4.5 ಕೋಟಿ ಬಜೆಟ್ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಹೆಚ್ಚಾಗುತ್ತೆ ಹಾರ್ಟ್‌ಬೀಟ್; ನೀವು ಇನ್ನೂ ನೋಡಿಲ್ವಾ?
ಕೇವಲ 4.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾವೊಂದು ಅನಿರೀಕ್ಷಿತ ಕ್ಲೈಮ್ಯಾಕ್ಸ್‌ನಿಂದಾಗಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ಯಾವುದೇ ಸೂಪರ್‌ಸ್ಟಾರ್‌ಗಳಿಲ್ಲದೆ ಈ ಚಿತ್ರವು ಯಶಸ್ಸನ್ನು ಗಳಿಸಿದೆ.
ಮುಂಬೈ: ಕೆಲವೊಂದು ಸಿನಿಮಾಗಳು ಅಬ್ಬರದ ಪ್ರಚಾರ ಪಡೆದುಕೊಂಡು ಪ್ರೇಕ್ಷಕರಿಂದ ನಕಾರಾತ್ಮಕ ವಿಮರ್ಶೆಗೆ ಒಳಗಾಗುತ್ತವೆ. ಆದ್ರೆ ಒಂದಿಷ್ಟು ಒಳ್ಳೆಯ ಚಿತ್ರಗಳು ಪ್ರಮೋಷನ್ ಕೊರತೆಯಿಂದಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತವೆ. ನಂತರ ಒಟಿಟಿ ಅಥವಾ ಟಿವಿಗಳಲ್ಲಿ ಸಿನಿಮಾ ನೋಡಿದಾಗ ಎಂತಹ ಅದ್ಭುತ ಚಿತ್ರವೆಂದು ಕೊಂಡಾಡುತ್ತೇವೆ. ಇಂದು ಅಂತಹುವುದೇ ಒಂದು ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ಈ ಸಿನಿಮಾ ಕೇವಲ 4.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಸಿನಿಮಾದ ಅನಿರೀಕ್ಷಿತ ಕ್ಲೈಮ್ಯಾಕ್ಸ್‌ಗೆ ನೋಡುಗರ ರೋಮ ರೋಮಗಳಲ್ಲಿ ರೋಮಾಂಚನವಾಗುತ್ತದೆ.
ಇಷ್ಟು ಮಾತ್ರವಲ್ಲ ಈ ಸಿನಿಮಾದಲ್ಲಿ ಯಾವುದೇ ಸೂಪರ್ ಸ್ಟಾರ್ ಕಲಾವಿದರು ನಟಿಸಿಲ್ಲ. ಆದ್ರೂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದ ಕ್ಲೈಮ್ಯಾಕ್ಸ್‌ನಿಂದಲೇ ಸಿನಿಮಾಗೆ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿತ್ತು. 2013ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಾಹುಲ್ ಭಟ್, ರೊನಿತ್ ರಾಯ್, ವಿನೀತ್ ಕುಮಾರ್ ಸಿಂಗ್, ಗಿರೀಶ್ ಕುಲಕರ್ಣಿ, ತೇಜಸ್ವಿನಿ ಕೋಲ್ಹಾಪುರೆ, ಸುರ್ವೀನ್ ಚಾವ್ಲಾ ಮತ್ತು ಅಂಶಿಕಾ ಶ್ರೀವಾಸ್ತವ್ ಸೇರಿದಂತೆ ಹೊಸ ಕಲಾವಿದರ ನಟಿಸಿದ್ದರು. ಅಖಿಲೇಶ್ ಜೈಸ್ವಾಲ್, ಅನುರಾಗ್ ಕಶ್ಯಪ್ ಮತ್ತು ರೋಹಿತ್ ಪಾಂಡೆ ಅವರ ಕಥೆಗೆ ಅನುರಾಗ್ ಕಶ್ಯಪ್ ನಿರ್ದೇಶನ ಹೇಳಿದ್ದರು.
