ಫ್ಯಾಮಿಲಿ ಆಫ್ 4 ಇದ್ದವರು ಈಗ 5 ಆಗುತ್ತಿದ್ದಾರೆ. ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ನಟಿಗೆ ಜೀವನ ಶೈಲಿ ಹೇಗಿದೆ? 

ಹಿಂದಿ ಬಿಗ್ ಬಾಸ್ ಖ್ಯಾತಿಯ ಡಿಂಪಿ ಗಂಗೂಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರೆಗ್ನೆನ್ಸಿ ರಿವೀಲ್ ಮಾಡುವಾಗ ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಡಿಂಪಿ ವೃತ್ತಿ ಜೀವನ, ಮಕ್ಕಳ ಬೆಳವಣಿಗೆ ಮತ್ತು ಪತಿಯಿಂದ ಸಿಗುವ ಸಪೋರ್ಟ್‌ ಬಗ್ಗೆ ಹಂಚಿಕೊಂಡಿದ್ದಾರೆ. 

'ನನ್ನ ಮೂಡ್‌ ಸ್ವಿಂಗ್ ಮತ್ತು ಹಾರ್ಮೋನ್ ಬದಲಾಣೆ ಯಾವುದು ನಮ್ಮ ಕಂಟ್ರೋಲ್‌ನಲ್ಲಿ ಇಲ್ಲ. ಕೆಲವೊಮ್ಮೆ ಸಖತ್ ಎಜರ್ನಿ ಇರುತ್ತದೆ ಕೆಲವೊಂದು ದಿನ ಸುಸ್ತಾಗಿರುತ್ತದೆ. ಒಂದು ದಿನ ಇದ್ದಕ್ಕಿದ್ದಂತೆ ಆತಂಕ ಶುರುವಾಗುತ್ತದೆ ಮಾರನೆ ದಿನ ಕೂಲ್ ಆಗಿರುತ್ತೀನಿ. ಇದೆಲ್ಲಾ ಗರ್ಭಿಣಿಯರು ಅನುಭವಿಸುವ ಸಾಮಾನ್ಯ ಕ್ಷಣಗಳು. ಜರ್ನಿ ಹೇಗಿದೆ ಎನ್ನುವುದು ನಮಗೆ ಸಿಗುವ ಪಾರ್ಟನರ್ ಮೇಲೂ ಡಿಪೆಂಡ್ ಆಗುತ್ತದೆ. ನನ್ನ ಪತಿ, ಇಬ್ಬರು ಮಕ್ಕಳು ಮತ್ತು ಮನೆ ಕೆಲಸದವರು ಸಖತ್ ಕಪೋರ್ಟ್ ಮಾಡುತ್ತಾರೆ' ಎಂದು ಡಿಂಪಿ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

'ನೆಗೆಟಿವ್ ಯೋಚನೆಗಳು ಮತ್ತು ಆತಂಕದ ವ್ಯತ್ಯಾಸ ನನಗೆ ಗೊತ್ತಿಲ್ಲ ಆದರೆ ಕಳೆದ 33 ವರ್ಷಗಳಿಂದ ಲೆಕ್ಕ ಮಾಡಿದ್ದರೆ ಈಗ ನನಗೆ ಶಕ್ತಿ ಹೆಚ್ಚಾಗಿದೆ. ಈ ಕ್ಷಣದಲ್ಲಿ ನನಗೆ ಯಾವ ಬಯಕೆನೂ ಇಲ್ಲ ಏಕೆಂದರೆ ನನ್ನ ಪತಿ ನನಗೆ ಎಲ್ಲವೂ ನೀಡಿದ್ದಾರೆ. ನನ್ನ ಪುತ್ರಿ ರಿಯಾನಾ ನನ್ನ ಬೇಬಿ ಬಂಪ್ ಹಿಡಿದುಕೊಂಡು ಓ ಮೈ ಕ್ಯೂಟ್ ಬೇಬಿ ಎಂದು ಹೇಳುತ್ತಾಳೆ ಆದರೆ ರಿಯಲ್ ಆಗ ಬೇಬಿ ಕೈ ಸೇರಿದಾಗ ಹೇಗೆ ರಿಯಾಕ್ಟ್ ಮಾಡುತ್ತಾರೆ ಗೊತ್ತಿಲ್ಲ. ನನ್ನ ಪುತ್ರ ಆತನ ಆಟ ಆಡುವ ಕಾರ್ ಹಿಡಿದುಕೊಂಡು ನನ್ನ ಹೊಟ್ಟೆ ಮೇಲೆ ಓಡಿಸುತ್ತಾನೆ ಆಗನಿಗೆ ಏನೂ ಅರ್ಥವಾಗುತ್ತಿಲ್ಲ. ಅಕ್ಕ ತಮ್ಮ ಜಗಳ ಮಾಡಿದ್ದಾಗ ಮಾತ್ರ ನನಗೆ ತಮ್ಮ ಬೇಡ ಎಂದು ರಿಯಾನಾ ಹೇಳುತ್ತಾಳೆ' ಎಂದು ಡಿಂಪಿ ಹೇಳಿದ್ದಾರೆ. 

ಕೆಂಪು ಬಣ್ಣದ Range Rover ಕಾರು ಖರೀದಿಸಿದ ಕಿರುತೆರೆ ನಟಿ ಡಿಂಪಿ ಗಂಗೂಲಿ!

