ರಾಜಕಾರಣಿಗಳು, ಸೆಲೆಬ್ರಿಟಿಗಳು ಜ್ಯೋತಿಷ್ಯವನ್ನು ಬಹಿರಂಗವಾಗಿ ಟೀಕಿಸಿದರೂ, ಗುಪ್ತವಾಗಿ ನಂಬುತ್ತಾರೆ. ಶಿಲ್ಪಾ ಶೆಟ್ಟಿ, ಅಮಿತಾಭ್ ಬಚ್ಚನ್, ರಜನೀಕಾಂತ್, ಸನ್ನಿ ಲಿಯೋನ್ ಮುಂತಾದ ಅನೇಕ ಬಾಲಿವುಡ್ ತಾರೆಯರು ಯಶಸ್ಸಿಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ, ಕೆಲವರು ಹೆಸರಿನ ಸ್ಪೆಲ್ಲಿಂಗ್ ಬದಲಾಯಿಸಿಕೊಂಡರೆ, ಇನ್ನು ಕೆಲವರು ಸಂಪೂರ್ಣ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆಗಳು ಅವರಿಗೆ ಅದೃಷ್ಟ ತಂದಿವೆ ಎಂದು ನಂಬಲಾಗಿದೆ.

ಜ್ಯೋತಿಷವನ್ನು ನಂಬುವುದಿಲ್ಲ ಎಂದು ಹೊರಗಡೆ ಹೇಳುವ ರಾಜಕಾರಣಿಗಳು, ಸೆಲೆಬ್ರಿಟಿಗಳು ಒಳಗೊಳಗೇ ಏನೆಲ್ಲಾ ಮಾಡುತ್ತಾರೆ ಎನ್ನುವುದು ಬೇರೆ ಹೇಳಬೇಕಾಗಿಲ್ಲ. ದೇವರು, ಜ್ಯೋತಿಷವನ್ನು ನಂಬುವವರನ್ನು ಟೀಕಿಸುತ್ತಲೇ ತಮ್ಮ ಕಾಲ ಬುಡಕ್ಕೆ ಅಪಾಯ ಬಂದಾಗ ಟೆಂಪಲ್​ ರನ್​ ಮಾಡುವವರನ್ನು ನೋಡುತ್ತಲೇ ಇರುತ್ತೇವೆ. ಆ ಶಾಸ್ತ್ರ, ಈ ಶಾಸ್ತ್ರ ಮಾಡುವವರನ್ನು ಹೀಯಾಳಿಸುವವರು, ಹೊಸ ಕಾರ್ಯ ಮಾಡುವ ಆರಂಭದಲ್ಲಿ ಪುರೋಹಿತರನ್ನು ಕರೆಸಿ ಕದ್ದುಮುಚ್ಚಿ ಕೆಲಸ ಮಾಡಿಸಿಕೊಳ್ಳುವ ವಿಡಿಯೋಗಳೂ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ಅದರಲ್ಲಿಯೂ ಚುನಾವಣೆ ಹತ್ತಿರ ಬಂದಾಗ ರಾಜಕಾರಣಿಗಳ ನಾನಾ ವೇಷಗಳನ್ನು ನೋಡುತ್ತಲೇ ಇರುತ್ತೇವೆ. ಅದೇನೇ ಇರಲಿ, ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಂತೂ ಸಂಖ್ಯಾಶಾಸ್ತ್ರ, ಜ್ಯೋತಿಷದ ಮೇಲೆ ಅಪಾರ ನಂಬಿಕೆಯನ್ನೇ ಇಟ್ಟುಕೊಂಡವರು. ಅದರಲ್ಲಿಯೂ ಅದೃಷ್ಟ ಖುಲಾಯಿಸುತ್ತ ಎನ್ನುವ ಕಾರಣಕ್ಕೆ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳುವವರು, ಇಂಗ್ಲಿಷ್​ ಸ್ಪೆಲ್ಲಿಂಗ್​ನಲ್ಲಿ ಒಂದೆರಡು ಅಕ್ಷರಗಳನ್ನು ಸೇರಿಸಿಕೊಳ್ಳುವವರು ಹಲವಾರು ಮಂದಿ ಇದ್ದಾರೆ.

