೂಡ ಮುಗಿದಿಲ್ಲ. ಮಾತ್ರವಲ್ಲದೇ ಈಮಾಜಿ ದಂಪತಿ ಲವ್​ ಸೀನ್​ನ ಎರಡು ದೃಶ್ಯಗಳು ಬಾಕಿ ಇರುವುದಾಗಿ ಚಿತ್ರದ ನಿರ್ದೇಶಕ ಪುನೀತ್​ ಹೇಳಿದ್ದಾರೆ. ಈಮೂಲಕವಾದರೂ ಮಾಜಿ ದಂಪತಿ ಹಾಲಿಗಳಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ಡಿವೋರ್ಸ್​ ಬಳಿಕವೂ ನಿವೇದಿತಾ-ಚಂದನ್​ ಒಟ್ಟಿಗೇ ಇದ್ದಾರಾ? ಇನ್​ಸ್ಟಾಗ್ರಾಮ್​ ನೋಡಿ ಗುಸುಗುಸು ಶುರು!

Latest Videos
Follow Us:
Download App:
  • android
  • ios