Asianet Suvarna News Asianet Suvarna News

ಟಾಯ್ಲೆಟ್​ಗೆ ಹೋದಾಗ ಫ್ಲಷ್​ ಮಾಡ್ತಾಳೆ ಬಿಟ್ರೆ... ಜಾಹ್ನವಿ ಮರ್ಯಾದೆ ಹೀಗೆ ತೆಗೆಯೋದಾ ಅಪ್ಪ ಬೋನಿ ಕಪೂರ್​?

ಟಾಯ್ಲೆಟ್​ಗೆ ಹೋದಾಗ ಫ್ಲಷ್​ ಮಾಡ್ತಾಳೆ ಬಿಟ್ರೆ... ಓಪನ್ನಾಗೇ ಜಾಹ್ನವಿ ಮರ್ಯಾದೆ ಹೀಗೆ ತೆಗೆಯೋದಾ ಬೋನಿ ಕಪೂರ್​?
 

Boney Kapoor leaves daughter Janhvi embarrassed kapoor as he reveals her secrets suc
Author
First Published Aug 20, 2024, 9:34 PM IST | Last Updated Aug 20, 2024, 9:34 PM IST

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ನಟನೆಯ ಸ್ಪೈ ಥ್ರಿಲ್ಲರ್ ಉಲಜ್ ಚಿತ್ರ ಮೊನ್ನೆ ಆಗಸ್ಟ್​ 2ರಂದು  ಬಿಡುಗಡೆಯಾಗಿದೆ. ಇದರ ಖುಷಿಯಲ್ಲಿಯೇ ನಟಿ ಇದ್ದಾರೆ. ಇದರ ನಡುವೆಯೇ ಅಪ್ಪ ಬೋನಿ ಕಪೂರ್​, ಮಗಳ ಮರ್ಯಾದೆಯನ್ನು ಹರಾಜು ಮಾಡಿದ್ದಾರೆ. ಓಪನ್​ ಆಗಿಯೇ ಮಗಳ ನಡವಳಿಕೆ ಕುರಿತು ಅವರು ಮಾತನಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ! ಅಷ್ಟಕ್ಕೂ ಬೋನಿ ಕಪೂರ್​ ಹೇಳಿದ್ದೇನೆಂದರೆ, ಮಗಳಿಗೆ ಯಾವುದೇ ಕೆಲಸ ಮಾಡಲು ಬರುವುದಿಲ್ಲ. ಹಾಸಿಗೆಯ ಮೇಲೆ ಎಲ್ಲಾ ಬಟ್ಟೆ ಹರಡಿ ಇಟ್ಟಿರುತ್ತಾಳೆ. ಅವಳು ಎಷ್ಟು ಬೇಜವಾಬ್ದಾರಿ ಎಂದರೆ, ಟೂಥ್​ಪೇಸ್ಟ್​ ಹಚ್ಚಿಕೊಂಡ್ರೆ ಅದರ ಮುಚ್ಚಳವನ್ನು ನಾನೇ ಬಾತ್​ರೂಮ್​ಗೆ ಹೋಗಿ ಹಾಕಬೇಕು ಎಂದಿದ್ದಾರೆ. ಅಷ್ಟೊತ್ತಿಗಾಗಲೇ ಜಾಹ್ನವಿ ಸಾಕು ಅಪ್ಪಾ, ಮರ್ಯಾದೆ ತೆಗೆಯಬೇಡಿ ಎಂದಿದ್ದಾರೆ. ಕಪಿಲ್​ ಶರ್ಮಾ ಅವರ ಎದುರು ಬೋನಿ ಕಪೂರ್​ ಈ ವಿಷಯವನ್ನು ಹೇಳಿದ್ದಾರೆ.

ಇಲ್ಲಿಗೆ ಸುಮ್ಮನಾಗದ ಬೋನಿ ಕಪೂರ್​, ಪುಣ್ಯಕ್ಕೆ ಇವಳು ಟಾಯ್ಲೆಟ್​ಗೆ ಹೋದಾಗ ಫ್ಲಷ್​ ಮಾಡುತ್ತಾಳೆ ಅಷ್ಟೇ ಎಂದಿದ್ದಾರೆ. ಇದನ್ನು ಕೇಳಿ ಕಪಿಲ್​ ಶರ್ಮಾ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಆಗ ಜಾಹ್ನವಿ, ಅಯ್ಯೋ ನನ್ನ ವರ್ಣನೆಯಿಂದ ಶುರುವಾದ ಈ ಎಪಿಸೋಡ್​ ಫ್ಲಷ್​ ತನಕ ಬಂದು ಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅದಕ್ಕೆ ನೆಟ್ಟಿಗರು ಪುಣ್ಯ ತೊಳೆಸಲು ಬೇರೆಯವರು ಬರಬೇಕಿದ್ರೆ ಕಷ್ಟ ಇತ್ತು ಎಂದು ನಟಿಯ ಕಾಲೆಳೆದಿದ್ದಾರೆ. ಇನ್ನು ಕೆಲವರು, ಬೋನಿ ಕಪೂರ್​ ಥೇಟ್ ಭಾರತೀಯ ಅಪ್ಪನೇ. ಹೆಣ್ಣು ಮಕ್ಕಳು ಎಂದರೆ ಅಪ್ಪಂದಿರಿಗೆ ತುಂಬಾ ಇಷ್ಟ. ಬೋನಿ ಕಪೂರ್​ ಕೂಡ ಜಾಹ್ನವಿಯನ್ನು ಈ ಪರಿ ಪ್ರೀತಿಸುತ್ತಾರೆ ಎಂದು ಇದರಿಂದಲೇ ತಿಳಿಯುತ್ತಿದೆ ಎಂದಿದ್ದಾರೆ. 

