ಮುಂಬೈ(ಆ.08): ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ, ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡ ತಕ್ಷಣವೇ ಮಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ತೀವ್ರ ನಿಗಾ ಘಟಕದಲ್ಲಿ ಸಂಜಯ್ ದತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. 

ತೆಲುಗು-ತಮಿಳು ಕೆಜಿಎಫ್‌-2ನಲ್ಲಿ ಸಂಜಯ್ ದತ್ ಇರುವುದಿಲ್ವಾ?

61 ವರ್ಷದ ಸಂಜಯ್ ದತ್ ಕಳೆದವಾರ(ಜು.29) ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಮುಂಬೈ ನಿವಾಸದಲ್ಲಿದ್ದ ಸಂಜಯ್ ದತ್‌ಗೆ ಎದೆಭಾಗದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.  ಹೀಗಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜಯ್ ದತ್‌ಗೆ ಕೊರೋನಾ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಲಾಗಿದ್ದು, ಇದರಲ್ಲಿ ನೆಗಟೀವ್ ವರದಿ ಬಂದಿದೆ. ಆದರೆ  RT-PCR ಪರೀಕ್ಷೆಗೆ ಮಾದರಿ ಸಂಗ್ರಹಿಸಿ ಕಳುಹಿಸಲಾಗಿದೆ.

ಕೊರೋನಾ ವಾರ್ಡ್‌ನಿಂದ ಸಂಜಯ್ ದತ್ ಅವರನ್ನು ದೂರವಿಡಲಾಗಿದೆ. ಲೀಲಾವತಿ ಆಸ್ಪತ್ರೆಯ ಜನರಲ್ ಇಂಟೆನ್ಸೀವ್ ಯುನಿಟ್‌ನಲ್ಲಿ ಸಂಜಯ್ ದತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಜಯ್ ದತ್ ಆರೋಗ್ಯ ತಪಾಸಣೆ ಮಾಡುತ್ತಿರುವ ಜಲೀಲ್ ಪಾರ್ಕರ್, ದತ್ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿ ರವಿಶಂಕರ್ ದತ್ ಆರೋಗ್ಯ ಕುರಿತು ಮೇಲ್ವಿಚಾರಣೆ ನಡೆಸಿದ್ದಾರೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ದತ್ ಆರೋಗ್ಯದಲ್ಲಿ ಆಮ್ಮಜನಕ ಪ್ರಮಾಣ ಕಡಿಮೆಯಾಗಲು ಕಾರಣ, ಉಸಿರಾಟ ಸಮಸ್ಯೆ ಉಲ್ಬಣಿಸಲು ಕಾರಣ ಕುರಿತು ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ.