Asianet Suvarna News Asianet Suvarna News

ಕರೀನಾ ಕಪೂರ್ ಪ್ರೆಗ್ನೆನ್ಸಿ ಡಯಟ್ ನಿಮಗೆ ಗೊತ್ತಾ?

ಗರ್ಭಿಣಿ ಕರೀನಾ ಕಪೂರ್ ಏನು ಸೇವಿಸುತ್ತಾರೆ, ಯಾವ ವ್ಯಾಯಾಮ ಮಾಡುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಅದಕ್ಕೆ ಇಲ್ಲಿದೆ ಉತ್ತರ. 

Do you know pregnancy diet of Bollywood actress Kareena kapoor
Author
Bengaluru, First Published Dec 17, 2020, 4:26 PM IST

ಕರೀನಾ ಕಪೂರ್‌ಗೆ ಡೆಲಿವರಿ ಸಮಯ ದೂರವಿಲ್ಲ. ಹೆಲ್ದಿಯಾಗಿ ತಮ್ಮ ಬಾಡಿಯನ್ನು ಮೇಂಟೇನ್ ಮಾಡಿಕೊಂಡಿರುವ ಕರೀನಾ, ಸಾಕಷ್ಟು ಉತ್ತಮ ಆಹಾರವನ್ನೂ ಸೇವಿಸುತ್ತಿದ್ದಾರೆ. ಅವರ ಡಯಟ್ ಮತ್ತ ಉದೈಲಿ ರೊಟೀನ್‌ಗಳು ಇತರ ಪ್ರೆಗ್ನೆಂಟ್‌ಗಳಿಗೂ ಮಾದರಿಯಾಗುವಂತೆ ಇದೆ. ಹಾಗಾದರೆ ಬನ್ನಿ, ಕರೀನಾ ಕಪೂರ್ ಅವರ ಡಯಟ್ ಮತ್ತು ಡೈಲಿ ವ್ಯಾಯಾಮದ ರೊಟೀನ್‌ಗಳು ಹೇಗಿರ್ತವೆ ಅಂತ ಒಮ್ಮೆ ನೋಡಿ.

ಕರೀನಾ ಒಂದೇ ಸಲಕ್ಕೆ ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ. ಅಥವಾ ದಿನಕ್ಕೆರಡು ಹೊಟ್ಟೆ ಸಿಕ್ಕಾಪಟ್ಟೆ ತಿನ್ನುವಷ್ಟು ಊಟ ಮಾಡುವುದೂ ಇಲ್ಲ. ಬದಲಾಗಿ ದಿನದಲ್ಲಿ ಐದು ಬಾರಿ ಹರಡಿ ಹೋದಂತೆ ಆಹಾರ ಸೇವಿಸುತ್ತಾರೆ. ದಿನಕ್ಕೆ ಐದು ಬಾರಿ ಆಹಾರ ಸೇವಿಸುತ್ತಾರೆ.

Do you know pregnancy diet of Bollywood actress Kareena kapoor

ಮೊದಲ ಕೋರ್ಸ್: 9ರಿಂದ 10 ಗಂಟೆಯ ಅವಧಿಯಲ್ಲಿ. ನೆನೆಸಿಟ್ಟ ಬಾದಾಮಿ ಕಾಳುಗಳು, ಬಾಳೆಹಣ್ಣು.

ಎರಡನೇ ಕೋರ್ಸ್: 12 ಗಂಟೆಗೆ ಸರಿಯಾಗಿ. ಮೊಸರನ್ನ, ಪಾಪಡ್ ಅಥವಾ ರೋಟಿ ಪನ್ನೀರ್ ಸಬ್ಜಿ ಅಥವಾ ದಾಲ್.

ಮೂರನೇ ಕೋರ್ಸ್: 2- 3 ಗಂಟೆ ಅವಧಿಯಲ್ಲಿ. ಒಂದು ಬೌಲ್‌ನಷ್ಟು ಪಪ್ಪಾಯಿ ಹಣ್ಣುಗಳ ಹೋಳು ಅಥವಾ ಒಂದು ಮುಷ್ಟಿ ಕಡಲೆಬೀಜ ಅಥವಾ ಚೀಸ್‌ನ ತುಣುಕು ಅಥವಾ ಒಂದು ತುಣುಕು ಬೆಣ್ಣೆ

ನಾಲ್ಕನೇ ಕೋರ್ಸ್: 5-6 ಗಂಟೆ ಅವಧಿಯಲ್ಲಿ. ಮ್ಯಾಂಗೋ ಮಿಲ್ಕ್‌ಶೇಕ್ ಅಥವಾ ಒಂದು ಬೌಲ್‌ನಷ್ಟು ಲಿಚೀ ಹಣ್ಣು ಅಥವಾ ಕೊಂಚ ಚಿವಡಾ.

ಐದನೇ ಕೋರ್ಸ್: ರಾತ್ರಿ 8 ಗಂಟೆಗೆ. ವೆಜ್ ಪಲಾವ್‌ ಮತ್ತು ರಾಯಿತ ಅಥವಾ ಪಾಲಕ್ ಅಥವಾ ಪುದಿನಾ ರೋಟಿ ಮತ್ತು ಬೂಂದಿ ರಾಯಿತಾ ಅಥವಾ ದಾಲ್‌ ರೈಸ್ ಮತ್ತು ಸಬ್ಜಿ.

ರಾತ್ರಿ ಬೆಡ್‌ಟೈಮ್‌ನಲ್ಲಿ: ಒಂದು ಕಪ್ ಅರಿಶಿನ ಹಾಲು, ಒಣಹಣ್ಣು.

