Asianet Suvarna News Asianet Suvarna News

ಆರ್ಯನ್ ಖಾನ್ ಜಾಮೀನಿಗೆ ಜೂಹಿ ಚಾವ್ಲಾ ಶ್ಯೂರಿಟಿ; ಆದರೂ ಶಾರುಖ್ ಪುತ್ರನಿಗಿಲ್ಲ ಬಿಡುಗಡೆ ಭಾಗ್ಯ!

  • ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ
  • ಮತ್ತೊಂದು ದಿನ ಜೈಲಿನಲ್ಲೇ ಕಳೆಯಬೇಕಾದ ಪರಿಸ್ಥಿತಿ
  • ಅಕ್ಟೋಬರ್ 28ಕ್ಕೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್
Drugs Case Shah Rukh Khan son Aryan Kahn will not be out of jail toda relase proceedings takes place oct 30th ckm
Author
Bengaluru, First Published Oct 29, 2021, 8:34 PM IST

ಮುಂಬೈ(ಅ.29):  ಡ್ರಗ್ಸ್ ಪ್ರಕರಣದಲ್ಲಿ(Drugs case) ಜೈಲು ಸೇರಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ(Aryan Khan) ಬಾಂಬೆ ಹೈಕೋರ್ಟ್ ನಿನ್ನೆ(ಅ.28)ಜಾಮೀನು(Bail) ನೀಡಿದೆ. ಆದರೆ ಜಾಮೀನು ನೀಡಿ 24 ಗಂಟೆ ಕಳೆದರೂ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಯಾಗಿಲ್ಲ. ಜೈಲು ಅಧಿಕಾರಿಗಳ ಪ್ರಕಾರ ಆರ್ಯನ್ ಖಾನ್‌ ಇಂದು ಬಿಡುಗಡೆಯಾಗುತ್ತಿಲ್ಲ. ನಾಳೆ(ಅ.30) ಬೆಳಗ್ಗೆ ಬಿಡುಗಡೆಯಾಗಲಿದ್ದಾರೆ.

ಕೊನೆಗೂ ಆರ್ಯನ್ ಖಾನ್‌ಗೆ ಸಿಕ್ತು ಜಾಮೀನು; ಇಂದು ಜೈಲಿನಿಂದ ಬಿಡುಗಡೆ ಇಲ್ಲ!

ಡ್ರಗ್ಸ್ ಪ್ರಕರಣ ಸಂಬಂಧ ಅಕ್ಟೋಬರ್ 3 ರಂದು ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಮುಂಬೈ ಸೆಷನ್ ಕೋರ್ಟ್‌ನಲ್ಲಿ ಜಾಮೀನು ಸಿಗದ ಕಾರಣ ಶಾರುಖ್ ಕುಟುಂಬ ಬಾಂಬೆ ಹೈಕೋರ್ಟ್(Bombay high Court) ಮೊರೆ ಹೋಗಿತ್ತು. ಆರ್ಯನ್ ಖಾನ್ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್(Mukuk Rohtagi) ರೋಹ್ಟಗಿ ವಾದ ಮಂಡಿಸಿದ್ದರು. ಸತತ 3 ದಿನ ನಡೆದ ವಿಚಾರಣೆಯಲ್ಲಿ ಬಾಂಬೆ ಹೈಕೋರ್ಟ್ ಕೆಲ ಷರತ್ತುಗಳೊಂದಿಗೆ ಅಕ್ಟೋಬರ್ 28ಕ್ಕೆ ಜಾಮೀನು ಮಂಜೂರು ಮಾಡಿತ್ತು.

ಅಕ್ಟೋಬರ್ 29ಕ್ಕೆ ಕೋರ್ಟ್ ವಿವರವಾದ ಕೋರ್ಟ್ ಆರ್ಡರ್ ಪ್ರಕಟಣೆಯಾಗಲಿದೆ ಎಂದಿತ್ತು. ಆದರೆ ಕೋರ್ಟ್ ಆರ್ಡರ್ ಆರ್ಥರ್ ರೋಡ್ ಜೈಲು ಅಧಿಕಾರಿಗಳ ತಲುಪಲು ವಿಳಂಬವಾಗಿದೆ. ಇಂದು 5.30ರ ವರೆಗೆ ಜಾಮೀನು ಆರ್ಡರ್ ಆರ್ಥರ್ ರೋಡ್ ಜೈಲು ಅಧಿಕಾರಿಗಳ ಬಳಿ ತಲುಪಿಲ್ಲ. ಸದ್ಯ ಆರ್ಡರ್ ತಲುಪಿದೆ. ಆದರೆ ಜೈಲಿನಲ್ಲಿ ಜಾಮೀನು ಪ್ರಕ್ರಿಯೆ ನಾಳೆ ನಡೆಯಲಿದೆ. ಹೀಗಾಗಿ ಆರ್ಯನ್ ಖಾನ್ ಬಿಡುಗಡೆ ಮತ್ತೊಂದು ದಿನಕ್ಕೆ ಮುಂದೂಡಲಾಗಿದೆ.

