ಈ ನಟನಿಗಾಗಿ ಕರೀನಾ ರಕ್ತನಾಳವನ್ನೇ ಕತ್ತರಿಸಿ ಕೊಂಡಿದ್ರಾ?
ಕರೀನಾ ಕಪೂರ್ ಪ್ರತಿಭೆ ಮತ್ತು ಸೌಂದರ್ಯ ಹೊಂದಿರುವ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಅವರ ವೃತ್ತಿ ಜೀವನದ ಹೊರತಾಗಿ, ಅವರ ಆಫೇರ್ ಮತ್ತು ಲಿಂಕಪ್ ಹೆಚ್ಚು ಗಮನ ಸೆಳೆಯಿತು. ಕರೀನಾ ಈ ನಟನಿಗಾಗಿ ತನ್ನ ರಕ್ತನಾಳಗಳನ್ನು ಕತ್ತರಿಸಿ ಕೊಂಡಿದ್ದರೆಂದೂ ಒಮ್ಮೆ ಸುದ್ದಿಯಾಗಿತ್ತು. ಸತ್ಯ ಏನು? ಆ ನಟ ಯಾರು?
ತಮ್ಮ ಲೈಫ್‌ನ ಪ್ರೀತಿ ಸೈಫ್ ಅಲಿ ಖಾನ್ ಅವರನ್ನು ಕಂಡುಕೊಳ್ಳುವ ಮೊದಲು ಅನೇಕ ನಟರೊಂದಿಗೆ ರಿಲೆಷನ್‌ಶಿಪ್‌ನಲ್ಲಿದ್ದರು ಕರೀನಾ ಕಪೂರ್.
ಕರೀನಾ ಕಪೂರ್ ನಟನಿಗಾಗಿ ತನ್ನ ರಕ್ತನಾಳಗಳನ್ನು ಕತ್ತರಿಸಿದ್ದರು ಎಂದೊಮ್ಮೆ ದೊಡ್ಡ ಸುದ್ದಿಯಾಗಿತ್ತು.
ತನ್ನ ಜಬ್ ವಿ ಮೆಟ್ ಕೋಸ್ಟಾರ್ ಶಾಹಿದ್ ಕಪೂರ್ ಜೊತೆಯ ಸಂಬಂಧ ಯಾವಾಗಲೂ ಟಾಕ್ ಅಫ್ ದಿ ಟೌನ್ ಆಗಿತ್ತು. ಆದರೆ ಚಿತ್ರ ಬಿಡುಗಡೆಯಾದ ಕೂಡಲೇ ಅವರು ಬ್ರೇಕಪ್ ಆದರು.
ಖುಷಿ ಸಿನಿಮಾ ಸಹನಟ ಫರ್ದೀನ್ ಖಾನ್ ಜೊತೆ ದೀರ್ಘ ಕಾಲದವರೆಗೆ ಸಂಬಂಧವನ್ನು ಹೊಂದಿದ್ದರು ಮತ್ತು ನಂತರ ಬೇರೆಯಾದರು.
ನಂತರ ನಟಿಯ ಹೆಸರನ್ನು ಹೃತಿಕ್ ರೋಷನ್ ಅವರೊಂದಿಗೂ ಲಿಂಕ್ ಮಾಡಲಾಗಿತ್ತು. ಅವರ ತೆರೆ ಮೇಲಿನ ಕೆಮಿಸ್ಟ್ರಿ ಮತ್ತು ಡೇಟಿಂಗ್ ವದಂತಿಗಳು ಸಾಕಷ್ಟು ಗಮನ ಸೆಳೆದಿದ್ದವು.
ಕರೀನಾ ಹೃತಿಕ್‌ಗಾಗಿ ತನ್ನ ರಕ್ತನಾಳಗಳನ್ನು ಕತ್ತರಿಸಿದಳು ಎಂದು ವರದಿಗಳು ಬಂದವು.
ನಂತರ, ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಕರೀನಾ ಲಿಂಕ್-ಅಪ್ ವದಂತಿಗಳ ಬಗ್ಗೆ ಮಾತನಾಡಿದ್ದರು.
'ಹೃತಿಕ್ ಅವರೊಂದಿಗೆ ನನ್ನನ್ನು ಲಿಂಕ್ ಮಾಡುವ ಲೇಖನಗಳ ಬಗ್ಗೆ ಅತ್ಯಂತ ಆಘಾತಕಾರಿ ಭಾಗವೆಂದರೆ, ನನ್ನ ವೃತ್ತಿ ಜೀವನ ಬಿಟ್ಟು ಅವನ ಹಿಂದೆ ಓಡಲು ನಾನು ಸಿದ್ಧನಿದ್ದೇನೆ ಎಂಬ ಮಾತು. ದಯವಿಟ್ಟು! ಒಬ್ಬ ಗಂಡಸಿಗಾಗಿ ಇದು ಎಂದಿಗೂ ಸಾಧ್ಯವಿಲ್ಲ,' ಎಂದು ಹೇಳಿದ್ದರು ಬಾಲಿವುಡ್ ಬೇಬೋ.
ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿರುವ ಕರೀನಾ ಕಪೂರ್ ಈಗ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.