Asianet Suvarna News Asianet Suvarna News

ಸಿಂಪಲ್​ ಸ್ಟಾರ್​ ನಟರ ಲಕ್ಸುರಿ ಪತ್ನಿಯರ ಲೈಫ್​ ಹೇಗಿದೆ ಗೊತ್ತಾ? ಲಕ್ಷ ಇವರಿಗೆ ಅಲಕ್ಷ್ಯ!

ಸಿನಿ ಇಂಡಸ್ಟ್ರಿಯ ಕೆಲವು ಸ್ಟಾರ್​ ನಟರು ನೂರಾರು ಕೋಟಿ ಒಡೆಯರಾದರೂ ಸಿಂಪಲ್​ ಆಗಿದ್ದಾರೆ. ಆದರೆ ಅವರ ಪತ್ನಿಯರು ಮಾತ್ರ ಲಕ್ಸುರಿ ಲೈಫ್​ ನಡೆಸುತ್ತಿದ್ದಾರೆ. ಅಂಥ ಕೆಲವು ನಟ-ನಟಿಯರ ಕುರಿತು ಇಲ್ಲಿ ತಿಳಿಸಲಾಗಿದೆ. 
 

Do you know the life of the luxury wives of Simple Star actors
Author
First Published Jun 7, 2023, 6:37 PM IST

ಸೆಲೆಬ್ರಿಟಿಗಳು ಎಂದರೆ ಹಾಗೆನೇ. ಅವರ ಲೈಫ್​ಸ್ಟೈಲೇ ವಿಭಿನ್ನವಾಗಿರುತ್ತದೆ. ಅದರಲ್ಲಿಯೂ ಸಿನಿ ಇಂಡಸ್ಟ್ರಿಯ ನಟ-ನಟಿಯರ ಜೀವನ ಕ್ರಮ ಸಂಪೂರ್ಣ ಭಿನ್ನವೇ. ಕೆಲವು ಹಿಟ್​ ಚಿತ್ರಗಳನ್ನು ನೀಡಿ ನೂರಾರು ಕೋಟಿಗಳ ಒಡೆಯರಾದ ಮೇಲೆ ಇನ್ನು ಕೇಳಬೇಕೆ? ಸಾಮಾನ್ಯ ಜನರಿಗೆ ಊಹಿಸಿಕೊಳ್ಳಲೂ ಸಾಧ್ಯವಾಗದಷ್ಟು ಐಷಾರಾಮಿ ಜೀವನ ಇವರದಾಗುತ್ತದೆ. ಅಪರೂಪ ಎಂಬಂತೆ  ಕೆಲವು ಸೆಲೆಬ್ರಿಟಿಗಳು ನೂರಾರು ಕೋಟಿ ರೂಪಾಯಿಗಳ ಒಡೆಯ-ಒಡತಿಯಾದರೂ ಸಿಂಪಲ್​ ಲೈಫ್​  (Simple Life) ಲೀಡ್​  ಮಾಡುತ್ತಾರೆ. ಸಾಮಾನ್ಯರಂತೆ ಅತಿ ಸಾಮಾನ್ಯರಾಗಿ ಅವರು ಬದುಕುತ್ತಾರೆ. ಆದರೆ ಇಂಥವರು ಬೆರಳೆಣಿಕೆ ಮಂದಿ ಮಾತ್ರ ಎನ್ನಬಹುದು.  ಕೆಲವು ಶ್ರೀಮಂತರ ಕುಟುಂಬದಲ್ಲಿ ಪತ್ನಿ ಸಿಂಪಲ್​ ಆಗಿದ್ದರೆ ಗಂಡ ಲಕ್ಸುರಿ ಲೈಫ್​ ಮೊರೆ ಹೋಗುವುದು ಇದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಪತ್ನಿ ಐಷಾರಾಮಿ ಜೀವನಕ್ಕೆ ಹೊಂದಿಕೊಳ್ಳುತ್ತಾರೆ.

ಇರುವ ದುಡ್ಡನ್ನು ಹೇಗೆ ಖರ್ಚು ಮಾಡಬೇಕು ಎಂದು ತಿಳಿಯದೇ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಬಟ್ಟೆಗಳನ್ನು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ತೊಡುವುದು ಇದೆ. ಇಲ್ಲಿ ಅಂಥದ್ದೇ ಕೆಲ ಬಾಲಿವುಡ್​ ಸೆಲೆಬ್ರಿಟಿಗಳ ಬಗ್ಗೆ ಹೇಳುತ್ತಿದ್ದೇವೆ. ಸೂಪರ್​ಸ್ಟಾರ್​ ಎನಿಸಿಕೊಂಡಿರುವ ಕೆಲವು ಬಾಲಿವುಡ್​ ನಟರು ಸಿಂಪಲ್​ ಆಗಿದ್ರೂ ಅವರ ಪತ್ನಿಯರು ಹೇಗೆ ಲಕ್ಸುರಿ ಲೈಫ್​ (Luxury Life) ನಡೆಸುತ್ತಿದ್ದಾರೆ ಎನ್ನುವುದನ್ನು ತಿಳಿಸಲಾಗಿದೆ. ಇಂಥ ಹಲವು ನಟ-ನಟಿಯರು ಇದ್ದರೂ ಇಲ್ಲಿ ಕೆಲವರ ಬಗ್ಗೆ ತಿಳಿಸಲಾಗಿದೆ.

ಮಹೇಶ್​ ಬಾಬು-  ನಮ್ರತಾ ಶಿರೋಡ್ಕರ್
ಈ ಸಾಲಿನಲ್ಲಿ ಮೊದಲಿಗೆ ಕಣ್ಣು ಕುಕ್ಕುವುದು ಸಿಂಪಲ್​ ನಟ ಎಂದೇ ಖ್ಯಾತಿ ಪಡೆದಿರುವ ಮಹೇಶ್​ ಬಾಬು (Mahesh Babu) ಮತ್ತು ಅವರ ಪತ್ನಿ ನಟಿ ನಮ್ರತಾ ಶಿರೋಡ್ಕರ್. 2000 `ವಂಶಿ’ (Vamsi) ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ಈ ಜೋಡಿಗೆ ಸೆಟ್​ನಲ್ಲಿ ಲವ್​ ಆಗಿ ಮದುವೆಗೂ ನಿರ್ಧರಿಸಿದ್ದರು. ಆದರೆ   ನಮ್ಮ ಮದುವೆಯ ಬಳಿಕ ನಟನೆ ಬಿಡಬೇಕು ಎಂದು ಮಹೇಶ್​ ಹೇಳಿದ್ದರಿಂದ ಮದುವೆಯಾದ ಮೇಲೆ  ನಮ್ರತಾ ನಟನೆ ಬಿಟ್ಟಿದ್ದಾರೆ. ಈಗ ಅವರು ಇಬ್ಬರು ಮಕ್ಕಳ ತಾಯಿ ಕೂಡ. ನಟನೆ ಬಿಟ್ಟರೇನಂತೆ. ಇತ್ತೀಚೆಗೆ ವೈರಲ್​ ಆಗಿರುವ ಫೋಟೋ ಒಂದು ಅವರ ಲಕ್ಸುರಿ ಲೈಫ್​ ಬಗ್ಗೆ ತಿಳಿಸುತ್ತಿದೆ. ಫ್ಯಾಷನ್​ ಡಿಸೈನರ್​ ಜಿಯೋರ್ಜಿಯೋ ಅರ್ಮಾನಿ ಅವರು ಡಿಸೈನ್​ ಮಾಡಿರುವ ಒಂದು ಕೋಟ್ ಹಾಕಿಕೊಂಡು ನಮ್ರತಾ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಅಲ್ಲಿಯೇ ನಮೂದಾಗಿರುವಂತೆ ಈ ಕೋಟ್​ ಬೆಲೆಯನ್ನು ಸಾಮಾನ್ಯ ಜನರು ಊಹಿಸುವುದೂ ಕಷ್ಟ. ಹೌದು. ಈ ಕೋಟ್​ಗೆ 3, 99, 703 ರೂಪಾಯಿ ಅಂದರೆ ನಾಲ್ಕು ಲಕ್ಷ ರೂಪಾಯಿಗಳು!

