ಅಲಿಯಾ ಭಟ್ ನಿರ್ದೇಶಕ ಮಹೇಶ್ ಭಟ್ ಮಗಳು. ಶುರು ಶುರುವಿನಲ್ಲಿ ಮಹಾನ್ ಪೆದ್ದಿ ಅಂತ ಅನಿಸಿಕೊಂಡಿದ್ದ ಈಕೆಯ ಬಗ್ಗೆ ಸಾಕಷ್ಟು ಜೋಕ್ ಗಳೂ ಹುಟ್ಟಿಕೊಂಡಿದ್ವು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಆಲಿಯಾ ತನ್ನ ಬಗೆಗಿನ ಜೋಕ್ ಗಳನ್ನ ತಾನೇ ಹೇಳಿ ನಗುತ್ತಿದ್ದಳು.

ತಮ್ಮ ಚೀಪ್‌ ಜೋಕ್‌ಗಳು ಅಲಿಯಾಗಳನ್ನು ಬಗ್ಗಿಸಲಾರವು ಎಂದರಿತ ಟ್ರೋಲಿಗರು ಕ್ರಮೇಣ ಈಕೆಯ ಬಗ್ಗೆ ಆಡ್ಕೊಂಡು ನಗೋದನ್ನು ಕಡಿಮೆ ಮಾಡಿದ್ರು. ಅಲಿಯಾ ನಟನೆ ಬಗ್ಗೆ ಎರಡು ಮಾತಿಲ್ಲ. ಸ್ಟೂಡೆಂಟ್ ಆಫ್ ದಿ ಯಿಯರ್ ಮೂಲಕ ಈಕೆ ಕಾಲೇಜ್ ಹುಡುಗರ ಕ್ರಶ್ ಆದಳು. ಟು ಸ್ಟೇಟ್ ಕಾಲೇಜ್ ಹುಡುಗ್ರ ಜೊತೆಗೆ ವಿವಾಹಿತರೂ ಎನ್‌ಜಾಯ್ ಮಾಡೋ ಹಾಗಿತ್ತು.

ಅಲಿಯಾ ಜೊತೆ ಮದುವೆ: ಬಿಗ್ ಹಿಂಟ್ ಕೊಟ್ಟ ರಣಬೀರ್ ಕಪೂರ್ ...

ಹೈವೇ ಚಿತ್ರದಲ್ಲಂತೂ ಈಕೆಯ ಅದ್ಭುತ ಪರ್ಫಾಮೆನ್ಸ್‌ಅನ್ನು ಸಿನಿಮಾ ವಿಮರ್ಶಕರೂ ಒಪ್ಪಿಕೊಂಡರು. ಕಪೂರ್ ಆಂಡ್‌ ಸನ್ಸ್‌ ಸಿನಿಮಾದಲ್ಲಿ ಈಕೆಯ ಅಭಿನಯ ಸಖತ್ ಕ್ಯೂಟ್ ಅನ್ನೋ ಥರ ಇತ್ತು. ಪುಟಾಣಿ ಉಡುಗೆಗಳಲ್ಲಿ ಈಕೆ ಚಂದದ ಪರ್ಫಾಮೆನ್ಸ್ ಪ್ರಶಂಸೆ ಪಡೆಯಿತು. ಉಡ್ತಾ ಪಂಜಾಬ್‌ ಚಿತ್ರದಲ್ಲಿ ಚಿಂದಿ ಉಡಾಯಿಸುವಷ್ಟು ತೀವ್ರ ಅಭಿನಯ ಈಕೆಯದ್ದು.

