Asianet Suvarna News Asianet Suvarna News

ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ 'ಬೇಬಿ' ತಂಡಕ್ಕೆ ಡ್ರಗ್ಸ್​ ಕೇಸ್ ಸಂಕಷ್ಟ​: ಟಾಲಿವುಡ್​ ತಲ್ಲಣ!

ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ 'ಬೇಬಿ' ತಂಡಕ್ಕೆ ಡ್ರಗ್ಸ್​ ಕೇಸ್ ಸಂಕಷ್ಟ​ ಎದುರಾಗಿದ್ದು, ಟಾಲಿವುಡ್​ ತಲ್ಲಣಗೊಂಡಿದೆ. ಏನಿದು ಘಟನೆ?
 

Hyderabad Police issues notices to makers of Baby movie over drug scene suc
Author
First Published Sep 15, 2023, 5:07 PM IST

ಡ್ರಗ್ಸ್​ ಕೇಸ್​ ಮತ್ತೊಮ್ಮೆ ಸದ್ದು ಮಾಡುತ್ತಿದೆ. ನಟ ಸುಶಾಂತ್​ ಸಿಂಗ್​ (Sushanth Singh) ಅವರ ನಿಗೂಢ ಸಾವಿನ ಬಳಿಕ ಬಾಲಿವುಡ್​ ಸೇರಿದಂತೆ ಸಿನಿ ಇಂಡಸ್ಟ್ರಿ ಹಾಗೂ ಇತರೆಡೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಡ್ರಗ್ಸ್​ ಪ್ರಕರಣ ತಲ್ಲಣವನ್ನೇ ಸೃಷ್ಟಿಸಿತ್ತು. ಈ ಡ್ರಗ್ಸ್​ ಕೇಸ್​ನಲ್ಲಿ ಖ್ಯಾತನಾಮ ನಟ-ನಟಿಯರೂ ಸಿಲುಕಿಕೊಂಡಿದ್ದರು.  ಕೆಲವರ ಮೇಲೆ ಇನ್ನೂ ಕೇಸ್​ ನಡೆಯುತ್ತಿದ್ದರೆ, ಕೆಲವರು ಜಾಮೀನಿನ ಮೇಲೆ ಹೊರಕ್ಕಿದ್ದಾರೆ. ಇಷ್ಟೆಲ್ಲಾ ಡ್ರಗ್ಸ್​ ಹಾವಳಿ ಆಗುತ್ತಿದ್ದರೂ, ಕೆಲವು ಸಿನಿಮಾಗಳು ಮಾತ್ರ ಇಂಥ ಅಪರಾಧ ಕೃತ್ಯಗಳನ್ನು ಅತಿ ವಿಜೃಂಭಿಸಿ ತೋರಿಸುತ್ತಿವೆ. ಹೀರೋ ಎನಿಸಿಕೊಂಡವರು ಮಚ್ಚು, ಲಾಂಗು ಹಿಡಿದು ಸಿನಿಮಾ ಪೂರ್ತಿ ರಕ್ತಪಾತ ಹರಿಸಿದರೆ ಅಂಥ ಚಿತ್ರಗಳು ಬ್ಲಾಕ್​ಬಸ್ಟರ್​ ಆಗುತ್ತಿದ್ದು, ಆ ನಾಯಕನ ಅಭಿಮಾನಿಗಳು ಶಿಳ್ಳೆ ಹೊಡೆದು ಹುರಿದುಂಬಿಸುತ್ತಾರೆ. ಇಂಥ ಕೆಟ್ಟ ದೃಶ್ಯಗಳಿಂದ ಯುವ ಜನರ ಮನಸ್ಸು ಇಂಥದ್ದೇ ಘನಘೋರ ಕೃತ್ಯಗಳಿಗೆ ಇಳಿಯುತ್ತಿವೆ, ತಮ್ಮ ನೆಚ್ಚಿನ ನಾಯಕನನ್ನೇ ಅನುಸರಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಉದಾಹರಣೆಗಳು ಸಾಕಷ್ಟು ಆಗಿದ್ದರೂ, ಜನರು ಅದನ್ನೇ ಬಯಸುವುದು ಎಂದು ಅದರ ಆಧಾರದ ಮೇಲೆಯೇ ಸರಣಿ ಸರಣಿ ಸಿನಿಮಾಗಳು ಬರುವುದು ಉಂಟು.