ಅಂಥ ಕೆಲವು ಬಾಲಿವುಡ್​ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಶಿಲ್ಪಾ ಶೆಟ್ಟಿ, ಅಮಿತಾಭ್​ ಬಚ್ಚನ್​, ಸೈಫ್​ ಅಲಿ ಖಾನ್​, ರಜನೀಕಾಂತ್​, ಸನ್ನಿ ಲಿಯೋನ್​ ಸೇರಿದಂತೆ ಕೆಲವು ಬಾಲಿವುಡ್​ ತಾರೆಯರ ನಿಜವಾದ ಹೆಸರು ಇದಲ್ಲ ಎನ್ನುವುದು ನಿಮಗೆ ಗೊತ್ತಾ? ಇವರೆಲ್ಲರೂ ತಮ್ಮ ಹೆಸರನ್ನು ಬದಲಿಸಿಕೊಂಡು ಅದೃಷ್ಟ ಪಡೆದವರು! ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ, ಮಾಡೆಲಿಂಗ್‌ಗೆ ಪ್ರವೇಶಿಸುವ ಮೊದಲು ಅವರು "ಅಶ್ವಿನಿ" ಅನ್ನು "ಶಿಲ್ಪಾ" ಎಂದು ಬದಲಾಯಿಸಿಕೊಂಡವರು ಶಿಲ್ಪಾ ಶೆಟ್ಟಿ. ಆ ಹೆಸರು ಅವರಿಗೆ ಖ್ಯಾತಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿತ್ತು ಮತ್ತು ಅದು ಕೆಲಸ ಮಾಡಿತು. ನಂತರ ಅವರು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾದರು ಮತ್ತು ಫಿಟ್‌ನೆಸ್ ಮತ್ತು ಕ್ಷೇಮ ಐಕಾನ್ ಆದರು.

ಹಳದಿ ಕಾರ್ಯದಲ್ಲಿ 'ಬಾಟಲಿ ಶಾಸ್ತ್ರ'! ಅತ್ತೆ ಮನೆಯಲ್ಲಿ ಸುಸ್ತಾದ ತರುಣ್:​ ಮದುವೆಗೆ ಮುನ್ನ ನಡೆದ ಆ ಘಟನೆ ವಿವರಿಸಿದ ಸೋನಲ್​

ಇನ್ನು ಬಾಲಿವುಡ್​ ಬಿಗ್​ ಬಿ ಎಂದೇ ಫೇಮಸ್​ ಆಗಿರುವ ಅಮಿತಾಭ್​ ಬಚ್ಚನ್​ ಅವರ ನಿಜವಾದ ಹೆಸರು ಇಂಕ್ವಿಲಾಬ್ ಶ್ರೀವಾಸ್ತವ. ಅವರ ತಂದೆ, ಕವಿ ಹರಿವಂಶ್ ರಾಯ್ ಬಚ್ಚನ್, ಕವಿ ಸುಮಿತ್ರಾನಂದನ್ ಪಂತ್ ಅವರ ಸಲಹೆಯ ಮೇರೆಗೆ ತಮ್ಮ ಹೆಸರನ್ನು ಅಮಿತಾಭ್​ ಎಂದು ಬದಲಾಯಿಸಿಕೊಂಡರು, ಇದರ ಅರ್ಥ "ಅಪರಿಮಿತ ಪ್ರತಿಭೆ". ನಂತರ ಅವರು ಶ್ರೀವಾಸ್ತವ ಬದಲಿಗೆ ಬಾಲಿವುಡ್‌ನಲ್ಲಿ "ಬಚ್ಚನ್" ಅನ್ನು ತಮ್ಮ ಉಪನಾಮವಾಗಿ ಅಳವಡಿಸಿಕೊಂಡರು, ಇದು ಅವರ ಗುರುತಾಗಿದೆ. ಇನ್ನು, ಕತ್ರಿನಾ ಕೈಫ್ ಅವರ ನಿಜವಾದ ಹೆಸರು ಕತ್ರಿನಾ ಟರ್ಕೋಟ್. ಬ್ರಿಟಿಷ್ ತಾಯಿ ಮತ್ತು ಭಾರತೀಯ ತಂದೆಗೆ ಜನಿಸಿದ ಅವರು, ಭಾರತೀಯರಿಗೆ "ಟರ್ಕೋಟ್" ಎಂದು ಉಚ್ಚಾರಣೆ ಮಾಡಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ "ಕೈಫ್" ಎಂದು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ, ನಿಜವಾಗಿಯೂ ಇದು ಜ್ಯೋತಿಷಿಗಳ ಮಾತು ಕೇಳಿ ಮಾಡಿದ ಬದಲಾವಣೆ ಎಂದೇ ಹೇಳಲಾಗುತ್ತದೆ. ಅದು ಕೆಲಸ ಕೂಡ ಮಾಡುತ್ತಿದೆ. 