ಐಷಾರಾಮಿ ರೆಸ್ಟೋರೆಂಟ್​ಗಳ ಒಡತಿಯರು ಈ ಬಾಲಿವುಡ್​ ನಟಿಯರು!

ರಾಣಾ ದಗ್ಗುಬಾಟಿ - ಮಿಹಿಕಾ
ಇನ್ನು ಇನ್ನೋರ್ವ ಸೂಪರ್​ಸ್ಟಾರ್​ 'ಬಾಹುಬಲಿ' ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ  ಕೂಡ ಸಾದಾ ಸೀದಾ ಸಿಂಪಲ್ ನಟ ಎಂದೇ ಹೆಸರು ಪಡೆದಿದ್ದಾರೆ. ಆದರೆ ಇವರ ಪತ್ನಿ ಮಿಹಿಕಾ ಐಷಾರಾಮಿ ಜೀವನದಲ್ಲಿ ಹಿಂದೆ ಬಿದ್ದಿಲ್ಲ. 2020ರಲ್ಲಿ ಇವರ ಮದುವೆಯಾಗಿತ್ತು. ಆಗಲೇ ಮಿಹಿಕಾ ಅವರು ಧರಿಸಿದ್ದ ಲೆಹಂಗಾದ ಬಗ್ಗೆ ಸಕತ್​ ಸುದ್ದಿಯಾಗಿತ್ತು. ಸಿಕ್ಕಾಪಟ್ಟೆ ಲಕ್ಸುರಿಯಾಗಿರುವ  ಡ್ರೆಸ್, ಆಭರಣ ಧರಿಸಿದ್ದ ಮಿಹಿಕಾ ಖನ್ನಾ ಅವರು ಧರಿಸಿದ್ದ chikankari ಮತ್ತು ಗೋಲ್ಡ್ ಮೆಟಲ್‌ ವರ್ಕ್ ಲೆಹಂಗಾ  ತಯಾರು ಮಾಡಲು 10 ಸಾವಿರ ಗಂಟೆಗಳನ್ನು  ತೆಗೆದುಕೊಳ್ಳಲಾಗಿತ್ತು. ಆದರೆ ಅದಕ್ಕೆ ಎಷ್ಟು ಖರ್ಚಾಗಿದೆ ಎನ್ನುವ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಿರಲಿಲ್ಲ. ಇದೀಗ ಫೋಟೋ ಒಂದು ವೈರಲ್​ ಆಗಿದ್ದು, ಅದರಲ್ಲಿ ಅವರು ಹಿಡಿದುಕೊಂಡ ಪರ್ಸ್​ ಬೆಲೆ 37,988 ರೂಪಾಯಿ ಎಂದು ತಿಳಿದುಬಂದಿದೆ. 