ಈಗ ಅಂಥದ್ದೇ ಸಿನಿಮಾ ಮಾಡಲು ಹೋಗಿರುವ ಟಾಲಿವುಡ್​ನ ಬೇಬಿ (Baby) ತಂಡಕ್ಕೂ ಸಂಕಷ್ಟ ಎದುರಾಗಿದೆ. ಕಳೆದ ಜುಲೈ 13ರಂದು ಬಿಡುಗಡೆಯಾಗಿರುವ ಈ ಚಿತ್ರವೀಗ ಡ್ರಗ್ಸ್​ ಕೇಸ್​ ಸೀನ್​ನಲ್ಲಿ ತಗ್ಲಾಕ್ಕೊಂಡಿದೆ. ಬಾಕ್ಸ್​ ಆಫೀಸ್​ನಲ್ಲಿ ಸುಮಾರು 100 ಕೋಟಿ ಬಾಚಿಕೊಂಡಿರುವ ಬೇಬಿ ತಂಡದ ವಿರುದ್ಧ ಪೊಲೀಸ್ ಕಮಿಷನರ್​ ಆಕ್ರೋಶ ವ್ಯಕ್ತಪಡಿಸಿದ್ದು, ನೋಟಿಸ್​ ನೀಡಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಟಾಲಿವುಡ್​  ನಿರ್ದೇಶಕ ಪುರಿ ಜಗನ್ನಾಥ್, ನಟರಾದ ರವಿತೇಜ ಮತ್ತು ನವದೀಪ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.  ಈ ಪ್ರಕರಣದಲ್ಲಿ ನಾಯಕ ನವದೀಪ್ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.  ಮಾದಾಪುರ ಡ್ರಗ್ಸ್ ಪ್ರಕರಣದಲ್ಲಿ ನಾಯಕ ನವದೀಪ್ ಸಂಪರ್ಕ ಹೊಂದಿರುವುದು ತಿಳಿದಿತ್ತು.  

ಶಾರುಖ್​ಗೆ ಚಾಟಿ ಬೀಸಿದ್ದ ಎನ್​ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್​ ರಿಲೀಸ್​ ಬೆನ್ನಲ್ಲೇ ಕ್ಲೀನ್​ ಚಿಟ್​

ಪರಿಸ್ಥಿತಿ ಹೀಗಿರುವಾಗ ಚಿತ್ರದಲ್ಲಿಯೇ ಡ್ರಗ್ಸ್​ ಕೇಸ್​ (Drugs case) ತೋರಿಸಿರುವುದು ಅಪರಾಧ ಎನ್ನುವುದು ಪೊಲೀಸ್​ ಕಮಿಷನರ್​ ಸಿಪಿ ಸಿವಿ ಆನಂದ್ ಅವರ ಮಾತು. ಅಷ್ಟಕ್ಕೂ ಅವರು, ಈ ರೀತಿ ನೋಟಿಸ್​ ಜಾರಿ ಮಾಡಲು ಕಾರಣವೂ ಇದೆ. ಅದೇನೆಂದರೆ,  ಪೊಲೀಸರು ಕೆಲ ದಿನಗಳ ಹಿಂದೆ ಚೆನ್ನೈನ  ಫ್ರೆಶ್ ಲಿವಿಂಗ್ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಿದಾಗ, ಭೇಟಿ ಬೇಬಿ ಚಿತ್ರದಲ್ಲಿ ತೋರಿಸುರವ ಡ್ರಗ್ಸ್ ಪಾರ್ಟಿಯ ರೀತಿಯಲ್ಲಿಯೇ ಅಲ್ಲಿ ಡ್ರಗ್ಸ್​ ನಡೆಯುತ್ತಿತ್ತು. ಬೇಬಿ ಚಿತ್ರ ವೀಕ್ಷಿಸಿದ ಆರೋಪಿಗಳು ಈ ರೀತಿಯ ಡ್ರಗ್ ಪಾರ್ಟಿ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ. ಆದ್ದರಿಂದ ನೋಟಿಸ್​ ಜಾರಿಯಾಗಿದೆ.

ಇದು ಟಾಲಿವುಡ್​ನಲ್ಲಿ ತಲ್ಲಣ ಸೃಷ್ಟಿಸಿದೆ. ಸೆನ್ಸಾರ್​ ಬೋರ್ಡ್​ (Sensor board) ಅನುಮತಿ ನೀಡಿರುವಾಗ ಪೊಲೀಸರು ಬಂದು ದಾಳಿ ಮಾಡುವುದು ಸರಿಯಲ್ಲ ಎಂದು ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಅಂದಹಾಗೆ ಇ ಚಿತ್ರದಲ್ಲಿ  ಆನಂದ್ ದೇವರಕೊಂಡ, ವಿರಾಜ್ ಅಶ್ವಿನ್ ಮತ್ತು ವೈಷ್ಣವಿ ಚೈತನ್ಯ ಅಭಿನಯಿಸಿದ್ದಾರೆ.  ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಕಲರ್ ಫೋಟೋ ನಿರ್ಮಿಸಿದ ಸಾಯಿ ರಾಜೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎಸ್‌ಕೆಎನ್‌ ನಿರ್ಮಿಸಿದ್ದಾರೆ.

ಶಾರುಖ್​ ಪುತ್ರನ ಅರೆಸ್ಟ್​ ಮಾಡಿದ ವಾಂಖೆಡೆ ಶರ್ಟ್​ನಲ್ಲಿ ರಕ್ತದ ಕಲೆ: ಶಾಕಿಂಗ್​ ಸತ್ಯ ಬಹಿರಂಗ

Follow Us:
Download App:
  • android
  • ios