ಕರ್ನಾಟಕದಲ್ಲಿ ಜನಿಸಿದ ಶಿವಾಜಿ ರಾವ್​ ಗಾಯಕ್​ವಾಡ್​ ಈಗ ರಜನೀಕಾಂತ್ ಆಗಿದ್ದಾರೆ. ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಇವರು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನಿರ್ದೇಶಕ ಕೆ. ಬಾಲಚಂದರ್ ತಮಿಳು ಚಿತ್ರರಂಗಕ್ಕೆ ಸರಿಹೊಂದುವಂತೆ "ರಜನಿಕಾಂತ್" ಅನ್ನು ಪರದೆಯ ಹೆಸರಾಗಿ ಸೂಚಿಸಿದರು. ಈ ಹೆಸರು ಬದಲಾವಣೆಯು ಅವರಿಗೆ "ಸೂಪರ್ ಸ್ಟಾರ್" ಎಂಬ ಪ್ರತಿಷ್ಠಿತ ಸ್ಥಾನಮಾನವನ್ನು ಪಡೆಯಲು ಸಹಾಯ ಮಾಡಿತು. ಮನರಂಜನಾ ಉದ್ಯಮಕ್ಕೆ ಪ್ರವೇಶಿಸಿದಾಗ ಕರೆನ್ಜಿತ್ ಕೌರ್ ವೋಹ್ರಾ ಎನ್ನುವುದು "ಸನ್ನಿ ಲಿಯೋನ್" ಹೆಸರಾಗಿತ್ತು. "ಸನ್ನಿ" ತಮ್ಮ ಸಹೋದರನ ಹೆಸರಿನಿಂದ ಪ್ರೇರಿತರಾದರು ಮತ್ತು "ಲಿಯೋನ್" ಅನ್ನು ಅದರ ಸೊಗಸಾದ ಆಕರ್ಷಣೆಗಾಗಿ ಆಯ್ಕೆ ಮಾಡಲಾಯಿತು. ಈ ಹೆಸರು ಅವರು ಬಾಲಿವುಡ್‌ಗೆ ಪರಿವರ್ತನೆಗೊಳ್ಳಲು ಮತ್ತು ಅಪಾರ ಜನಪ್ರಿಯತೆಯನ್ನು ಗಳಿಸಲು ಸಹಾಯ ಮಾಡಿತು.

ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಸೈಫ್​ ಅಲಿ ಖಾನ್​, ಸಾಜಿದ್ ಅಲಿ ಖಾನ್ ಆಗಿದ್ದರು. ಅವರು ಕೂಡ ಯಶಸ್ಸಿಗಾಗಿ ಹೆಸರು ಬದಲಿಸಿಕೊಂಡು ಪ್ರಖ್ಯಾತರಾದರು. ಇನ್ನು ಬಾಲಿವುಡ್​ ಲೆಜೆಂಡ್​ ದಿಲೀಪ್​ ಕುಮಾರ್​ ಕೂಡ ಹೆಸರು ಬದಲಾಯಿಸಿಕೊಂಡವರೇ. ಯೂಸುಫ್ ಖಾನ್ ಅಗಿದ್ದ ಅವರು, ನಟಿ ದೇವಿಕಾ ರಾಣಿ ಬಾಲಿವುಡ್‌ನಲ್ಲಿ ವ್ಯಾಪಕ ಆಕರ್ಷಣೆಗಾಗಿ ಹಿಂದೂ ಹೆಸರನ್ನು ಅಳವಡಿಸಿಕೊಳ್ಳಲು ನೀಡಿದ ಸಲಹೆಯಂತೆ "ದಿಲೀಪ್ ಕುಮಾರ್" ಆದರು. ಇನ್ನು ಅಜೆಯ್​ ದೇವಗನ್​ ಅವರ ನಿಜವಾದ ಹೆಸರು ವಿಶಾಲ್​. ಸಂಖ್ಯಾಶಾಸ್ತ್ರದ ಕಾರಣದಿಂದ ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ. 

ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಗೋವಿಂದ- ಸುನಿತಾ ಲಿಪ್​ಲಾಕ್​ ವಿಡಿಯೋ ವೈರಲ್​: ಇದರಲ್ಲೇನಿದೆ?