ಪೊಲೀಸ್ ಕಾರಿಗೆ ಡಿಕ್ಕಿ ಆರೋಪ; ನಿರಂತರ ಬೆದರಿಕೆ ಕರೆಯಿಂದ ಖಿನ್ನತೆಗೆ ಜಾರಿದ ನಟಿ
ಪೊಲೀಸ್ ಕಾರಿಗೆ ಡಿಕ್ಕಿ ಹೊಡೆದ ಆರೋಪ ಎದುರಿಸುತ್ತಿರುವ ನಟಿ ಡಿಂಪಲ್ ಹಯಾತಿ ನಿರಂತರ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದು ಖಿನ್ನತೆಗೆ ಜಾರಿದ್ದಾರೆ ಎನ್ನಲಾಗಿದೆ.

ತೆಲುಗು ನಟಿ ಡಿಂಪಲ್ ಹಯಾತಿ ಮತ್ತು ಅವರ ಬಾಯ್‌ಫ್ರೆಂಡ್ ವಿಕ್ಟರ್ ಡೇವಿಡ್ ಇಬ್ಬರೂ ಪೊಲೀಸ್ ಕೇಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಇಬ್ಬರೂ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಐಪಿಎಸ್ ಅಧಿಕಾರಿಯೊಬ್ಬರ ವಾಹನಕ್ಕೆ ಹಾನಿ ಮಾಡಿದ ಆರೋಪದ ಮೇಲೆ ನಟಿ ಡಿಂಪಲ್ ಮತ್ತು ಆಕೆಯ ಬಾಯ್‌ಫ್ರೆಂಡ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಟಿ ಡಿಂಪಲ್ ಹಯಾತಿ ಮತ್ತು ಆಕೆಯ ಸ್ನೇಹಿತ ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದ ಅಪಾರ್ಟ್‌ಮೆಂಟ್‌ನ ಸೆಲ್ಲಾರ್‌ನಲ್ಲಿ ನಿಲ್ಲಿಸಿದ್ದ ಉಪ ಪೊಲೀಸ್ ಆಯುಕ್ತ ರಾಹುಲ್ ಹೆಗ್ಡೆ ಅವರ ಪೊಲೀಸ್ ವಾಹನವನ್ನು ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಡಿಸಿಪಿ ರಾಹುಲ್ ಹೆಗ್ಡೆ ಚಾಲಕ ದೂರು ನೀಡಿದ್ದಾರೆ. ಮೇ 14 ರಂದು ನಟಿ ಡಿಂಪಲ್ ತಮ್ಮ ವಾಹನವನ್ನು ತೆಗೆದುಕೊಂಡು ಹೋಗುವಾಗ ಉದ್ದೇಶಪೂರ್ವಕವಾಗಿ ಪೊಲೀಸ್ ಕಾರನ್ನು ಹಾನಿಗೊಳಿಸಿದ್ದಾರೆ ಎಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕಾರಿಗೆ ಹಾನಿ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೋಲೀಸ್ ಅಧಿಕಾರಿಯ ಚಾಲಕನ ದೂರಿನ ಆಧಾರದ ಮೇಲೆ ಪೊಲೀಸರು ಮೇ 17 ರಂದು ಐಪಿಸಿ ಸೆಕ್ಷನ್ 341, 353, 279ರ ಅಡಿ ದೂರು ದಾಖಲಿಸಲಾಗಿದೆ. ಸದ್ಯ ಅಧಿಕಾರಿಗಳು ಸೋಮವಾರ ನಟಿ ಡಿಂಪಲ್ ಹಯಾತಿ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ನಂತರ ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ವಿಚಾರಣೆಯಲ್ಲಿ ಪೊಲೀಸ್ ಆಧಿಕಾರಿ ಉದ್ದೇಶ ಪೂರ್ವಕವಾಗಿ ಕಾರನ್ನು ಅಡ್ಡ ನಿಲ್ಲಿಸಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ನಟಿ ಡಿಂಪಲ್ ದೂರಿದ್ದಾರೆ.
ಮಹಿಳಾ ಕೆಎಎಸ್ ಅಧಿಕಾರಿ ಮೇಲೆ ಬಾನಮತಿ; ಹಣಕ್ಕಾಗಿ ಸಹೋದರನಿಂದ್ಲೇ ಜೀವ ಬೆದರಿಕೆ!
ಅಷ್ಟೆಯಲ್ಲದೇ ಈ ಪ್ರಕರಣದಿಂದ ಡಿಂಪಲ್ ಹಯಾತಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಡಿಂಪಲ್ ಪರ ವಕೀಲರು ಉಲ್ಲೇಖಿಸಿದ್ದಾರೆ. 'ಕಾನೂನಿಗೆ ಅಡ್ಡಿಪಡಿಸುವ ಮೂಲಕ ಅವರು ತಮ್ಮ ಇಚ್ಛಾನುಸಾರ ವರ್ತಿಸುತ್ತಿದ್ದಾರೆ' ಎಂದು ಡಿಂಪಲ್ ಪರ ವಕೀಲರು ಆರೋಪಿಸಿದ್ದಾರೆ. ಕಾನೂನು ಬದ್ಧವಾಗಿ ಕೆಲಸ ಮಾಡಬೇಕಾದ ಡಿಸಿಪಿ ಅಕ್ರಮ ಎಸಗುತ್ತಿದ್ದಾರೆ. ಡಿಂಪಲ್ ಅವರನ್ನು ಪೊಲೀಸ್ ಠಾಣೆಗೆ ಕರೆದು ಗಂಟೆಗಟ್ಟಲೆ ಕೂರಿಸಲಾಗಿದೆ. ಅವರೂ ಸೆಲೆಬ್ರಿಟಿ. ಡಿಸಿಪಿ ತನ್ನ ಸ್ಥಾನಮಾನವನ್ನು ಕೆಡಿಸಲು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಪೊಲೀಸರಿಂದ ಕಿರುಕುಳ: ಡಿಕೆಶಿ ಮುಂದೆ ಶಾಸಕಿ ರೂಪಕಲಾ ಕಣ್ಣೀರು!
2017ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಡಿಂಪಲ್ ಹಯಾತಿ ‘ಗಲ್ಫ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ದೇವಿ 2, ಹಿಂದಿಯಲ್ಲಿ ಅತ್ರಂಗಿ ರೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.