'ಇಬ್ಬರೂ ಮಕ್ಕಳಿಗೂ ನಾನು ಬೇಬಿ ಶವರ್ ಮಾಡಿಸಿಕೊಂಡಿಲ್ಲ ಆದರೆ ಆಸೆ ಇದೆ. ನನ್ನ ಅತ್ತೆ ಮಾವ ನಮ್ಮ ಜೊತೆಗಿದ್ದಾರೆ. ಮುಂದಿನ ತಿಂಗಳು ನನ್ನ ತಾಯಿ ಕೂಡ ನಮ್ಮ ಜೊತೆ ಇರಲಿದ್ದಾರೆ. ಅಷ್ಟರಲ್ಲಿ ಮಗು ಹುಟ್ಟಲಿಲ್ಲ ಆಂದ್ರೆ ಬೇಬಿ ಶವರ್ ಮಾಡಿಕೊಳ್ಳುವೆ. ಏನಾದರೂ ಬಯಕೆ ಇದ್ದರೆ ನಾನೇ ಹೋಗಿ ಖರೀದಿಸಿ ತಿನ್ನುವೆ ನನ್ನ ಗಂಡನನ್ನು ಕಳುಹಿಸುವುದಿಲ್ಲ. ಪ್ರತಿ ಸಲ ಡಾಕ್ಟರ್‌ ಭೇಟಿ ಮಾಡಿದ್ದಾಗಲ್ಲೂ ಪತಿ ರೋಹಿತ್ ಜೊತೆಗಿರುತ್ತಾರೆ.ವೀಕೆಂಡ್‌ನಲ್ಲಿ ಮನೆ ಮತ್ತು ಮಕ್ಕಳನ್ನು ಮ್ಯಾನೇಜ್ ಮಾಡುತ್ತಾರೆ. ನಮ್ಮ ಕುಟುಂಬದಲ್ಲಿ ಅವರೇ ದುಡಿಯುತ್ತಿರುವ ಕಾರಣ ಅವರ ಸಮಯ ತುಂಬಾನೇ ಮುಖ್ಯವಾಗುತ್ತದೆ' ಎಂದಿದ್ದಾರೆ ಡಿಂಪಿ.

ಬಿಗ್ ಬಾಸ್ ಖ್ಯಾತಿಯ Dimpy Ganguly ಪ್ರೆಗ್ನೆನ್ಸಿ ಫೋಟೋಶೂಟ್‌ ವೈರಲ್‌

'ಇದು ನನಗೆ ಮೂರನೇ ಪ್ರೆಗ್ನೆನ್ಸಿ ಆಗಿರುವ ಕಾರಣ ನನಗೆ ತುಂಬಾನೇ ಮೂಡ್‌ ಸ್ವಿಂಗ್‌ ಇದೆ. ನನ್ನ ಆತಂಕವನ್ನು ರೋಹಿತ್‌ ಜೊತೆ ಹಂಚಿಕೊಳ್ಳುತ್ತೀನಿ ಏನೇ ಇದ್ದರೂ ಇಬ್ಬರೂ ಚರ್ಚೆ ಮಾಡೋಣ ಎನ್ನುತ್ತಾರೆ. ಬೇಸರವಾದರೆ ಜೋರಾಗಿ ಅಳುತ್ತೀನಿ ಆನಂತರ ಮೂಡ್ ಸ್ವಿಂಗ್ ಅಂದುಕೊಂಡು ಸುಮ್ಮನಾಗುತ್ತೀನಿ. ಮಗು ಎಂಟ್ರಿ ಬಗ್ಗೆ ಆಗಲೇ ಪ್ಲ್ಯಾನ್ ಮಾಡುತ್ತಿದ್ದೀವಿ. ದೊಡ್ಡ ಮನೆಗೆ ಹೋಗಬೇಕು ಏಕೆಂದರೆ ನಾವು 5 ಜನರಿಗೆ ಈ ಮನೆ ಸಾಲುವುದಿಲ್ಲ. ದುಬೈನಲ್ಲಿ ಮುಂಚಿತವಾಗಿ ಮನೆ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ, ಹುಡುಕಿ ಎರಡು ವಾರಕ್ಕೆ ಶಿಫ್ಟ್ ಆಗಬೇಕು. ನಮಗೆ ಕಾರು ಕೂಡ 5 ಸೀಟರ್ ಈಗ ನಾವು 7 ಸೀಟರ್ ತೆಗೆದುಕೊಳ್ಳಬೇಕು ಹೀಗಾಗಿ ಸಣ್ಣ ಪುಟ್ಟ ಚಾಲೆಂಜ್‌ಗಳು ಎದುರಾಗುತ್ತಿದೆ. ಎರಡು ಪ್ರೆಗ್ನೆನ್ಸಿಯಲ್ಲಿ ನನಗೆ ಖಾರ ತಿನ್ನಬೇಕು ಅನಿಸುತ್ತಿತ್ತು ಆದರೆ ಈ ಸಲ ಸ್ವೀಟ್ ತಿನ್ನ ಬೇಕು ಅನಿಸುತ್ತಿದೆ. ಊಟದ ನಂತರ ಸ್ವೀಟ್ ಸೇವಿಸುತ್ತೀನಿ. ಜಂಕ್ ಫುಡ್‌ನಿಂದ ದೂರ ಉಳಿಯುತ್ತೀನಿ, ಆಸೆ ಆದರೆ ಮಿಸ್ ಮಾಡುವುದಿಲ್ಲ. ಮನೆಯಲ್ಲಿ ತಯಾರಿ ಮಾಡಿಕೊಂಡು ತಿನ್ನುವ ಆಹಾರದ ಬಗ್ಗೆ ನನಗೆ ನಂಬಿಕೆ ಜಾಸ್ತಿ' ಎಂದು ಡಿಂಪಿ ಹೇಳಿದ್ದಾರೆ.