Asianet Suvarna News Asianet Suvarna News

ಜಾಹ್ನವಿ ಪೋಸ್ಟರ್​ಗೆ ಮುತ್ತಿಟ್ಟ ರೇಖಾ: ಶ್ರೀದೇವಿ ಪುತ್ರಿ ಮೇಲೆ ಇಷ್ಟೊಂದು ಅಕ್ಕರೆಗೆ ಕಾರಣವೂ ಇದೆ....

ಜಾಹ್ನವಿ ಕಪೂರ್​ ಅವರ ಹೊಸ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅವರ ಪೋಸ್ಟರ್​ಗೆ ನಟಿ ರೇಖಾ ಮುತ್ತಿಟ್ಟಿದ್ದಾರೆ. ಇವರ ಬಾಂಧವ್ಯದ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿವೆ. 
 

Rekha kisses Janhvi Kapoors poster at Ulajh screening fans say she is filling in for Sridevi suc
Author
First Published Aug 4, 2024, 11:27 AM IST | Last Updated Aug 4, 2024, 11:27 AM IST

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ನಟನೆಯ ಸ್ಪೈ ಥ್ರಿಲ್ಲರ್ ಉಲಜ್ ಚಿತ್ರ ಮೊನ್ನೆ ಆಗಸ್ಟ್​ 2ರಂದು  ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ  ಬಿ-ಟೌನ್ ಖ್ಯಾತನಾಮರಾದ ಕರಣ್ ಜೋಹರ್, ಅರ್ಜುನ್ ಕಪೂರ್, ಗುಲ್ಶನ್ ದೇವಯ್ಯ, ಪೂಜಾ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆದರೆ ಅವರಲ್ಲಿ ಹೈಲೈಟ್​ ಆದವರು,  ಹಿರಿಯ ನಟಿ ರೇಖಾ. ಹೌದು. ನಟಿ ರೇಖಾ ವೇದಿಕೆಯ ಮೇಲೆ ಬರುತ್ತಿದ್ದಂತೆಯೇ ಅಲ್ಲಿ ಹಾಕಲಾಗಿದ್ದ ಜಾಹ್ನವಿ ಕಪೂರ್​ ಫೋಟೋಗೆ ಮುತ್ತಿಕ್ಕುವ ಮೂಲಕ ಪ್ರೀತಿಯ ಧಾರೆಯನ್ನೇ ಹರಿಸಿದರು.  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮೇಲಿನ ಈ ಪರಿ ಪ್ರೀತಿಗೆ ಅಲ್ಲಿದ್ದವರು ಒಂದು ಕ್ಷಣ ಭಾವುಕರೂ ಆದರು. ಆ ಬಳಿಕ ಜಾಹ್ನವಿಯ ಜೊತೆ ರೇಖಾ ಹೆಜ್ಜೆ ಹಾಕಿದರು. ಆಗಲೂ ಅಮ್ಮನ ಮಮಕಾರ ರೇಖಾರ ಮೊಗದಲ್ಲಿ ತೋರುತ್ತಿತ್ತು. ಖುದ್ದು ತಮ್ಮ ಪುತ್ರಿಯೇ ದೊಡ್ಡ ಸಾಧನೆ ಮಾಡಿದ ಸಾರ್ಥಕ್ಯ ಭಾವ ಅವರ ಮುಖದಲ್ಲಿ ಕಾಣಿಸುತ್ತಿತ್ತು.

