ಗಂಗೂಬಾಯಿ ಕಥಿಯಾವಾಡಿ ಚಿತ್ರೀಕರಣದ ವೇಳೆಯೇ ಆಲಿಯಾ ಭಟ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿತ್ರತಂಡದ ಸಹಾಯದಿಂದ ಮುಂಬೈನ ಆಸ್ಪತ್ರೆಗೆ ದಾಖಲು... 

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಚಿತ್ರೀಕರಣದ ವೇಳೆ ಆಲಿಯಾ ಭಟ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಿತ್ರತಂಡ ಆಲಿಯಾರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಿದೆ. ಚಿಕಿತ್ಸೆಯಲ್ಲಿರುವ ಆಲಿಯಾರನ್ನು ಮೀಡಿಯಾ ಹಾಗೂ ಅಭಿಮಾನಿಗಳಿಂದ ದೂರವಿಡಲು ಹೈ ಸೆಕ್ಯೂರಿಟಿ ನೀಡಲಾಗಿದೆ.

ಖಾಸಗಿ ವೆಬ್‌ಪೋರ್ಟಲ್‌ ವರದಿ ಮಾಡಿರುವ ಪ್ರಕಾರ ಆಲಿಯಾ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ,ದೇಹಕ್ಕೆ ರೆಸ್ಟ್‌ ಸಿಗದ ಕಾರಣ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಯಲ್ಲಿ ಒಂದು ದಿನದ ಮಟ್ಟಿಗೆ ವಿಶ್ರಾಂತಿ ಪಡೆದುಕೊಂಡು ಆಲಿಯಾ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌! 

ಕೆಲ ತಿಂಗಳುಗಳ ಹಿಂದೆ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ಆರ್‌ಆರ್‌ಆರ್‌ ಚಿತ್ರಕ್ಕೆಂದು ಹೈದರಾಬಾದ್‌ಗೆ ತೆರಳಿದ ಆಲಿಯಾ ಬ್ರೇಕ್‌ ತೆಗೆದುಕೊಳ್ಳದೆ ಗಂಗೂಬಾಯಿ ಸೆಟ್‌ ಸೇರಿಕೊಂಡರು. ಆರಂಭದಿಂದಲೂ ಆಲಿಯಾ ಗುಣವೇ ಹಾಗೆ ತನ್ನ ಕೈಯಲ್ಲಿರುವ ಸಿನಿಮಾಗೆ ಶ್ರಮ ಮೀರಿ ಕೆಲಸ ಮಾಡುತ್ತಾರೆ. ಕಥೆ ಹಿಟ್ ಆಗಲೇ ಬೇಕು ನಿರ್ದೇಶಕರಿಗೆ ಲಕ್ಕಿ ಸಿನಿಮಾ ಇದಾಲೇ ಬೇಕು ಎಂಬುದು ಆಲಿಯಾ ಮೋಟೋ ಆಗಿರುತ್ತದೆ.