ಮಹಿಳಾ ಕೆಎಎಸ್ ಅಧಿಕಾರಿ ಮೇಲೆ ಬಾನಮತಿ; ಹಣಕ್ಕಾಗಿ ಸಹೋದರನಿಂದ್ಲೇ ಜೀವ ಬೆದರಿಕೆ!
ಹಣಕ್ಕಾಗಿ ಮಹಿಳಾ ಕೆಎಎಸ್ ಅಧಿಕಾರಿಗೆ ತಮ್ಮನಿಂದಲೇ ಬಾನಮತಿ ಮಾಡಿಸುವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬೆಂಗಳೂರು (ಮೇ.26) ಹಣಕ್ಕಾಗಿ ಮಹಿಳಾ ಕೆಎಎಸ್ ಅಧಿಕಾರಿಗೆ ತಮ್ಮನಿಂದಲೇ ಬಾನಮತಿ ಮಾಡಿಸುವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಕೆಎಎಸ್ ಅಧಿಕಾರಿಯಾಗಿರುವ ಡಾ.ಮೈತ್ರಿ. ಹಣಕ್ಕಾಗಿ ಸಹೋದರ ಸಂಜಯ ಮಾಟ ಮಂತ್ರ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಆರೋಪ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿರುವ ಕೆಎಎಸ್ ಅಧಿಕಾರಿ ಡಾ.ಮೈತ್ರಿ.
ಏನಿದು ಘಟನೆ:
ಮಹಿಳಾ ಕೆಎಎಸ್ ಅಧಿಕಾರಿ ಡಾ.ಮೈತ್ರಿಯ ಸಹೋದರನಾಗಿರುವ ಸಂಜಯ. ಇತ್ತೀಚೆಗೆ ಹೊಸ ಬ್ಯುಸಿನೆಸ್ ಶುರು ಮಾಡಲು ಅಕ್ಕ ಮೈತ್ರಿಯ ದುಂಬಾಲು ಬಿದ್ದಿದ್ದಾನೆ. 3 ಕೋಟಿ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದ ತಮ್ಮ ಸಂಜಯ. ಅಷ್ಟು ಹಣ ಕೊಡಲು ನಿರಾಕರಿಸಿದ್ದ ಅಕ್ಕ ಡಾ.ಮೈತ್ರಿ. ಇದರಿಂದಾಗಿ ಜೀವ ಬೆದರಿಕೆ ಒಡ್ಡಿರುವ ತಮ್ಮ. ಮನೆಗೆ ಬಂದು ಹಲ್ಲೆ ನಡೆಸಿರುವ ಸಹೋದರ ಸಂಜಯ.
ತಮ್ಮನಿಂದಲೇ ಜೀವಬೆದರಿಕೆ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧಿಕಾರಿ ಡಾ.ಮೈತ್ರಿ ನೀಡಿರುವ ದೂರಿನನ್ವಯ ಅವರ ಸಹೋದರ ಡಾ.ಸಂಜಯ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.