ನಾವು ಅಗ್ಲಿ (Ugly) ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ನಿರ್ದೇಶಕರ ಚಾಕಚಕ್ಯತೆಯಿಂದಾಗಿ ಒಂದು ಕ್ಷಣವೂ ಪ್ರೇಕ್ಷಕರು ಕದಲಲ್ಲ. ಈ ಸಿನಿಮಾದಲ್ಲಿ ಕಾಣೆಯಾದ ಕಲ್ಕಿ ಹೆಸರಿನ ಹುಡುಗಿಯ ಸುತ್ತ ಸುತ್ತುತ್ತದೆ. ಮಗಳು ಕಲ್ಕಿಗಾಗಿ ಆಕೆಯ ಪೋಷಕರು ಹುಡುಕಾಟ ನಡೆಸುತ್ತಾರೆ. ಇದಕ್ಕೆ ಸಂಬಂಧಿಕರು ಸಹ ಪೋಷಕರಿಗೆ ಸಾಥ್ ನೀಡುತ್ತಾರೆ. ಈ ಸಸ್ಪೆನ್ಸ್ ಡ್ರಾಮಾದಲ್ಲಿನ ಪ್ರತಿಯೊಂದು ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಕಲಾವಿದರ ನೈಜ ನಟನೆಯಿಂದ ನಮ್ಮ ಸುತ್ತಲೇ ಈ ಘಟನೆ ನಡೆಯುತ್ತಿದೆಯಾ ಎಂಬ ಅನುಭವ ನೋಡುಗರಿಗೆ ಉಂಟಾಗುತ್ತದೆ.
ಇದನ್ನೂ ಓದಿ: ಅಲ್ಲು ರಾಮಲಿಂಗಯ್ಯರ ಮಗಳನ್ನು ಚಿರಂಜೀವಿ ಮದುವೆಯಾಗಲು ಆ ಮಹಿಳೆಯೇ ಕಾರಣ
ಚಿತ್ರದ ಬಜೆಟ್
ಅಗ್ಲಿ ಸಿನಿಮಾ 4.5 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿ ತೆರೆ ಮೇಲೆ ಅಪ್ಪಳಿಸಿತ್ತು. ಅಂತಿಮವಾಗಿ ಚಿತ್ರ ಬಾಕ್ಸ್ ಆಫಿಸ್‌ನಲ್ಲಿ 6.5 ಕೋಟಿ ರೂಪಾಯಿ ಹಣವನ್ನು ಗಳಿಸಿತ್ತು. . ಗ್ಯಾಂಗ್ಸ್ ಆಫ್ ವಾಸೇಪುರ್ ಬಿಡುಗಡೆಯಾದ ಎರಡು ವರ್ಷಗಳ ನಂತರ,ನಿರ್ದೇಶಕ ಅನುರಾಗ್ ಕಶ್ಯಪ್ 'ಅಗ್ಲಿ' ಮೂಲಕ ಹಿರಿ ಪರದೆಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಮಾಡುವಾಗ ಅನುರಾಗ್ ಕಶ್ಯಪ್, ತಮ್ಮ ಖಾಸಗಿ ಜೀವನದ ಅಂಶಗಳನ್ನು ಬಳಸಿಕೊಂಡಿದ್ದಾರೆ. ಮುರಿದ ಮದುವೆ, ಮಗಳ ಜೊತೆಗಿನ ಸಂಬಂಧ, ಅತಿಯಾದ ಮದ್ಯಪಾನ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾವನ್ನು ಅಮೆಜಾನ್ ಪ್ಲಾಟ್‌ಫಾರಂನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ತಂದೆ ಸಾವಿನ ಬಳಿಕ ಹಸಿದ ಹೊಟ್ಟೆಯಲ್ಲಿ ಮಲಗಬೇಕಾಯ್ತು; ಇಂದು ಕಿರುತೆರೆಯ ಸ್ಟಾರ್ ನಟ