Asianet Suvarna News Asianet Suvarna News

ಕಷ್ಟದಲ್ಲಿದ್ದಾಗ ಸೆಟ್ಟಲ್ಲಿ ಟೀ ಮಾಡಿದ್ದೆ: ಅವಾರ್ಡ್ ಫಂಕ್ಷನ್‌ಗೆ ಧರಿಸಲು ಬಟ್ಟೆ ಇರಲಿಲ್ಲ: ಅಭಿಷೇಕ್‌ ಬಚ್ಚನ್

ಐಶ್ವರ್ಯಾ ಅಭಿಷೇಕ್ ವಿಚ್ಛೇದನದ ಊಹಾಪೋಹದ ಕಾರಣಕ್ಕೆ ಬಚ್ಚನ್ ಕುಟುಂಬ ಬಹುತೇಕ ತಿಂಗಳಿಂದ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಅವರು ಒಬ್ಬ ಸ್ಟಾರ್‌ ನಟನ ಮಗನಾಗಿಯೂ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಲು ತಾನೆಷ್ಟು ಕಷ್ಟಪಟ್ಟೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Dropped out of college when I was in trouble did tea on set Didnt have clothes to wear to award function Abhishek Bachchan remembers his strugling days akb
Author
First Published Dec 28, 2023, 11:27 AM IST

ನವದೆಹಲಿ: ಐಶ್ವರ್ಯಾ ಅಭಿಷೇಕ್ ವಿಚ್ಛೇದನದ ಊಹಾಪೋಹದ ಕಾರಣಕ್ಕೆ ಬಚ್ಚನ್ ಕುಟುಂಬ ಬಹುತೇಕ ತಿಂಗಳಿಂದ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಅವರು ಒಬ್ಬ ಸ್ಟಾರ್‌ ನಟನ ಪುತ್ರನ ಹೊರತಾಗಿಯೂ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಲು ತಾನೆಷ್ಟು ಕಷ್ಟಪಟ್ಟೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಒಂದೊಮ್ಮೆ ಯಾರೂ ಕೆಲಸ ಕೊಡದ ಕಾರಣ ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡಿದ್ದೆ, ಅಲ್ಲಿ ಟೀ ಕೂಡಾ ಮಾಡಿ ಕೊಡುತ್ತಿದ್ದೆ ಎಂದು ಖ್ಯಾತ ನಟ ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಕುಟುಂಬ ಎದುರಿಸಿದ್ದ ಕಷ್ಟದ ದಿನಗಳನ್ನು ಸ್ಮರಿಸಿಕೊಂಡ ಅಭಿಷೇಕ್‌, ‘20 ವರ್ಷಗಳ ಹಿಂದೆ ಅಪ್ಪ (ಅಮಿತಾಭ್‌) ಕಷ್ಟದಲ್ಲಿದ್ದರು. ಅವರು ತೆರೆದಿದ್ದ ಕಂಪನಿ ಸಾಕಷ್ಟು ನಷ್ಟದಲ್ಲಿತ್ತು. ಹೀಗಾಗಿ ಅವರಿಗೆ ನೆರವಾಗಲೆಂದು ನಾನು ಕಾಲೇಜು ಬಿಟ್ಟು ಪ್ರೊಡಕ್ಷನ್‌ ಬಾಯ್‌ ಆಗಿ ಕೆಲಸಕ್ಕೆ ಸೇರಿದೆ. ಸೆಟ್‌ಗಳಲ್ಲಿ ಟೀ ಕೂಡಾ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಐಶ್ವರ್ಯ ರೈ ಬೇರೆ ವಾಸವಿದ್ರೂ ಅಭಿಷೇಕ್ ಡೀವೋರ್ಸ್ ಕೊಡುತ್ತಿಲ್ಲ; ಸೀಕ್ರೆಟ್‌ ಬಿಚ್ಚಿಟ್ಟ ನೆಟ್ಟಿಗರು!

ಆರಂಭದ ದಿನಗಳಲ್ಲಿ ನನಗೆ ಯಾರೂ ಪಾತ್ರ ಕೊಡಲು ಸಿದ್ದರಿರಲಿಲ್ಲ. ಅವಾರ್ಡ್ ಫಂಕ್ಷನ್‌ವೊಂದಕ್ಕೆ ಹೋಗಲು ಹೊಸ ಸೂಟ್‌ ಖರೀದಿಸಲೂ ಸಾಧ್ಯವಿರಲಿಲ್ಲ. ಜೀನ್ಸ್ ಪ್ಯಾಂಟ್‌, ಶರ್ಟ್ ಸೂಕ್ತವಲ್ಲ ಎಂದು ತಂಗಿ ಮದುವೆಗೆ ಹೊಲಿಸಿದ್ದ ಬಟ್ಟೆ ಹಾಕಿಕೊಂಡು ಹೋಗಿದ್ದೆ. ಅದೇ ಕಾರ್ಯಕ್ರಮದಲ್ಲಿ ನನ್ನನ್ನು ನೋಡಿದ ಖ್ಯಾತ ನಿರ್ದೇಶಕ ಜೆ.ಪಿ.ದತ್ತಾ ತಮ್ಮ ರೆಫ್ಯೂಜಿ ಚಿತ್ರದಲ್ಲಿ ನನಗೆ ಪಾತ್ರ ನೀಡಿದರು. ಬಳಿಕ ನನ್ನ ಜೀವನ ಬದಲಾಯಿತು ಎಂದು ಅಭಿಷೇಕ್‌ ಹೇಳಿಕೊಂಡಿದ್ದಾರೆ.

ಅಮಿತಾಭ್​ ಮಗನಾದರೂ ಯಾರೂ ನನ್ನನ್ನು ಚಿತ್ರಕ್ಕೆ ಸೇರಿಸಿಕೊಳ್ಳಲೇ ಇಲ್ಲ: ಆ ದಿನಗಳ ನೆನೆದ ಅಭಿಷೇಕ್​!

ಅಭಿಷೇಕ್ ಬಚ್ಚನ್ ಉತ್ತಮ ನಟ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಸ್ಟಾರ್‌ ಕಿಡ್‌ಗಳನ್ನು ಅವರ ಪೋಷಕರ ನಟನೆಯ ನೆರಳಿನಲ್ಲೇ ಬಹುತೇಕರು ನೋಡುವ ಕಾರಣದಿಂದ ಅವರ ನಟನೆಗಳು ಅನೇಕರಿಗೆ ಹಿಡಿಸುವುದಿಲ್ಲ, ಅದಕ್ಕೆ ಅಭಿಷೇಕ್ ಬಚ್ಚನ್ ಅವರು ಕೂಡ ಹೊರತಲ್ಲ, ಇತ್ತೀಚೆಗೆ ಈ ವರ್ಷ ತೆರೆಕಂಡ ಅವರ ಕ್ರೀಡೆಗೆ ಸಂಬಂಧಿಸಿದ ಘೂಮರ್ ಸಿನಿಮಾವೂ ಅವರ ನಟನ ಕೌಶಲ್ಯಕ್ಕೆ ಸಾಕ್ಷಿ, ಆದರೆ ಅದು ಬಾಕ್ಸಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡಲಿಲ್ಲ, ಇನ್ನುಳಿದಂತೆ ಅಭಿಷೇಕ್ ಬಚ್ಚನ್ ಅವರು ಧೂಮ್2, ಯುವ, ಸರ್ಕಾರ್, ಕಬಿ ಅಲ್ವಿದ ನಾ ಕೆಹೆನಾ, ಬಂಟಿ ಔರ್ ಬಬ್ಲಿ, ಗುರು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Follow Us:
Download App:
  • android
  • ios