ಬಾಲಿವುಡ್‌ನಲ್ಲಿ ಮದುವೆಗಳು ಆದಂತೆ ಡೈವೋರ್ಸ್‌ಗಳೂ ಆಗುವುದು ಸಾಮಾನ್ಯ. ಸಾಮಾನ್ಯವಾಗಿ ಡೈವೋರ್ಸ್ ಕೊಡುತ್ತಿರುವ ಗಂಡ ಬಹು ಬೇಡಿಕೆಯ ಹೀರೋ ಆಗಿದ್ದು, ಪತ್ನಿ ಅಂಥದೇನೂ ಬ್ಯುಸಿ ಕೆರಿಯರ್ ಅಥವಾ ಉದ್ಯೋಗ ಇಲ್ಲದವಳಾಗಿದ್ದರೆ, ಆಕೆಗೆ ಸೂಕ್ತ ಕಾನೂನು ನೆರವು ಸಿಕ್ಕಿದರೆ ದೊಡ್ಡ ಮೊತ್ತದ ಪರಿಹಾರವನ್ನು ಡಿವೋರ್ಸಿ ಗಂಡ ಕೊಡಬೇಕಾಗುತ್ತದೆ.

ಕೆಲವೊಮ್ಮೆ ಇಬ್ಬರೂ ಸಮಾನ ಶ್ರೀಮಂತಿಕೆಯವರಾಗಿದ್ದರೆ, ಆಗ ಮಾಸಾಶನದ ರಗಳೆ ಇರುವುದಿಲ್ಲವಾದರೂ, ಸಾಮಾನ್ಯವಾಗಿ ಗಂಡನೇ ಹೆಂಡತಿಗೆ ದೊಡ್ಡ ಮೊತ್ತದ ಪರಿಹಾರ ಕಕ್ಕುವುದು ವಾಡಿಕೆ. ಬಾಲಿವುಡ್‌ನ ಅಂಥ ಕೆಲವು ದುಬಾರಿ ಡೈವೋರ್ಸ್‌ಗಳು ಇಲ್ಲಿವೆ.

ಸೈಫ್ ಅಲಿ ಖಾನ್- ಅಮೃತಾ ಸಿಂಗ್

ಸೈಫ್ ಅಲಿ ಖಾನ್ ಹಾಗೂ ಅಮೃತಾ ಅವರದು 13 ವರ್ಷಗಳ ದಾಂಪತ್ಯ. ನಂತರ ಅವರಿಬ್ಬರೂ ಬೇರೆ ಬೇರೆ ಆದರು. ಇದಾದ ಸ್ವಲ್ಪ ಸಮಯದ ಬಳಿಕ ಒಂದು ಇಂಟರ್ವ್ಯೂನಲ್ಲಿ ಅಮೃತಾಗೆ ಕೊಡಬೇಕಾಗಿ ಬಂದ ಪರಿಹಾರ ಮೊತ್ತದ ಬಗ್ಗೆ ಸೈಫ್ ಹೇಳಿದ್ದು ಹೀಗೆ- ನಾನು ಅಮೃತಾಗೆ 5 ಕೋಟಿ ರೂಪಾಯಿಗಳಷ್ಟು ಪರಿಹಾರ ಹಣ ಕೊಡಬೇಕಿದೆ.

ಈಗಾಗಲೇ 2.5 ಕೋಟಿ ಕೊಟ್ಟಿದ್ದೇನೆ. ಅಷ್ಟನ್ನೂ ಒಂದೇ ಸಲ ಕೊಡಲು ನಾನೇನು ಶಾರುಖ್ ಖಾನ್ ಅಲ್ಲ. ನನ್ನ ಬಳಿ ಅಷ್ಟೊಂದು ಹಣವೂ ಇಲ್ಲ. ಇದಲ್ಲದೆ ಪ್ರತಿ ತಿಂಗಳೂ, ಆಕೆಯ ಮಗನಿಗೆ 18 ವರ್ಷ ಆಗುವವರೆಗೆ ನಾನು ಒಂದು ಲಕ್ಷದಷ್ಟು ಹಣ ಕೊಡಬೇಕಿದೆ. ನಾನು ಕೊಡದೇ ಇರೋಲ್ಲ. ಸಾಯದೇ ಹೋದರೆ ಕೊಟ್ಟೇ ಕೊಡುತ್ತೇನೆ ಎಂದಿದ್ದರು.

ಕರೀನಾ ಕಪೂರ್‌ಗೆ ಹೆಣ್ಣು ಮಗು ಬೇಕಂತೆ! ಮತ್ತೇನಿವೆ ನಟಿಯ ಬಯಕೆ? ...

ಕರಿಷ್ಮಾ ಕಪೂರ್- ಸಂಜಯ್ ಕಪೂರ್

ಕರಿಷ್ಮಾ ಕಪೂರ್ ಹಾಗೂ ಉದ್ಯಮಿ ಸಂಜಯ್ ಕಪೂರ್ ಅವರ ಮದುವೆ 11 ವರ್ಷ ಬಾಳಿತು. 2014ರಲ್ಲಿ ಅವರಿಗೆ ಡಿವೋರ್ಸ್ ಆಯ್ತು. ಮುಂಬಯಿಯಲ್ಲಿರುವ ಸಂಜಯ್‌ನ ತಂದೆಯ ಭವ್ಯ ಬಂಗಲೆ ಕರಿಷ್ಮಾ ಹೆಸರಿಗೆ ಟ್ರಾನ್ಸ್‌ಫರ್ ಮಾಡಲಾಯಿತು. 14 ಕೋಟಿ ರೂಪಾಯಿಗಳ ಮೌಲ್ಯದ ಬಾಂಡ್‌ ಅನ್ನು ಸಂಜಯ್ ಕಪೂರ್ ಖರೀದಿಸಿ ಕರಿಷ್ಮಾ ಹಾಗೂ ಮಕ್ಕಳ ಹೆಸರಿನಲ್ಲಿ ಇಟ್ಟ. ಇದು ಪ್ರತಿ ತಿಂಗಳೂ 14 ಲಕ್ಷ ರೂಪಾಯಿಯಷ್ಟು ಆದಾಯ ತಂದುಕೊಡುತ್ತಿದೆ.

