ದಕ್ಷಿಣದ ಸೂಪರ್ ಸ್ಟಾರ್ ಧನುಷ್  ಅವೆಂಜರ್ಸ್: ಎಂಡ್‌ಗೇಮ್ ನಿರ್ದೇಶಕ ಜೋಡಿ - ರುಸ್ಸೋ ಸಹೋದರರ ಬಹು ನಿರೀಕ್ಷಿತ ಚಿತ್ರ ದಿ ಗ್ರೇ ಮ್ಯಾನ್ ನಲ್ಲಿ ನಟಿಸಲಿದ್ದಾರೆ. ಮುಂಬರುವ ದೊಡ್ಡ-ಬಜೆಟ್ ಹಾಲಿವುಡ್ ಸಿನಿಮಾದಲ್ಲಿ ನಟ ಕ್ರಿಸ್ ಇವಾನ್ಸ್, ರಿಯಾನ್ ಗೊಸ್ಲಿಂಗ್ ಮತ್ತು ಅನಾ ಡಿ ಅರ್ಮಾಸ್ ಅವರ ತಾರಾಗಣಕ್ಕೆ ಧನುಷ್ ಸೇರುವುದು ಪಕ್ಕಾ ಅಗಿದೆ.

2018 ರಲ್ಲಿ ಬಿಡುಗಡೆಯಾದ ದಿ ಎಕ್ಸ್ಟ್ರಾಆರ್ಡಿನರಿ ಜರ್ನಿ ಆಫ್ ದಿ ಫಕೀರ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಂತರ ನಟ ಈಗ ಅಧಿಕೃತವಾಗಿ ಎರಡನೇ ಬಾರಿ ಹಾಲಿವುಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮದುವೆಯಾಗಿ ಎರಡೇ ತಿಂಗಳಲ್ಲಿ ನೇಹಾ ಪ್ರೆಗ್ನೆಂಟ್..!

200 ಮಿಲಿಯನ್ ಡಾಲರ್‌ ಬಜೆಟ್‌ನಲ್ಲಿ ಸ್ಪೈ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗುತ್ತಿದ್ದು, ಮಾರ್ಕ್ ಗ್ರೇನಿ ಅವರ 2009ರ ಕಾದಂಬರಿ ಆಧಾರಿತ ಸಿನಿಮಾವಾಗಿದೆ ಇದು. ಈ ಚಿತ್ರವು ಹಂತಕ ಮತ್ತು ಮಾಜಿ ಸಿಐಎ ಆಪರೇಟಿವ್ ಕೋರ್ಟ್ ಜೆಂಟ್ರಿಯ ಕುರಿತಾಗಿದೆ.

ಧನುಷ್ ಅಭಿನಯದ ಅಟ್ರಾಂಗಿ ರೇ ಬಾಲಿವುಡ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದರಲ್ಲಿ ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಕೂಡಾ ನಟಿಸಲಿದ್ದಾರೆ. ಧನುಷ್‌ ಹಾಲಿವುಡ್‌ನಲ್ಲಿ ಕಾಣಿಸಿಕೊಳ್ತಿರೋ ಬಗ್ಗೆ ಥ್ರಿಲ್ ಆಗಿದ್ದಾರೆ ಫ್ಯಾನ್ಸ್.