Asianet Suvarna News Asianet Suvarna News

ಮೊಘಲ ದೊರೆಗಳ ಹೊಗಳಿದ ನಿರ್ದೇಶಕನ ತಾಲೀಬಾನಿ ಎಂದ ನೆಟ್ಟಿಗರು

  • ಮೊಘಲ ದೊರೆಗಳ ಹೊಗಳಿದ ನಿರ್ದೇಶಕ ಹಿಗ್ಗಾಮುಗ್ಗ ಟ್ರೋಲ್
  • ತಾಲೀಬಾನಿ ಎಂದು ಕರೆದು ಟ್ರೋಲ್ ಮಾಡಿದ ಜನ
Director Kabir Khan Called Talibani For Saying Mughals Were The Original Nation Builders dpl
Author
Bangalore, First Published Aug 26, 2021, 9:05 PM IST
  • Facebook
  • Twitter
  • Whatsapp

ಯಾವುದೇ ಮಾತನ್ನು ಆಡದೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ನಿರ್ದೇಶಕ ಕಬೀರ್ ಖಾನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮುಸ್ಲಿಂ ಆಡಳಿತಗಾರರನ್ನು ಹೊಗಳಿದ್ದಾರೆ. ಬಾಲಿವುಡ್ ಮೊಘಲ ಆಡಳಿತಗಾರರನ್ನು ರಾಕ್ಷಸರನ್ನಾಗಿ ಬಿಂಬಿಸುತ್ತಿರುವುದಕ್ಕೆ ತನಗೆ ಬೇಸರವಿದೆ ಎಂದು ಅವರು ಹೇಳಿದ್ದಾರೆ.

ಮೊಘಲರು ಮೂಲ ರಾಷ್ಟ್ರ ನಿರ್ಮಿಸಿದವರು ಎಂದು ಹೊಗಳಿದ್ದಾರೆ. ಜನರು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಬಹುದು, ಆದರೆ ಸಿನಿಮಾ ನಿರ್ದೇಶಕರು ಒಂದು ವಿಷಯವನ್ನು ಹೇಳುವ ಮೊದಲು ಸಂಶೋಧನೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರತಿಷ್ಠಿತ ಕಂಪನಿ CEOಗಳಿಗಿಂತ ಹೆಚ್ಚು ಸ್ಯಾಲರಿ ತಗೊಳ್ತಾರೆ ಬಿಗ್‌ಬಿ ಬಾಡಿಗಾರ್ಡ್

ಅದು ತುಂಬ ಗೊಂದಲಮಯವಾಗಿದೆ. ನಿರ್ದೇಶಕರು ಏನನ್ನಾದರೂ ಸಂಶೋಧಿಸಿದಾಗ ಮತ್ತು ಚಲನಚಿತ್ರ ನಿರ್ಮಾಪಕರು ಒಂದು ವಿಷಯವನ್ನು ಹೇಳಲು ಬಯಸಿದಾಗ ನಾನು ಅರ್ಥಮಾಡಿಕೊಳ್ಳಬಲ್ಲೆ. ಸಹಜವಾಗಿ ವಿಭಿನ್ನ ದೃಷ್ಟಿಕೋನಗಳು ಇರಬಹುದು. ನೀವು ಮೊಘಲರನ್ನು ರಾಕ್ಷಸರನ್ನಾಗಿ ಮಾಡಲು ಬಯಸಿದರೆ, ದಯವಿಟ್ಟು ಕೆಲವು ಸಂಶೋಧನೆಯ ಆಧಾರದಲ್ಲಿ ಮಾಡಿ. ಏಕೆ ಎಂದು ನಮಗೆ ಅರ್ಥ ಮಾಡಿಸಿ. ಅವರು ಏಕೆ ಖಳನಾಯಕರು ಎಂದು ನೀವು ಭಾವಿಸುತ್ತೀರಿ. ಏಕೆಂದು ನೀವು ಸ್ವಲ್ಪ ಸಂಶೋಧನೆ ಮಾಡಿ ಎಂದಿದ್ದಾರೆ.

ಅವರು ಮೂಲ ರಾಷ್ಟ್ರ ನಿರ್ಮಿಸಿದವರು ಎಂದು ನಾನು ಭಾವಿಸುತ್ತೇನೆ. ಅವರು ಜನರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲು ನೀವು  ಯಾವುದರ ಮೇಲೆ ಆಧರಿಸಿದ್ದೀರಿ? ದಯವಿಟ್ಟು ಐತಿಹಾಸಿಕ ಪುರಾವೆಗಳನ್ನು ಸೂಚಿಸಿ. ದಯವಿಟ್ಟು ಮುಕ್ತ ಚರ್ಚೆಯನ್ನು ಮಾಡಿ ಎಂದಿದ್ದಾರೆ.

Follow Us:
Download App:
  • android
  • ios