Aryan Khanಗೆ ಬೇಲ್: ವಕೀಲರ ತಂಡದ ಜೊತೆ ಪೋಸ್ ಕೊಟ್ಟ ಶಾರೂಖ್ ಮುಖದಲ್ಲಿ ಬಿಗ್ ಸ್ಮೈಲ್

ಅಕ್ಟೋಬರ್ 30ರ ಬೆಳಗ್ಗೆ 7.30ಕ್ಕೆ ಆರ್ಥರ್ ರೋಡ್ ಜೈಲಿನ ಜಾಮೀನು ಪತ್ರ ಪಟ್ಟೆಗೆ ತೆರೆಯಲಾಗುತ್ತದೆ. ಬಳಿಕ ಈ ಪೆಟ್ಟಿಗೆಯಲ್ಲಿರುವ ಜಾಮೀನು ಪತ್ರ ಹಾಗೂ ಪ್ರಕ್ರಿಯೆ ಮುಂದುವರಿಯಲಿದೆ. ಎಲ್ಲಾ ಪ್ರಕ್ರಿಯೆ 10 ರಿಂದ 10.30 ಒಳಗೆ ಮುಗಿಯಲಿದೆ. ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗುವುದು ಎಂದು ಜೈಲು ಸೂಪರಿಡೆಂಟ್ ನಿತಿನ್ ವಾಯ್ಚಲ್ ಹೇಳಿದ್ದಾರೆ.

ಆರ್ಯನ್ ಖಾನ್ ಜಾಮೀನಿಗೆ ನಟಿ, ಶಾರುಖ್ ಖಾನ್ ಆಪ್ತ ಸ್ನೇಹಿತೆ ಜೂಹಿ ಚಾವ್ಲಾ ಶ್ಯೂರಿಟಿ ಸಹಿ ಮಾಡಿದ್ದಾರೆ. 1 ಲಕ್ಷ ರೂಪಾಯಿ ಬಾಂಡ್ ಮೇಲೆ ಶ್ಯೂರಿಟಿ ಸಹಿ ಮಾಡಿದ್ದಾರೆ. ಇದರ ಜೊತೆಗೆ ಬಾಂಬೆ ಹೈಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿದೆ.

ಆರ್ಯನ್ ಖಾನ್ ಪಾಸ್‌ಪೋರ್ಟ್ ಬಾಂಬೆ ಕೋರ್ಟ್‌ಗೆ ಸಲ್ಲಿಸಬೇಕಿದೆ. ಬಳಿಕ ಅನುಮತಿ ಇಲ್ಲದೆ ಮುಂಬೈ ಬಿಟ್ಟು ತೆರಳುವಂತಿಲ್ಲ. ತುರ್ತು ಅವಶ್ಯಕತೆ ನಿಮಿತ್ತ ತೆರಳಬೇಕಿದ್ದರೆ, ಕೋರ್ಟ್ ಹಾಗೂ NCB ಅಧಿಕಾರಿಗಳ ಗಮನಕ್ಕೆ ತರಬೇಕಿದೆ. ಇನ್ನು ತುರ್ತು ಹಾಗೂ ಆರೋಗ್ಯ ಕಾರಣಗಳನ್ನು ಹೊರತು ಪಡಿಸಿ ಪ್ರತಿ ಶುಕ್ರವಾರ NCB ಅಧಿಕಾರಿಗಳ ಮುಂದೆ ಕಡ್ಡಾಯವಾಗಿ ಹಾಜರಾಗಬೇಕಿದೆ. ಕೋರ್ಟ್ ವಿಚಾರಣೆಗೆ ತಪ್ಪದೆ ಹಾಜರಾಗಬೇಕಿದೆ.

Drugs Case: 4 ಗಂಟೆ ಅಫೀಸರ್ ವಾಂಖೆಡೆ ವಿಚಾರಣೆ, ಡ್ರಗ್ಸ್ ಪಾರ್ಟಿ ತನಿಖೆ ಕಥೆ ಏನು ?

ಆರ್ಯನ್ ಖಾನ್ ಜೊತೆಗೆ ಸ್ನೇಹಿತರಾದ ಆರ್ಬಾಜ್ ಖಾನ್ ಹಾಗೂ ಮುನ್ಮುನ್ ದಮೇಚಾಗೂ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಸತತ 3 ದಿನ ವಿಚಾರಣೆಯಲ್ಲಿ ಮುಕುಲ್ ರೋಹ್ಟಗಿ ಆರ್ಯನ್ ಖಾನ್‌ಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. NCB ಅಧಿಕಾರಿಗಳ ವಾದಕ್ಕೆ ಸಮರ್ಥವಾಗಿ ಪ್ರತಿವಾದ ಮಂಡಿಸಿದ ರೋಹ್ಟಗಿ ಶಾರುಖ್ ಕುಟುಂಬದ ನೆಮ್ಮದಿ ನಿಟ್ಟುಸಿರಿಗೆ ಕಾರಣರಾಗಿದ್ದಾರೆ.

ಆರ್ಯನ್ ಖಾನ್ ಬಂಧನವೇ ಕಾನೂನು ಬಾಹಿರ ಎಂದು ರೋಹ್ಟಗಿ ವಾದಿಸಿದ್ದರು. ಆರ್ಯನ್ ಖಾನ್ ಡ್ರಗ್ಸ್ ಸೇವನೆ ಕುರಿತ ವೈದ್ಯಕೀಯ ಪರೀಕ್ಷೆ ಮಾಡಿಲ್ಲ. ದಾಳಿ ವೇಳೆ ಆರ್ಯನ್ ಖಾನ್ ಕ್ರ್ಯೂಸ್ ಪಾರ್ಟಿಯಲ್ಲಿದ್ದರು. ಆದರೆ ಡ್ರಗ್ಸ್ ವ್ಯವಹಾರ ಹಾಗೂ ಸೇವೆನೆ ಮಾಡಿಲ್ಲ ಎಂದು ರೋಹ್ಟಗಿ ವಾದಿಸಿದ್ದರು.

Follow Us:
Download App:
  • android
  • ios