ಇನ್ನು ಪರ್ಸನಲ್ ಲೈಫ್‌ಗೆ ಬರೋದಾದ್ರೆ ಅಲಿಯಾ ಭಟ್ ಅಕ್ಕ ಪೂಜಾ ಭಟ್ ಸಖತ್ ಬೋಲ್ಡ್‌ ಅಂತಲೇ ಗುರುತಿಸಿಕೊಂಡವಳು. ತನ್ನ ತಂದೆ ಮಹೇಶ್ ಭಟ್ ಜೊತೆಗೆ ಲಿಪ್‌ ಟು ಲಿಪ್ ಕಿಸ್ ಫೊಟೋದ ಮೂಲಕ ಸಾಕಷ್ಟು ವಿವಾದಕ್ಕೂ ಕಾರಣವಾದರು. ಮಹೇಶ್ ಭಟ್, 'ಪೂಜಾ ಭಟ್‌ ನನ್ನ ಮಗಳಾಗಿರದಿದ್ದರೆ ನಾನಾಕೆಯನ್ನು ಲವ್ ಮಾಡಿ ಮದುವೆಯಾಗುತ್ತಿದ್ದೆ' ಅನ್ನೋ ಮಾತನ್ನೂ ಹೇಳಿದ್ದರು. ಆದರೆ ತನ್ನ ಅಕ್ಕನಂತೆ ಕಿರಿತಂಗಿ ಅಲಿಯಾ ಇಂಥಾ ವಿವಾದಗಳಲ್ಲಿ ಸಿಲುಕಿದವಳಲ್ಲ. ತಾನಾಯ್ತು, ತನ್ನ ಬೆಕ್ಕುಮರಿ ಆಯ್ತು ಅನ್ನೋ ಹಾಗೆ ಇದ್ದವಳು. 

ಚಿತ್ರೀಕರಣದ ವೇಳೆ ಕುಸಿದು ಬಿದ್ದ ನಟಿ ಆಲಿಯಾ ಭಟ್; ಹೈ ಸೆಕ್ಯೂರಿಟಿ ನೀಡಿ ಅಸ್ಪತ್ರೆಯಲ್ಲಿ ಚಿಕಿತ್ಸೆ! ...

ಅಲಿಯಾ ಭಟ್ ರಣವೀರ್ ಕಪೂರ್ ಜೊತೆಗೀಗ ಬಿಂದಾಸ್ ಆಗಿ ಡೇಟಿಂಗ್ ಮಾಡುತ್ತಿದ್ದಾಳೆ. ಮೊನ್ನೆ ತಾನೇ ಈ ಎರಡೂ ಫ್ಯಾಮಿಲಿಗಳೂ ರಣಥಾಂಬೋರ್‌ನಲ್ಲಿ ಹೊಸ ವರ್ಷಾಚರಣೆ ಆಚರಿಸಿದವು.

ಹೀಗೆ ಡೇಟಿಂಗ್ ಮಾಡೋದು, ಲಿವ್‌ ಇನ್ ರಿಲೇಶನ್‌ಶಿಪ್‌ ಇವೆಲ್ಲ ವಿದೇಶಗಳಲ್ಲಿ ಕಾಮನ್‌. ನಮ್ಮ ದೇಶದಲ್ಲೂ ಹೈ ಸೊಸೈಟಿಯಲ್ಲಿ ಕಾಮನ್ ಆಗ್ತಿದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಖುಲ್ಲಂ ಖುಲ್ಲ ಆಗಿ ಇಂಥವನ್ನೆಲ್ಲ ಹೇಳಿಬಿಡುತ್ತಾರೆ. ಕಲ್ಕಿ ಕೊಚ್ಲಿನ್ ತನ್ನ ಬಾಯ್‌ಪ್ರೆಂಡ್ ಜೊತೆ ಡೇಟಿಂಗ್ ಮಾಡುತ್ತಲೇ ಮಗುವನ್ನು ಹೆತ್ತಳು. ಶ್ರೀದೇವಿಯಂಥಾ ನಟಿಯೇ ಮದುವೆಗೂ ಮುಂಚೆ ಗರ್ಭವತಿಯಾಗಿದ್ದರು. ಅಮೃತಾ ಅರೋರ, ಆಮಿ ಜಾಕ್ಸನ್, ನೇಹಾ ದುಪಿಯಾ ಹೀಗೆ ಬಹಳ ಮಂದಿ ಮದುವೆಗೂ ಮುನ್ನವೇ ಪೆಗ್ನೆಂಟ್ ಆಗಿದ್ದರು. ಸದ್ಯದ ಪ್ರಶ್ನೆ ಈ ಸಾಲಿಗೆ ಇನ್ನೂ ಇಪ್ಪತ್ತೇಳರ ಹರೆಯದ ಅಲಿಯಾ ಭಟ್ ಸಹ ಸೇರ್ತಾರಾ ಅನ್ನೋದು. 

ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌! ...

ಇತ್ತೀಚೆಗೆ ಆರ್‌ಆರ್‌ಆರ್‌ ಸೆಟ್ ನಲ್ಲಿ ಅಲಿಯಾ ತಲೆ ತಿರುಗಿ ಬಿದ್ದಾಗ ಎಲ್ಲರಿಗೂ ಏನಿವಳು ಮದುವೆಗೂ ಮೊದಲೇ ಗುಡ್‌ನ್ಯೂಸ್ ಕೊಡ್ತಾಳಾ ಅನ್ನೋ ಅನುಮಾನವೇ ಮೊದಲು ಬಂದಿದ್ದು. ಆದರೆ ಆಮೇಲೆ ಆಕೆ ಶೂಟಿಂಗ್‌ನಲ್ಲಿ ತೀವ್ರವಾಗಿ ತೊಡಗಿಸಿಕೊಂಡು ದಣಿದಿದ್ದರಿಂದ ಹೀಗಾಯ್ತು ಅನ್ನೋ ಸಬೂಬು ಬಂತು. ಆದರೆ ಆರ್‌ಆರ್‌ಆರ್‌ನಂಥಾ ಬಹುಕೋಟಿ ಬಜೆಟ್‌ನ ಮೂವಿಗಳಲ್ಲಿ ನಟಿಯರನ್ನು ಯಾವ ರಾಣಿಗೂ ಕಡಿಮೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ ಅನ್ನುವುದು ಸಾಮಾನ್ಯರಿಗೂ ಗೊತ್ತಿರುವ ವಿಷಯ. ಒಂದೊಂದು ಶಾಟ್‌ಗೂ ನಡುವೆ ಬ್ರೇಕ್ ಇರುತ್ತೆ. ಇಂಥ ಐಷಾರಾಮಿ ಟ್ರೀಟ್‌ಮೆಂಟ್‌ನಲ್ಲೂ ಅಲಿಯಾ ಬಸವಳಿಯ ಬೇಕಿದ್ದರೆ, ನಮ್ಮ ಸೀರಿಯಲ್ ನಟಿಯರ ಕತೆ ಹೇಗಿರಬೇಡ. ನಡುವೆ ಸರಿಯಾಗಿ ಬ್ರೇಕ್ ಸಹ ನೀಡದೇ ಅವರನ್ನು ದುಡಿಸಿಕೊಳ್ಳೋದು ಕಾಮನ್. 

ಹೀಗಿರುವಾಗ ಅಲಿಯಾ ಶೂಟಿಂಗ್ ನಡುವೆ ಬಸವಳಿದಿದ್ದಾಳೆ ಅಂದರೆ ಅಲ್ಲಿ ಬೇರೇನೋ ವಿಶೇಷ ಇರಬಹುದು ಅನ್ನೋ ಅನುಮಾನ ಮೂಡೋದು ಸಹಜವೇ. ಎನಿವೇ, ಅಲಿಯಾ-ರಣವೀರ್ ಜೋಡಿ ಈ ವರ್ಷದಲ್ಲಾದರೂ ಮದುವೆ ಆಗಲಿ. ಆದಷ್ಟು ಬೇಗ ಗುಡ್ ನ್ಯೂಸ್ ಕೊಡಲಿ ಅಂತ ಆಶಿಸೋಣವೇ.