ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮತ್ತು ಅವರ ಬಾಯ್​ಫ್ರೆಂಡ್​ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್​ ಪಹರಿಯಾ ನಿಶ್ಚಿತಾರ್ಥ ನಡೆದಿದೆ ಎನ್ನುವ ಫೋಟೋಗಳು ವೈರಲ್​ ಆಗಿವೆ.  

ಬಣ್ಣದ ಲೋಕ ಅದರಲ್ಲಿಯೂ ಬಾಲಿವುಡ್​ ಗಾಸಿಪ್​ಗಳಿಗೇನೂ ಕಮ್ಮಿ ಇಲ್ಲ. ಒಬ್ಬರ ಜೊತೆ ಇನ್ನೊಬ್ಬರ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಇದೆ ರೀತಿ, ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್​ ಮತ್ತು ಅವರ ಬಾಯ್​ಫ್ರೆಂಡ್​ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್​ ಪಹರಿಯಾ (Shikhar Pahariya) ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು. ಇವರ ಸುದ್ದಿ ಗಾಸಿಪ್​ ಅನ್ನುವುದಕ್ಕಿಂತಲೂ ಹೆಚ್ಚಾಗಿ ಇಬ್ಬರೂ ನಡೆಡುಕೊಳ್ಳುತ್ತಿರುವ ರೀತಿಯಿಂದ ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್​ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್​ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.


ಆದರೆ ಇದೀಗ ಇವರಿಬ್ಬರ ಎಂಗೇಜ್​ಮೆಂಟ್​ ಗುಟ್ಟಾಗಿ ನಡೆದೇ ಹೋಗಿದೆ ಎನ್ನುವಂಥ ಫೋಟೋಗಳು ವೈರಲ್​ ಆಗ್ತಿವೆ. ಇದರಲ್ಲಿ ಜಾಹ್ನವಿ ಕಪೂರ್​ ಮದುಮಗಳಂತೆ ಮಿಂಚುತ್ತಿದ್ದಾರೆ. ಹಾಗೂ ಅಲ್ಲಿ ಕೆಲವು ಸೆಲೆಬ್ರಿಟಿಗಳನ್ನೂ ಫೋಟೋಗಳಲ್ಲಿ ನೋಡಬಹುದು. ಅಷ್ಟಕ್ಕೂ ಇವರಿಬ್ಬರ ಸಂಬಂಧ ಸಂಬಂಧ ನಿಜ ಎಂಬುದಾಗಿ ಪರೋಕ್ಷವಾಗಿಯೇ ಹೇಳಿದ್ದಾರೆ ಜಾಹ್ನವಿ ಕಪೂರ್​ ತಂದೆ, ಶ್ರೀದೇವಿ ಪತಿ ಬೋನಿ ಕಪೋರ್​. ಜೂಮ್​ಗೆ ನೀಡಿದ ಸಂದರ್ಶನದಲ್ಲಿ ಅವರು, ‘ನನಗೆ ಶಿಖರ್ ಅಂದರೆ ಪ್ರೀತಿ. ಜಾಹ್ನವಿ ಶಿಖರ್​ ಜೊತೆ ಕಾಣಿಸಿಕೊಳ್ಳುವುದಕ್ಕಿಂತಲೂ ಅಂದರೆ ಓಡಾಡ ಶುರು ಮಾಡುವುದಕ್ಕಿಂತಲೂ ಮೊದಲು ನನಗೆ ಅವನ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅವನು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಆತ ಯಾವಾಗಲೂ ಓಡಿ ಬರುತ್ತಾನೆ. ಅವನು ನನ್ನೊಂದಿಗೆ, ಜಾಹ್ನವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಮೂಲಕ ಮಗಳು ಮತ್ತು ಶಿಖರ್​ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. 

ಟಾಯ್ಲೆಟ್​ಗೆ ಹೋದಾಗ ಫ್ಲಷ್​ ಮಾಡ್ತಾಳೆ ಬಿಟ್ರೆ... ಜಾಹ್ನವಿ ಮರ್ಯಾದೆ ಹೀಗೆ ತೆಗೆಯೋದಾ ಅಪ್ಪ ಬೋನಿ ಕಪೂರ್​?

ಅದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ, ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್​ ಫುಡ್​ ಪಾಯ್ಸನ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಟ್ರೀಟ್​ಮೆಂಟ್​ ಬಳಿಕ ಅವರನ್ನು ಡಿಸ್​ಚಾರ್ಜ್ ಮಾಡಲಾಗಿತ್ತು. ಅಂಬಾನಿ ಮದ್ವೆಯಲ್ಲಿ ನಟಿಗೆ ಫುಡ್​ ಪಾಯ್ಸನ್​ ಆಗಿದೆ ಎಂಬ ಸುದ್ದಿ ಹರಡಿತ್ತು. ನಂತರ ತಂದೆ ಬೋನಿ ಕಪೂರ್​ ವಿಮಾನ ನಿಲ್ದಾಣದ ಒಳಗಿರುವ ಆಹಾರ ಸೇವಿಸಿ ಮಗಳಿಗೆ ಹೀಗೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಕುತೂಹಲ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಜಾಹ್ನವಿ ಕಪೂರ್​ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಬೇರೆ ಊರಿಗೆ ಹೋಗಿದ್ದರು. ಆದ್ದರಿಂದ ಆಸ್ಪತ್ರೆಯಲ್ಲಿ ನಟಿಯನ್ನು ಶಿಖರ್​ ಪಹರಿಯಾ ಅಮ್ಮನೇ ನೋಡಿಕೊಂಡಿರುವುದಾಗಿ ವರದಿಯಾಗಿದೆ. ರಾತ್ರಿಯಿಡೀ ಭಾವಿ ಸೊಸೆಯನ್ನು ಶಿಖರ್​ ಅವರ ತಾಯಿ ಸ್ಮೃತಿ ಶಿಂಧೆ ಉಪಚರಿಸಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಜಾಹ್ನವಿ ಮತ್ತು ಶಿಖರ್​ ಮದುವೆಯಾಗುವುದು ಬಹುತೇಕ ನಿಶ್ಚಿತವಾಗಿದೆ ಎಂದು ಬಿ-ಟೌನ್​ ಮೂಲಗಳು ತಿಳಿಸುತ್ತಿವೆ. 

ಅಂದಹಾಗೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ ಈಕೆ ಉದ್ಯಮಿ ಶಿಖರ್​ ಪಹರಿಯಾ ಜೊತೆ ಸುತ್ತಾಟ ಮಾಡುತ್ತಿದ್ದಾರೆ. ದೇಶ-ವಿದೇಶ ತಿರುಗುತ್ತಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿದ್ದವು.

ಜಾಹ್ನವಿ ಪೋಸ್ಟರ್​ಗೆ ಮುತ್ತಿಟ್ಟ ರೇಖಾ: ಶ್ರೀದೇವಿ ಪುತ್ರಿ ಮೇಲೆ ಇಷ್ಟೊಂದು ಅಕ್ಕರೆಗೆ ಕಾರಣವೂ ಇದೆ....