ವಿಷ್ಣು ಮಂಚು-ವಿರಾನಿಕಾ ರೆಡ್ಡಿ 
ಟಾಲಿವುಡ್​ ನಟ ವಿಷ್ಣು ಮಂಚು (Vishnu Manchu) ಮತ್ತು ಅವರ ಪತ್ನಿ ವಿರಾನಿಕಾ ರೆಡ್ಡಿ ಅವರು ಎರಡು ವರ್ಷಗಳ ಹಿಂದೆ ಬಹಳ ಸುದ್ದಿಯಲ್ಲಿ ಇದ್ದುದು ಅವರಿಗೆ ನಾಲ್ಕನೆಯ ಮಗುವಾದಾಗ. ಮೂವರು ಹೆಣ್ಣುಮಕ್ಕಳು ಎನ್ನುವ ಕಾರಣಕ್ಕೋ ಏನೋ ನಾಲ್ಕನೆಯ ಮಗುವನ್ನು ಮಾಡಿಕೊಂಡಿದ್ದರು. ಆಗಲೂ ಹೆಣ್ಣು ಮಗುವೇ ಹುಟ್ಟಿತ್ತು. ಇದರಿಂದ ಅವರು ಸಕತ್​ ಟ್ರೋಲ್​ಗೂ ಒಳಗಾಗಿದ್ದರು. ಅದೇನೇ ಇದ್ದರೂ ಇದೀಗ ವಿಷ್ಣು ಅವರ ಪತ್ನಿ ವಿರಾನಿಕಾ ಅವರ ಲಕ್ಸುರಿ ಲೈಫ್​ ನೋಡಿ ಜನರ ಕಣ್ಣು ಕುಕ್ಕುತ್ತಿದೆ. ಈಚೆಗೆ ಅವರು ದುಬಾರಿ ವಜ್ರದ ನೆಕ್​ಲೆಸ್​ ಒಂದನ್ನುಹಾಕಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಇದರಲ್ಲಿ ಅವರು ಹಾಕಿಕೊಂಡಿರುವ ನೆಕ್​ಲೆಸ್​ ಬೆಲೆ 2,08,22,172 ರೂಪಾಯಿ ಎಂದು ನಮೂದಾಗಿದೆ. ಇದರ ಅರ್ಥ 2 ಕೋಟಿ 82 ಲಕ್ಷ ರೂಪಾಯಿಗಳು! 

ಇಂಚಿಂಚು ದೇಹ ತೋರಿಸಿ ನಟಿ ಪೂಜಾ ವಿಡಿಯೋಶೂಟ್​: ಎರಡು ಕಣ್ಣು ಸಾಲ್ದು ಅಂತಿದ್ದಾರೆ ಫ್ಯಾನ್ಸ್​!

ರಾಮ್​ ಚರಣ್​ - ಉಪಾಸನಾ (Upasana)
ಇನ್ನು ರಾಮ್​ ಚರಣ್​ ಪತ್ನಿ ಉಪಾಸನಾ ಅವರ ಕುರಿತು ಹೇಳಲೇ ಬೇಕಿಲ್ಲ. ಮದುವೆಯಾಗಿ 11 ವರ್ಷಗಳ ಬಳಿಕ ಮಗುವನ್ನು ಪಡೆಯುವ ಖುಷಿಯಲ್ಲಿರುವ ಈ ದಂಪತಿಯ ಲಕ್ಸುರಿ ಲೈಫ್​ ಅಷ್ಟಿಷ್ಟಲ್ಲ. ಲಕ್ಸುರಿ ವಿಷಯದಲ್ಲಿ ಉಪಾಸನಾ ಒಂದು ಹೆಜ್ಜೆ ಮುಂದಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಉಪಾಸನಾ ಕೊನಿಡೇಲ ಅವರ ಬಟ್ಟೆ-ಆಭರಣಗಳು ಅಲ್ಲಿದ್ದವರ ಕಣ್ಣು ಕುಕ್ಕಿದ್ದು ಉಂಟು. ಆಸ್ಕರ್​ ಪಡೆದ ರಾಮ್​ಚರಣ್​ ಸಿಂಪಲ್​ ಆಗಿ ಬಂದಿದ್ದರೆ ಉಪಾಸನಾ ಅವರು,  ಉಟ್ಟಿದ್ದ  ಸೀರೆಯನ್ನು ಮರುಬಳಕೆಯ ಸ್ಕ್ರ್ಯಾಪ್​ಗಳಿಂದ ತಯಾರಿಸಲಾಗಿತ್ತು. ಕೈಯಿಂದ ನೇಯ್ದ ರೇಷ್ಮೆ ಮತ್ತು ನೂಲುವ ಬಟ್ಟೆಯಿಂದ ಅದು ಮಾಡಿತ್ತು. ಇದು ಸೀರೆ ಮಾತಾದರೆ,  ಅವರು ಧರಿಸಿದ್ದ ನೆಕ್​ಲೆಸ್​  ತಯಾರಿಸಲು 4 ವರ್ಷ ತೆಗೆದುಕೊಂಡಿರುವುದು ವರದಿಯಾಗಿತ್ತು.  ನೈಸರ್ಗಿಕ ರತ್ನಗಳು ಮತ್ತು ಅತ್ಯುನ್ನತ ಗುಣಮಟ್ಟದ ಮುತ್ತುಗಳನ್ನು ಬಳಸಿ ನೆಕ್ಲೇಸ್ ತಯಾರಿಸಲಾಗಿದೆ. ಸುಮಾರು 400 ಕ್ಯಾರೆಟ್ ಗುಣಮಟ್ಟದ ಮಾಣಿಕ್ಯ ನೆಕ್ಲೇಸ್ ಇದು.  ಇದು ನೂರಾರು ಕೋಟಿ  ಬೆಲೆ ಬಾಳುತ್ತದೆ. ಈ ರೀತಿಯ ಹಲವಾರು ಲಕ್ಸುರಿ ಐಟಂಗಳು ಉಪಾಸನಾ ಬಳಿ ಇವೆ.