ಅಷ್ಟಕ್ಕೂ ಬಾಲಿವುಡ್‌ನ ಇಬ್ಬರು ಸುಂದರ ಸಾಮ್ರಾಜ್ಞಿಗಳೆಂದರೆ ಶ್ರೀದೇವಿ ಮತ್ತು ರೇಖಾ ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರೀದೇವಿ ಪುತ್ರಿಯ ಮೇಲೆ ರೇಖಾ ಅವರಿಗೆ ಯಾಕಿಷ್ಟು ವ್ಯಾಮೋಹ ಎನ್ನುವುದಕ್ಕೆ ಕಾರಣವೂ ಇದೆ. ಅದೇನೆಂದರೆ ಶ್ರೀದೇವಿ ಬಾಲಿವುಡ್​ಗೆ ಪದಾರ್ಪಣೆ ಮಾಡುವ ಮುಂಚೆಯೇ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದವರು ರೇಖಾ. ಆದರೆ ಅವರಿಬ್ಬರ ಸ್ನೇಹ ಸಂಬಂಧ ತುಂಬಾ ಚೆನ್ನಾಗಿತ್ತು. ಇಬ್ಬರೂ ಸ್ನೇಹಿತೆಯರಾಗಿದ್ದರು. ಮಾತ್ರವಲ್ಲದೇ ರೇಖಾ ಅವರು ಯಾವಾಗಲೂ ಶ್ರೀದೇವಿಯನ್ನು ಸದಾ ಬೆಂಬಲಿಸುತ್ತಿದ್ದರು. ಶ್ರೀದೇವಿ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದ ಸಂದರ್ಭದಲ್ಲಿ ಅವರಿಗೆ ಡಬ್ಬಿಂಗ್​ ಮಾಡಿದ್ದು ಕೂಡ ರೇಖಾ. ಅಷ್ಟೇ ಅಲ್ಲದೇ,  ಚಾಂದನಿ ಚಿತ್ರ ಶ್ರೀದೇವಿಗೆ ದೊಡ್ಡ ಬ್ರೇಕ್​ ಕೊಟ್ಟ ಚಿತ್ರವದು. ಅದಕ್ಕೆ ಕಾರಣ ಕೂಡ ರೇಖಾ ಅವರೇ. ಏಕೆಂದರೆ, ಈ ಚಿತ್ರಕ್ಕೆ ರೇಖಾಗೆ ಮೊದಲು ಆಫರ್ ಮಾಡಲಾಗಿತ್ತು. ಆದರೆ ರೇಖಾ ಅವರು ಆ ಸಂದರ್ಭದಲ್ಲಿ ಬಿಜಿ ಇದ್ದ ಕಾರನ,  ಶ್ರೀದೇವಿ ಅವರನ್ನು ಯಶ್ ಚೋಪ್ರಾಗೆ ಪರಿಚಯಿಸಿದ್ದರು.  ಹೀಗೆ ಅವರಿಬ್ಬರೂ ತುಂಬಾ ಸ್ನೇಹಿತೆಯರಾಗಿದ್ದರು.

ಮದುವೆಗೆ ಗಂಡೇ ಬೇಕೆಂದೇನೂ ಇಲ್ಲ, ಮೂರು ಮದ್ವೆಯಾಗಿದ್ದೇನೆ: ಮನದಾಳದ ಮಾತು ತೆರೆದಿಟ್ಟ ರೇಖಾ!

ರೇಖಾ ಅವಿವಾಹಿತರಾಗಿಯೇ ಉಳಿದರು. ಆದರೆ ತಮಗೆ ಮಕ್ಕಳು ಇಲ್ಲ ಎನ್ನುವ ಕೊರಗನ್ನು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ರಿಂದ ದೂರ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಶ್ರೀದೇವಿಯಷ್ಟೇ ಪ್ರೀತಿ ಜಾಹ್ನವಿ ಅವರ ಮೇಲೆ ಕೂಡ. ಇದೇ ಕಾರಣಕ್ಕೆ ಇಂಥದ್ದೊಂದು ಭಾವುಕ ಕ್ಷಣಕ್ಕೆ ವೇದಿಕೆ ಸಾಕ್ಷಿಯಾಯಿತು. ಜಾಹ್ನವಿ ಕೂಡ ರೇಖಾ ಜೊತೆಗೆ ಹೆಜ್ಜೆ ಹಾಕುತ್ತಾ ಅಮ್ಮನನ್ನು ಕಳೆದುಕೊಂಡ ನೋವನ್ನು ಮರೆಯುವಂತೆ ಕಾಣಿಸಿತು.  
 
ಇನ್ನು ಉಲಜ್​ ಚಿತ್ರದ ಕುರಿತು ಹೇಳುವುದಾದರೆ, ಜಾಹ್ನವಿ ಕಪೂರ್ ಅವರು ಕಿರಿಯ ಡೆಪ್ಯುಟಿ ಹೈ ಕಮಿಷನರ್ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ, ಇದು ಅವರಿಗೆ ಸವಾಲಿನ ಪಾತ್ರವಾಗಿದೆ. ಹಿಂದೆಂದೂ ಈ ರೀತಿಯ ಪಾತ್ರದಲ್ಲಿ ಜಾಹ್ನವಿ ನಟಿಸಿರಲಿಲ್ಲ.  ಉಲಜ್ ಅನ್ನು ಸುಧಾಂಶು ಸರಿಯಾ ಮತ್ತು ಪರ್ವೀಜ್ ಶೇಖ್ ಬರೆದಿದ್ದಾರೆ, ಅತಿಕಾ ಚೌಹಾನ್ ಅವರ ಸಂಭಾಷಣೆಯೊಂದಿಗೆ ಮತ್ತು ಜಂಗ್ಲೀ ಪಿಕ್ಚರ್ಸ್ ನಿರ್ಮಿಸಿದೆ.

ಐಶ್ವರ್ಯ ಹೆಸರಿನ ಕಾಲೇಜು ನಿರ್ಮಾಣ ಅರ್ಧಕ್ಕೆ ಕೈಬಿಟ್ಟ ಅಮಿತಾಭ್​! ಸಿಟ್ಟುಗೊಂಡ ಗ್ರಾಮಸ್ಥರು ಮಾಡಿದ್ದೇನು ನೋಡಿ...

 

Latest Videos
Follow Us:
Download App:
  • android
  • ios