ಧನುಷ್, ಸಿಂಬು ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಸ್ಗೆ ಚಿತ್ರರಂಗದಿಂದಲೇ ಬ್ಯಾನ್?
ಧನುಷ್, ಸಿಂಬು ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗೆ ಚಿತ್ರರಂಗದಿಂದಲೇ ಬ್ಯಾನ್! ಅಷ್ಟಕ್ಕೂ ಆಗಿದ್ದೇನು?

ಕಾಲಿವುಡ್‌ನ ನಾಲ್ವರು ಖ್ಯಾತ ಹೀರೋಗಳಿಗೆ ಬ್ಯಾನ್ ಬಿಸಿ ತಟ್ಟಿದೆ. ಬಹು ಬೇಡಿಕೆಯ ಟಾಪ್ಮೋಸ್ಟ್ ಸ್ಥಾನದಲ್ಲಿರುವ ಧನುಷ್ (Dhanush), ವಿಶಾಲ್, ಸಿಂಬು ಮತ್ತು ಅಥರ್ವ ಅವರಿಗೆ ರೆಡ್ ಕಾರ್ಡ್ ನೀಡುವ ಮೂಲಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರ ಅರ್ಥ ಯಾವುದೇ ನಿರ್ಮಾಪಕರು ಈ ಹೀರೋಗಳನ್ನು ಹಾಕಿಕೊಂಡು ಇನ್ನುಮುಂದೆ ಸಿನಿಮಾ ಮಾಡುವಂತಿಲ್ಲ! ಹೌದು. ಇಂಥದ್ದೊಂದು ಆಘಾತಕಾರಿ ನಿರ್ಧಾರವನ್ನು ಸಂಘ ತೆಗೆದುಕೊಂಡಿದೆ. ಕಳೆದ 13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದಾಗಿ ನಟರು ನಿರ್ಮಾಪಕರ ಮಂಡಳಿ ಮುಂದಿನ ಸೂಚನೆ ನೀಡುವವರೆಗೂ ಯಾವುದೇ ನಿರ್ಮಾಣ ಸಂಸ್ಥೆಯು ಅವರೊಂದಿಗೆ ಸಿನಿಮಾಗಳನ್ನು ಮಾಡುವಂತಿಲ್ಲ. ಇನ್ನೊಂದರ್ಥದಲ್ಲಿ ಇವರನ್ನು ಬ್ಯಾನ್ ಮಾಡಲಾಗಿದೆ ಎನ್ನುವುದು.
ಅಷ್ಟಕ್ಕೂ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ ಹಾಗೂ ಕಲಾವಿದರ ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು ಈ ನಾಲ್ವರು ನಟರ ಮೇಲೆ ಆರೋಪ ಮಾಡಿದ್ದರು. ಇದರಿಂದ ಈ ನಿರ್ಧಾರ ಎನ್ನಲಾಗಿದೆ. ನಟ ಸಿಂಬು ಅವರ ಬಗ್ಗೆ ಹೇಳುವುದಾದರೆ, ಇವರು ನಿಗದಿತ ಸಮಯಕ್ಕೆ ಚಿತ್ರದ ಚಿತ್ರೀಕರಣಕ್ಕೆ ಬಾರದೆ ನಿರ್ಮಾಪಕರಿಗೆ ನಷ್ಟ ಉಂಟು ಮಾಡಿದ್ದಾರೆ ಎನ್ನುವ ಆರೋಪವಿದೆ. ನಿರ್ಮಾಪಕರ ಸಂಘದಿಂದ ನಟ ಸಿಂಬು ರೆಡ್ ಕಾರ್ಡ್ ಪಡೆದಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಅವರಿಗೆ ರೆಡ್ ಕಾರ್ಡ್ ನೀಡಲಾಗಿತ್ತು. ಆ ಕಾರಣಕ್ಕಾಗಿ ಅವರು ಕೆಲ ಸಮಯ ಸಿನಿಮಾಗಳಿಂದ ದೂರ ಉಳಿಯಬೇಕಾಯಿತು. ಇದೀಗ ಮತ್ತೊಮ್ಮೆ ಅವರಿಗೆ ರೆಡ್ ಕಾರ್ಡ್ ನೀಡಲಾಗಿದೆ.
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಬೇಬಿ' ತಂಡಕ್ಕೆ ಡ್ರಗ್ಸ್ ಕೇಸ್ ಸಂಕಷ್ಟ: ಟಾಲಿವುಡ್ ತಲ್ಲಣ!
ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಅವರಿಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್ಗೆ ನೀಡಿದೆಯಂತೆ. ಈಚೆಗಷ್ಟೇ ಧನುಷ್ ತಮ್ಮ 50ನೇ ಸಿನಿಮಾವನ್ನು ಘೋಷಿಸಿದ್ದು, ಅದಕ್ಕೆ ಅವರೇ ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ.
ನಟ ವಿಶಾಲ್ (Vishal) ಅವರು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಹಲವು ಆರೋಪಗಳನ್ನು ಎದುರಿಸಿದ್ದರು. ಹಾಲಿ ಇವರು, ಕಲಾವಿದರ ಸಂಘದ ಕಾರ್ಯದರ್ಶಿಯಾಗಿದ್ದಾರೆ. ಅವರು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ ಎಂದು ಆರೋಪಿಸಲಾಗಿದೆ. ಆ ಕಾರಣಕ್ಕೆ ಅವರಿಗೆ ರೆಡ್ ಕಾರ್ಡ್ ನೀಡಲಾಗಿದೆ. ಇದರ ಮಧ್ಯೆಯೇ ವಿಶಾಲ್ ನಟನಯೆ ‘ಮಾರ್ಕ್ ಆ್ಯಂಟನಿ’ ಸಿನಿಮಾ ಸೆ.15ರಂದು ತೆರೆಗೆ ಬರುತ್ತಿದೆ.
ಮಾಜಿ ಹಿಂದೂ ಪತ್ನಿಯರ ಜೊತೆ ಆಮೀರ್ ಸಂಬಂಧ ಹೇಗಿದೆ? ಮೌನ ಮುರಿದ ಕಿರಣ್ ರಾವ್