ಯಾರಮ್ಮಾ ನಿನ್ನಂಥ ಮಗಳನ್ನ ಹೆತ್ತವರು; ರಶ್ಮಿಕಾಗೆ ಬಂತಾ ಇಂಥದ್ದೊಂದು ಕಾಮೆಂಟ್!
ನಟಿಯಾಗಿ ಸ್ಯಾಂಡಲ್‌ವುಡ್ ಅಂಗಳದಿಂದ ಹೆಜ್ಜೆಯಿಟ್ಟು ಸಾಗಿರುವ ರಶ್ಮಿಕಾ, ಬಳಿಕ ತೆಲುಗು ಚಿತ್ರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಬಳಿಕ, ತಮಿಳು ಹಾಗೂ ಬಾಲಿವುಡ್ ಚಿತ್ರರಂಗಗಳಿಗೂ ಲಗ್ಗೆಯಿಟ್ಟು ಇದೀಗ ನ್ಯಾಷನಲ್ ಕ್ರಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯಾಷನಲ್ ಕೃಷ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅದೆಷ್ಟೋ ಎತ್ತರಕ್ಕೆ ಏರಿದ್ದರೂ ಇನ್ನೂ ಬೆಳೆಯಬೇಕೆಂಬ ಹಂಬಲ ಉಳ್ಳವರು. ಇದಕ್ಕೆ ಸಾಕ್ಷಿ ಎಂಬಂತೆ ಅವರು ಮಾತನಾಡಿರುವ ವೀಡಿಯೋ ಒಂದು ಗರಗರನೇ ಜಗತ್ತನ್ನೇ ಸುತ್ತುತ್ತಿದೆ. ಆ ವೀಡಿಯೋದಲ್ಲಿ ನಟಿ ರಶ್ಮಿಕಾ ಹೇಳಿರುವ ಒಂದೊಂದು ಮಾತೂ ಸಹ ಹಲವು ಮಹಿಳೆಯರಿಗೆ ಹಾಗೂ ಪುರುಷರಿಗೂ ಕೂಡ ವೇದವಾಕ್ತವಾಗಬಹುದು. ಏಕೆಂದರೆ, ವಯಸ್ಸು ಚಿಕ್ಕದಾದರೂ ನಟಿ ರಶ್ಮಿಕಾ ಹೇಳಿರುವ ಮಾತುಗಳು ಎಲ್ಲರೂ ಒಪ್ಪುವಂಥದು.
ಹಾಗಿದ್ದರೆ ನಟಿ ರಶ್ಮಿಕಾ ಏನು ಹೇಳಿದ್ದಾರೆ. 'ಯಾರೇನೇ ಅಂದರೂ, ಯಾರು ನಿಮ್ಮ ಕಾಲೆಳೆದರೂ, ಯಾರು ನಿಮ್ಮ ಹಿಂದುಗಡೆಯಿಂದ ಹಿಡಿದೆಳೆದರೂ ನೀವು ಮಾಡುತ್ತಿರುವ ಕೆಲಸ ನಿಮಗೆ ಮುಖ್ಯ ಎಂದಾದರೆ ಯಾವ ಕಾರಣಕ್ಕೂ ಬಿಡಬೇಡಿ. ದೊಡ್ಡ ದೊಡ್ಡ ಕನಸುಗಳನ್ನು ಕಾಣಿ, ಹಾರ್ಡ್ ವರ್ಕ್ ಮಾಡಿ, ಅದೆಂಥ ಕಷ್ಟ ಬಂದರೂ ಕೂಡ ಸಹಿಸಿಕೊಳ್ಳಿ, ಮಾಡುವ ಕೆಲಸ ಬಿಡಬೇಡಿ. ಒಂದಲ್ಲ ಒಂದು ದಿನ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.
ಆರ್‌ಸಿ ಸ್ಟುಡಿಯೋಸ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ; ರಿಯಲ್ ಸ್ಟಾರ್ ಹಾಜರಿ, ಚಂದ್ರುಗೆ ಶಬ್ಬಾಸ್‌ಗಿರಿ
ರಶ್ಮಿಕಾ ಹೇಳಿರುವ ಮಾತುಗಳನ್ನು ಅಷ್ಟು ಈಸಿಯಾಗಿ ತಳ್ಳಿ ಹಾಕುವಂತಿಲ್ಲ. ನಟಿಯಾಗಿ ಸ್ಯಾಂಡಲ್‌ವುಡ್ ಅಂಗಳದಿಂದ ಹೆಜ್ಜೆಯಿಟ್ಟು ಸಾಗಿರುವ ರಶ್ಮಿಕಾ, ಬಳಿಕ ತೆಲುಗು ಚಿತ್ರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಬಳಿಕ, ತಮಿಳು ಹಾಗೂ ಬಾಲಿವುಡ್ ಚಿತ್ರರಂಗಗಳಿಗೂ ಲಗ್ಗೆಯಿಟ್ಟು ಇದೀಗ ನ್ಯಾಷನಲ್ ಕ್ರಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಾರೋ ಮಾಡಿದರೆ ನಮಗೆ ಅದು ಗ್ರೇಟ್ ಎನಿಸುತ್ತದೆ. ನಮ್ಮ ನೆಲದ ಹುಡುಗಿಯೊಬ್ಬಳು ಇಡೀ ದೇಶದ ಗಮನ ಸೆಳೆಯುವ ಮಟ್ಟಿಗೆ ಬೆಳೆದಿರುವುದು ಹೆಮ್ಮೆ ಪಡಬೇಕಾದ ಸಂಗತಿಯೇ ಹೌದು.
ಧೀರೇಂದ್ರ ಗೋಪಾಲ್ ಕೊನೆಯ ಕ್ಷಣಗಳು ಭೀಕರವಾಗಿತ್ತು; ದಾನಶೂರ ಕರ್ಣನಿಗೆ ಯಾಕಿಂಥ ಸ್ಥಿತಿ ಬಂತು!?
ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಹಾಗು ರಣವೀರ್ ಕಪೂರ್ ನಟನೆಯ 'ಅನಿಮಲ್' ಚಿತ್ರವು ಇತ್ತೀಚೆಗೆ ಬಿಡುಗಡೆ ಕಂಡು ಸೂಪರ್ ಹಿಟ್ ದಾಖಲಿಸಿದೆ. ಇದೀಗ ಒಟಿಟಿಯಲ್ಲಿ ಕೂಡ ಪ್ರೇಕ್ಷಕರಿಗೆ ಲಭ್ಯವಿದೆ. 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಅನಿಮಲ್ ಚಿತ್ರ ಭಾರೀ ಬಜೆಟ್ ಚಿತ್ರವೇನೂ ಅಲ್ಲ. ಆದರೆ, ಹಾಕಿರುವ ಬಂಡವಾಳಕ್ಕೆ ಸಾಕು ಸಾಕು ಎಂಬಷ್ಟು ಲಾಭ ತಂದುಕೊಟ್ಟಿರುವ ಚಿತ್ರ ಎನ್ನಲಾಗಿದೆ. ಒಟ್ಟಿನಲ್ಲಿ ನಟಿ ರಶ್ಮಿಕಾ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಬದಲಾದ್ರು ಯಶ್ 'ರಾಜಧಾನಿ' ರಘು ಜಯ; 'ಪಟಾಲಂ' ಜತೆ ಬರ್ತಿದಾರೆ ಎಸ್‌ಎಲ್ ಭೈರವ್, ದಾರಿ ಬಿಡಿ!