ಆಸ್ಪತ್ರೆ ಸೇರಿದ್ದ ಜಾಹ್ನವಿ ಕಪೂರ್​ಗೆ ಭಾವಿ ಅತ್ತೆಯ ಆರೈಕೆ! ಶ್ರೀದೇವಿ ಪುತ್ರಿಯ ಮದ್ವೆ ಫಿಕ್ಸ್​ ಆಗೋಯ್ತಾ?

ಅಂದಹಾಗೆ, ಸದ್ಯ ಬಿ-ಟೌನ್​ನಲ್ಲಿ ಜಾಹ್ನವಿ ಕಪೂರ್​ ಮದುವೆಯ ವಿಷಯ ಓಡಾಡುತ್ತಿದೆ. ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್​ ಮತ್ತು ಅವರ ಬಾಯ್​ಫ್ರೆಂಡ್​ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್​ ಪಹರಿಯಾ (Shikhar Pahariya) ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು.  ಏಕೆಂದರೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು  ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.  ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್​ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್​ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.  

ಅದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ, ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್​ ಫುಡ್​ ಪಾಯ್ಸನ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಟ್ರೀಟ್​ಮೆಂಟ್​ ಬಳಿಕ ಅವರನ್ನು ಡಿಸ್​ಚಾರ್ಜ್ ಮಾಡಲಾಗಿತ್ತು. ಅಂಬಾನಿ ಮದ್ವೆಯಲ್ಲಿ ನಟಿಗೆ ಫುಡ್​ ಪಾಯ್ಸನ್​ ಆಗಿದೆ ಎಂಬ ಸುದ್ದಿ ಹರಡಿತ್ತು. ನಂತರ ತಂದೆ ಬೋನಿ ಕಪೂರ್​ ವಿಮಾನ ನಿಲ್ದಾಣದ ಒಳಗಿರುವ ಆಹಾರ ಸೇವಿಸಿ ಮಗಳಿಗೆ ಹೀಗೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಕುತೂಹಲ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಜಾಹ್ನವಿ ಕಪೂರ್​ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಬೇರೆ ಊರಿಗೆ ಹೋಗಿದ್ದರು. ಆದ್ದರಿಂದ ಆಸ್ಪತ್ರೆಯಲ್ಲಿ  ನಟಿಯನ್ನು ಶಿಖರ್​ ಪಹರಿಯಾ ಅಮ್ಮನೇ ನೋಡಿಕೊಂಡಿರುವುದಾಗಿ ವರದಿಯಾಗಿದೆ. ರಾತ್ರಿಯಿಡೀ ಭಾವಿ ಸೊಸೆಯನ್ನು ಶಿಖರ್​ ಅವರ ತಾಯಿ ಸ್ಮೃತಿ ಶಿಂಧೆ ಉಪಚರಿಸಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಜಾಹ್ನವಿ ಮತ್ತು ಶಿಖರ್​ ಮದುವೆಯಾಗುವುದು ಬಹುತೇಕ ನಿಶ್ಚಿತವಾಗಿದೆ ಎಂದು ಬಿ-ಟೌನ್​ ಮೂಲಗಳು ತಿಳಿಸುತ್ತಿವೆ. 

ಬಟ್ಟೆ ಸರಿದಿದೆ... ಕಿವಿಯೋಲೆ ಅಡ್ಡಾದಿಡ್ಡಿಯಾಗಿದೆ... ಮಂಚದಿಂದ ಎದ್ದು ಬಂದ್ಯಾ? ಜಾಹ್ನವಿ ಕಪೂರ್​ ಟ್ರೋಲಿಗರ ಪ್ರಶ್ನೆ

 
 
 
 
 
 
 
 
 
 
 
 
 
 
 

A post shared by GlamBlitz (@glamblitz_)

Latest Videos
Follow Us:
Download App:
  • android
  • ios