ಮಧ್ಯೆ ಹಸಿವಾದರೆ: ಫ್ರೆಶ್ ಹಣ್ಣುಗಳು, ಒಣಹಣ್ಣು, ಮೊಸರು, ನೆನೆಸಿದ ಕಾಳು, ನಿಂಬು ಶರಬತ್, ಎಳನೀರು, ಮಜ್ಜಿಗೆನೀರು ಇತ್ಯಾದಿ.

ಇದಲ್ಲದೆ ಕರೀನಾ ಕಪೂರ್ ಒಂದಿಷ್ಟು ನಿಗದಿತ ವ್ಯಾಯಾಮಗಳನ್ನೂ ಮಾಡುತ್ತಾರೆ. ಗರ್ಭಿಣಿಗೆ ಅಗತ್ಯವಾದ, ಆದರೆ ಹೊಟ್ಟೆಯ ಮೇಲೆ ಹೆಚ್ಚಿನ ಭಾರ ಅಥವಾ ಒತ್ತಡ ಬೀಳದ ವ್ಯಾಯಾಮಗಳನ್ನು ಅವರ ಡಯಟಿಶಿಯನ್, ಫಿಸಿಶಿಯನ್ ಸೂಚಿಸಿದ್ದಾರೆ. ಅವುಗಳನ್ನು ಮಾಡುತ್ತಾರೆ.

ಶಾರುಕ್, ಸಲ್ಮಾನ್, ಸನ್ನಿ ಲಿಯೋನ್ ವಿಚಿತ್ರ ಖಯಾಲಿಗಳು ನಿಮಗೆ ಗೊತ್ತಾ? ...

ವಾರಾದ ವ್ಯಾಯಾಮ ರೊಟೀನ್:

ಡೇ 1: 20 ನಿಮಿಷ ಟ್ರೆಡ್‌ಮಿಲ್

ಡೇ 2: ಸರಳ ಯೋಗಾಭ್ಯಾಸ

ಡೇ 3: ವಿರಾಮ

ಡೇ 4: ಮನೆಯಲ್ಲಿ ಮಾಡುವ ಮನೆಕೆಲಸದ ವ್ಯಾಯಾಮಗಳು

ಡೇ 5: 40 ನಿಮಿಷದ ಟ್ರೆಡ್‌ಮಿಲ್

ಡೇ 6: ಯೋಗಾಸನಗಳು, ಕೋರ್ ವರ್ಕ್ಔಟ್

ಡೇ 7: ವಿರಾಮ

ಅಸೂಯೆ ಕಾರಣದಿಂದ ಹೃತಿಕ್‌ರನ್ನು ದೂರ ಇಟ್ಟ ಶಾರುಖ್ ಖಾನ್‌! ...

ಕರೀನಾ ಸಾಕಷ್ಟು ಕಾರ್ಬೊಹೈಡ್ರೇಟ್ ಅನ್ನೂ ಸೇವಿಸುತ್ತಾರೆ. ಗರ್ಭಿಣಿ ಒಳ್ಳೆಯ ಶೇಪ್ ಹಾಗೂ ಆರೋಗ್ಯದಲ್ಲಿರಲು ಈ ಕಾರ್ಬೋಗಳು ನೆರವಾಗುತ್ತವೆ. ಕೆಲವರು ಕಾರ್ಬೊಹೈಡ್ರೇಟನ್ನು ತಿರಸ್ಕರಿಸುವುದು ಉಂಟು. ಆದರೆ ಆರೋಗ್ಯಕರ ಜೀವನಕ್ಕೆ ರೈಸ್ ತುಂಬಾ ಅಗತ್ಯ ಎಂಬುದನ್ನು ಕರೀನಾ ಅರಿತಿದ್ದಾರೆ. ಮೊದಲ ಬಾರಿ ಆಕೆ ಗರ್ಭಿಣಿಯಾಗಿದ್ದಾಗ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಈಗಲೂ ಅವುಗಳನ್ನು ತೆಗೆದುಕೊಳ್ಳುತ್ತಾರೆ.

20ರ ಹರೆಯದಲ್ಲಿ ತುಂಬಾ ಬಾರಿ ಕರೀನಾ ಡಯಟ್‌ ಅನ್ನು ಬದಲಾಯಿಸಿದ್ದಾರೆ ನೀರಿನ ಡಯಟ್, ಕೆಟೋ ಡಯಟ್, ಕಾಂಟಿನೆಂಟಲ್ ಡಯಟ್‌ ಹೀಗೆ ವಾರಕ್ಕೊಮ್ಮೆ ಫಿಟ್‌ನೆಸ್‌ ಹುಚ್ಚಿನಿಂದಾಗಿ ತಮ್ಮ ಡಯಟ್ ಬದಲಾಯಿಸುತ್ತಿದ್ದರು. ಆದರೆ ಅದು ಸರಿಯಲ್ಲ ಎಂಬುದನ್ನು ಅವರು ಈಗ ತಿಳಿದಿದ್ದಾರೆ. ತಮ್ಮ ಈ ಡಯಟ್‌ ಎಲ್ಲರಿಗೂ ಹೊಂದಲಾರದು; ಪ್ರತಿ ವ್ಯಕ್ತಿಗೂ ಅವರದೇ ಡಯಟ್ ರೂಪಿಸಿಕೊಳ್ಬೇಕು ಎಂಬುದನ್ನು ಹೇಳಲು ಅವರು ಮರೆಯುವುದಿಲ್ಲ.

12 ವರ್ಷಕ್ಕೇ ವರ್ಜಿನಿಟಿ ಕಳ್ಕೊಂಡಿದ್ದೆ ಎಂದ ರಣವೀರ್ ಸಿಂಗ್ ...

 

 

Follow Us:
Download App:
  • android
  • ios