ಅಲ್ಲು ಅರ್ಜುನ್- ಸ್ನೇಹಾ ರೆಡ್ಡಿ ಮತ್ತು ಜ್ಯೂನಿಯರ್​ ಎನ್​ಟಿಆರ್​-  ಲಕ್ಷ್ಮಿ ಪ್ರಣತಿ
ಇದೇ ರೀತಿ ಸ್ಟಾರ್​ ನಟರಾಗಿರುವ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿಯವರೂ ಹಿಂದೆ ಬಿದ್ದಿಲ್ಲ. ಸ್ನೇಹಾ ರೆಡ್ಡಿ ಸಿನಿಮಾಗಳಲ್ಲಿ ನಟಿಸದಿದ್ದರೂ  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. 8.9 ಮಿಲಿಯನ್​ಗಿಂತಲೂ  ಹೆಚ್ಚು ಫಾಲೋವರ್ಸ್​ ಹೊಂದಿರೋ ಇವರ ಲಕ್ಸುರಿ ಲೈಫ್​ ನೋಡಿ ಫ್ಯಾನ್ಸ್​ ಕಣ್​ಕಣ್​ ಬಿಡುವುದು ಇದೆ. ಅದೇ ರೀತಿ,  ಜ್ಯೂನಿಯರ್​ ಎನ್​ಟಿಆರ್​ ಪತ್ನಿ ಲಕ್ಷ್ಮಿ ಪ್ರಣತಿ. ಇವರ ಮದುವೆ  5 ಮೇ 2011 ರಂದು ನಡೆದಿದ್ದು. ಕೆಲವು ವರದಿಗಳ ಪ್ರಕಾರ,  ಇವರ  ಅದ್ಧೂರಿ ಮದುವೆಗೆ ಖರ್ಚು ಮಾಡಿದ್ದು ಸುಮಾರು 100 ಕೋಟಿ ರೂಪಾಯಿಗಳಂತೆ! ಇನ್ನು ಅವರ ಐಷಾರಾಮಿ ಜೀವನದ ಬಗ್ಗೆ ಮತ್ತೆ ಹೇಳಬೇಕಾಗಿಲ್ಲ. ಇಷ್ಟು ದೊಡ್ಡ ನಟನಾಗಿ ಕೋಟಿ ಕೋಟಿ ಒಡೆಯರಾದರೂ ಜ್ಯೂನಿಯರ್​ ಎನ್​ಟಿಆರ್​ ಸಿಂಪ್ಲಿಸಿಟಿಗೆ ಹೆಸರುವಾಸಿ. ಆದರೆ ಅವರ ಪತ್ನಿ ಲಕ್ಷ್ಮಿ ಪ್ರಣತಿ (Lakshmi Pranathi) ಅವರದ್ದು ಕಲರ್​ಫುಲ್​ ಲೈಫ್​. 

ಅವರ ಜೊತೆ ಮಲಗಿದ್ರಷ್ಟೇ ಸಿನಿಮಾದಲ್ಲಿ ಫೇಮಸ್​ ಆಗೋದಂತೆ! ನಟಿ ನೋವಿನ ನುಡಿ

Follow Us:
Download App:
  • android
  • ios