ಫರ್ಹಾನ್ ಅಕ್ತರ್- ಅಧುನಾ ಭವಾನಿ

15 ವರ್ಷಗಳ ದಾಂಪತ್ಯದ ಬಳಿಕ ಫರ್ಹಾನ್ ಅಕ್ತರ್ ಹಾಗೂ ಅಧುನಾ ಭವಾನಿ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದಾರೆ. ಇಬ್ಬರ ಜಂಟಿ ಹೆಸರಿನಲ್ಲಿದ್ದ ಬಂಗಲೆಯನ್ನು ಫರ್ಹಾನ್, ಅಧುನಾಳ ಹೆಸರಿಗೆ ಟ್ರಾನ್ಸ್‌ಫರ್ ಮಾಡಬೇಕಾಯ್ತು. 10 ಕೋಟಿ ರೂ.ಗೆ ಕಡಿಮೆಯಿಲ್ಲದ ಪರಿಹಾರ ಮೊತ್ತವನ್ನೂ ಕೊಡಬೇಕಾಯಿತು.

ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ ಲವ್‌ಸ್ಟೋರಿ! ...

ಸಂಜಯ್ ದತ್- ರಿಯಾ ಪಿಳ್ಳೈ

ಮಾನ್ಯತಾ ದತ್ತ್ ಅನ್ನು ಮದುವೆಯಾಗುವುದಕ್ಕೆ ಮೊದಲು ಸಂಜಯ್ ದತ್, ರಿಯಾ ಪಿಳ್ಳೈ ಅನ್ನು ಮದುವೆಯಾಗಿದ್ದ. ಹತ್ತು ವರ್ಷಗಳ ದಾಂಪತ್ಯದ ಬಳಿಕ ಬೇರೆಯಾದರು. ಸುಮಾರು 8 ಕೋಟಿ ರೂ. ಮೌಲ್ಯದ ಒಂದು ಫ್ಲ್ಯಾಟು ಹಾಗೂ ಒಂದು ಕಾರನ್ನು ಪರಿಹಾರವಾಗಿ ರಿಯಾಗೆ ಸಂಜಯ್ ನೀಡಿದ್ದಾರೆ ಎನ್ನುವ ಸುದ್ದಿಗಳಿವೆ.

ಪ್ರಭುದೇವ- ರಾಮಲತಾ

ದಕ್ಷಿಣದ ಪಾಪ್ಯುಲರ್ ನಟ ಪ್ರಭುದೇವ ಹಾಗೂ ರಾಮಲತಾ 2010ರಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ಸುದ್ದಿಯ ಪ್ರಕಾರ, ಪ್ರಭುದೇವ ತನ್ನ ಗಂಡು ಮಕ್ಕಳಿಬ್ಬರಿಗೆ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನೂ, ರಾಮ್‌ಲತಾಗೆ 10 ಲಕ್ಷ ರೂಪಾಯಿ ನಗದನ್ನೂ ನೀಡಿದ್ದಾನೆ. ಮೂರು ಮನೆಗಳು, ಎರಡು ಕಾರನ್ನು ರಾಮಲತಾ ಹಾಗೂ ತನ್ನಿಬ್ಬರು ಮಕ್ಕಳಿಗೆ ನೀಡಿದ್ದಾನೆ ಎನ್ನಲಾಗಿದೆ. 

ಈ ನಟನಿಗಾಗಿ ಕರೀನಾ ರಕ್ತನಾಳವನ್ನೇ ಕತ್ತರಿಸಿ ಕೊಂಡಿದ್ರಾ? ...

ಹೃತಿಕ್ ರೋಶನ್- ಸೂಸನ್

ಅತ್ಯಂತ ದುಬಾರಿ ಡೈವೋರ್ಸ್ ಎಂದರೆ ಹೃತಿಕ್ ರೋಶನ್- ಸುಸಾನ್ನೆ ನಡುವಿನದು ಎನ್ನಬಹುದು. ಒಂದು ವರದಿಯ ಪ್ರಕಾರ ಸುಸಾನ್ನೆ ಹೃತಿಕ್‌ನಿಂದ 400 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದಳು. ಆದರೆ ಅದಕ್ಕೆ ಹೃತಿಕ್ ಒಪ್ಪಲಿಲ್ಲ. ನಂತರ ಸೆಟಲ್‌ಮೆಂಟ್ ನಡೆದು 100 ಕೋಟಿ ರೂಪಾಯಿಗೆ ಆಕೆ ಒಪ್ಪಿದ್ದಳು ಎಂದು ಸುದ್ದಿಯಾಗಿತ್ತು. ಆದರೆ ಜೀವನಾಂಶದ ಪ್ರಸಕ್ತಿಯೇ ನಮ್ಮ ನಡುವೆ ಇಲ್ಲ ಎಂದು ಹೃತಿಕ್ ಹಾಗೂ ಸೂಸನ್ ಇಬ್ಬರೂ ಹೇಳಿಕೆ ಕೊಟ್ಟಿದ್ದರು.