ಬಾಲಿವುಡ್ ನಟಿ ನೇಹಾ ಧುಪಿಯಾ ಚಮಚಾ ಗಿರಿಯಿಂದಲೇ ಅವಕಾಶ ಪಡೆದುಕೊಳ್ತಿದ್ದಾರೆ ಎಂದು ಹಿರಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಹಲವು ಟಾಕ್‌ ಶೋಗಳಲ್ಲಿ ಮಿಂಚುತ್ತಿರುವ ನೇಹಾ ಬಗ್ಗೆ ಸುಚಿತ್ರಾ ಟ್ವೀಟ್ ದಾಳಿ ನಡೆಸಿದ್ದಾರೆ.

ನೇಹಾ ಧುಪಿಯಾಗೆ ಚಮಚಾಗಿರಿಯಿಂದಲೇ ಇಷ್ಟು ಅವಕಾಶಗಳು ಸಕ್ತಿವೆ ಎಂದು ಆಕೆ ಟ್ವೀಟ್ ಮಾಡಿದ್ದು, ಇದು ನೇಹಾ ಧುಪಿಯಾ ಓದುವ ಅತ್ಯಂತ ಕೆಟ್ಟ ಟ್ವೀಟ್ ಆಗಿರಲಿದೆ ಎಂದು ಹೇಳಲಾಗುತ್ತಿದೆ.

ಫೇಮಸ್ ರ‍್ಯಾಪರ್‌ನ ಸೋಷಿಯಲ್ ಮೀಡಿಯಾ ಹಗರಣ..! 72 ಲಕ್ಷ ಕೊಟ್ಟು 7.2 ಕೋಟಿ ವ್ಯೂಸ್ ಖರೀದಿ

ನೇಹಾ ಧುಪಿಯಾಗೆ ನಿರ್ಮಾಪಕ ಕರಣ್‌ ಜೊತೆಗಿನ ಔದ್ಯೋಗಿಕವಲ್ಲದ ಸಂಬಂಧದ ಬಗ್ಗೆ ಮಾತನಾಡಿದ ಸುಚಿತ್ರಾ, ಜನ ಬಾಲಿವುಡ್ ನೆಪೊಟಿಸಂ ನೋಡಿ ಸಿಟ್ಟಿಗೇಳುವುದಲ್ಲ, ಚಮಚಾಗಿರಿ ನೋಡಿ. ಕರಣ್ ಜೋಹರ್‌ನ ಹೊಸ ಗೆಳತಿ, ಫಿಮಿನಾ ಮಿಸ್‌ ಇಂಡಿಯಾ 2002 ಎಂಬುದನ್ನು ಹೊರತುಪಡಿಸಿ ಆಕೆ ಸಡನ್ ಆಗಿ ಷ್ಟೊಂದು ಅವಕಾಶ ಹೇಗೆ ಸಿಕ್ಕವು..? ಆಕೆ ಸ್ಟಾರ್ ಕಿಡ್ ಅಲ್ಲ, ಯಾರ ಸಂಬಂಧಿಯೂ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೇಹಾ ಧುಪಿಯಾ, ಪ್ರೌಡ್‌ ಟು ಬಿ ಸೆಲ್ಫ್‌ ಮೇಡ್ ಎಂದು ಬರೆದು, ಬಹಳ ವರ್ಷಗಳ ಸ್ನೇಹವನ್ನು ಹಾಳು ಮಾಡುವಂತಹ ಬಹಳ ಕೆಟ್ಟ ಟ್ವೀಟ್ ಇದು. ನಾನು ಕೆಟ್ಟ ಟ್ವೀಟ್‌ಗಳನ್ನು ಬಹಳಷ್ಟು ಓದಿದ್ದೇನೆ ಎಂದಿದ್ದಾರೆ.

ಬಾಲಿವುಡ್ ನಟ ಸಂಜಯ್ ದತ್ ಆರೋಗ್ಯದಲ್ಲಿ ಏರುಪೇರು; ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ!

ಬಾಲಿವುಡ್ ಫೇಮಸ್‌ ಶೋ ರೋಡೀಸ್‌ನಲ್ಲಿ ಸ್ಪರ್ಧಿಗೆ ಛೀಮಾರಿ ಹಾಕಿದ್ದ ನೇಹಾ ಟ್ರೋಲ್‌ಗೊಳಗಾಗಿದ್ದರು. ಚೀಟಿಂಗ್ ಮಾಡಿದ ಗರ್ಲ್‌ಫ್ರೆಂಡ್‌ಗೆ ಸ್ಪರ್ಧಿ ಹೊಡೆದಿದ್ದ. ನೆಟ್ಟಿಗರು ಸಾಕಷ್ಟು ಟ್ರೋಲ್ ಮಾಡಿದಾಗಲೂ ಇದಕ್ಕೆ ಉತ್ತರಿಸಿದ ನೇಹಾ, ಮೋಸವನ್ನು ನಾನು ಸಹಿಸುವುದಿಲ್ಲ, ಹಾಗೆಂದು ಮಹಿಳೆಯ ವಿರುದ್ಧ ದೈಹಿಕವಾಗಿ ಹಿಂಸಿಸುವುದನ್ನೂ ಸಹಿಸುವುದಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು.