Asianet Suvarna News Asianet Suvarna News

National Award ಗೆದ್ದ ಸ್ಟಾರ್ ನಟ, ನಟಿಯರು ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ ಗೊತ್ತಾ?

ಕಲೆಗೆ ವಿದ್ಯೆಗೆ ಸಂಬಂದವಿರುವುದಿಲ್ಲ. ಆದರೆ ವಿದ್ಯೆಯ ಜೊತೆಗೆ ಕಲಾಸಕ್ತಿ ಇದ್ದರೆ ಅದೂ ಕಲಾವಿದರಿಗೆ ಇನ್ನಷ್ಟು ಭೂಷಣ ಅನ್ನೋದಂತೂ ನಿಜ.69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಇತ್ತೀಚೆಗೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಿತು.

Do you know how much education the national award winning star actors and actresses have done gvd
Author
First Published Oct 22, 2023, 12:17 PM IST

ಕಲೆಗೆ ವಿದ್ಯೆಗೆ ಸಂಬಂದವಿರುವುದಿಲ್ಲ. ಆದರೆ ವಿದ್ಯೆಯ ಜೊತೆಗೆ ಕಲಾಸಕ್ತಿ ಇದ್ದರೆ ಅದೂ ಕಲಾವಿದರಿಗೆ ಇನ್ನಷ್ಟು ಭೂಷಣ ಅನ್ನೋದಂತೂ ನಿಜ.69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಇತ್ತೀಚೆಗೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಿತು. ವಿಭಿನ್ನ ಪಾತ್ರಗಳು ಮತ್ತು ಸಿನಿಮಾಗಳಿಗಾಗಿ ಚಲನಚಿತ್ರ ತಾರೆಯರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ಪ್ರಸಿದ್ಧ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪಡೆದ ನಟರಲ್ಲಿ ರಕ್ಷಿತ್ ಶೆಟ್ಟಿ, ಕಿರಣ್ ರಾಜ್ ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸನೋನ್ ಕೂಡ ಸೇರಿದ್ದಾರೆ. ಈ ಸ್ಟಾರ್ಸ್ ಎಲ್ಲಿಂದ ಬಂದವರು ಮತ್ತು ಅವರು ಎಷ್ಟು ವಿದ್ಯಾವಂತರು ಗೊತ್ತಾ? ಆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.

ಚಾರ್ಲಿ ಸಿನಿಮಾ ನಿರ್ಮಾಣಕ್ಕಾಗಿ ಅತ್ತಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಹಾಗೂ ಸಿನಿಮಾ ನಿರ್ದೇಶನಕ್ಕಾಗಿ ಕಿರಣ್ ರಾಜ್ ಗೆ ನ್ಯಾಷನಲ್ ಅವಾರ್ಡ್ ಬಂತು. ರಕ್ಷಿತ್ ಶೆಟ್ಟಿ. ಉಡುಪಿಯಲ್ಲಿ 6 ಜೂನ್ 1983 ರಂದು ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ಜನಿಸಿದರು .  ತಮ್ಮ ಶಾಲಾ ಶಿಕ್ಷಣವನ್ನು ತಮ್ಮ ಊರಿನಲ್ಲಿ ಮುಗಿಸಿದರು ಸಿನಿ ಬದುಕು ಕಟ್ಟಿಕೊಳ್ಳುವ ಮೊದಲು ಕಾರ್ಕಳದ ನಿಟ್ಟೆಯ NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು . ಪದವಿ ಪಡೆದ ನಂತರ, ಅವರು ರಂಗಭೂಮಿಯಲ್ಲಿ ಪ್ರಾರಂಭಿಸುವ ಮೊದಲು ನಟರಾಗುವ ಮೊದಲು ಎರಡು ವರ್ಷಗಳ ಕಾಲ ಸಾಫ್ಟ್ವೇರ್ ವೃತ್ತಿಪರರಾಗಿ ಕೆಲಸ ಮಾಡಿದರು. 

ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅಲ್ಲು ಅರ್ಜುನ್ ತಮ್ಮ ಶಾಲಾ ಶಿಕ್ಷಣವನ್ನು ಸೇಂಟ್. ಪ್ಯಾಟ್ರಿಕ್ ಸ್ಕೂಲ್, ಚೆನ್ನೈ, ನಂತರ ಅವರು ಹೈದರಾಬಾದ್ನ ಎಂಎಸ್ಆರ್ ಕಾಲೇಜಿನಲ್ಲಿ ಓದಿದ್ದಾರೆ. ಅವರು ಬಿಬಿಎ ಪದವಿಯನ್ನು ಹೊಂದಿದ್ದಾರೆ. ನಟಿ ಆಲಿಯಾ ಭಟ್ 'ಗಂಗೂಬಾಯಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತನ್ನ ವಿದ್ಯಾಭ್ಯಾಸದಲ್ಲಿ ಅಂಥಾ ಉತ್ತಮ ಸಾಧನೆ ಮಾಡಿಲ್ಲ. 10ನೇ ತರಗತಿಯಲ್ಲಿ ಶೇ.71 ಅಂಕ ಪಡೆದಿದ್ದ ಅವರು 12 ನೇ ತರಗತಿಯನ್ನು ಬಿಟ್ಟು ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಂಬೈನ ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ಮಾಡಿದರು. ಡಿಗ್ರೀ ಮಾಡಿಲ್ಲ.

ಶಾರ್ಟ್ ಫ್ರಾಕ್ ಧರಿಸಿ ಟೆನ್ನಿಸ್ ಕಣಕ್ಕಿಳಿದ Pooja Hegde: ನಿಮಗೆ Pakistan ಹಸಿರು ಬಣ್ಣ ಇಷ್ಟನಾ ಎಂದ ಫ್ಯಾನ್ಸ್!

'ಮಿಮಿ' ಚಿತ್ರಕ್ಕಾಗಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಕೃತಿ ಹುಟ್ಟಿದ್ದು ದೆಹಲಿಯಲ್ಲಿ. ಅವರ ತಂದೆ ರಾಹುಲ್ ಸನೋನ್ ಚಾರ್ಟರ್ಡ್ ಅಕೌಂಟೆಂಟ್ ಮತ್ತು ತಾಯಿ ಗೀತಾ ಸನೋನ್ DU ನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಕೃತಿ ಆರ್ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ಓದಿದ್ದಾರೆ. ಪದವಿಯಲ್ಲಿ ತಂತ್ರಜ್ಞಾನ ಪದವಿಯನ್ನು ಪಡೆದರು. ನೋಯ್ಡಾದ ಜೇಪೀ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್. 2014 ರಲ್ಲಿ ತೆಲುಗು ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

Follow Us:
Download App:
  • android
  • ios