ಯಜುವೇಂದ್ರ ಚಹಾಲ್‌ನಿಂದ ದೂರವಾದ ಬಳಿಕ ಇದೇ ಮೊದಲ ಬಾರಿಗೆ ಧನಶ್ರೀ ವರ್ಮಾ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಧನಶ್ರೀ ವರ್ಮಾ ಭಾವುಕರಾಗಿದ್ದಾರೆ. ಧನಶ್ರೀ ವರ್ಮಾ ಭಾವುಕಳಾಗಲು ಕಾರಣವೇನು?

ಮುಂಬೈ(ಮಾ.13) ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಪರಸ್ಪರ ದೂರವಾಗಿದ್ದಾರೆ. ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಚಹಾಲ್‌ನಿಂದ ದೂರವಾದ ಬಳಿಕ ಧನಶ್ರೀ ವರ್ಮಾ ಪ್ರತಿ ಬಾರಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಯಜುವೇಂದ್ರ ಚಹಾಲ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳ ಗ್ಯಾಲರಿಯಲ್ಲಿ ಆರ್‌ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದರು. ಈ ವೇಳೆ ಧನಶ್ರೀ ವರ್ಮಾ ಮತ್ತೆ ಸುದ್ದಿಯಾಗಿದ್ದರು. ಚಹಲ್‌ನಿಂದ ದೂರವಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಧ್ಯಮದ ಮುಂದೆ ಧನಶ್ರೀ ವರ್ಮಾ ಕಾಣಿಸಿಕೊಂಡಿದ್ದಾರೆ. ಈ ವೇಳೆ ಧನಶ್ರೀ ವರ್ಮಾ ಭಾವುಕರಾಗಿದ್ದಾರೆ. ಧನಶ್ರೀ ವರ್ಮಾ ಭಾವುಕರಾಗಿರುವುದಕ್ಕೆ ಕಾರಣವೂ ಬಹಿರಂಗವಾಗಿದೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಧನಶ್ರೀ ವರ್ಮಾ ನಾನು ತುಂಭಾ ಭಾವುಕಳಾಗಿದ್ದೇನೆ, ಭಾವುಕತೆಯ ಅನುಭವವಾಗುತ್ತಿದೆ ಎಂದು ಧನಶ್ರೀ ವರ್ಮಾ ಹೇಳಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡು ಭಾವುಕರಾಗಿರುವುದಾಗಿ ಧನಶ್ರೀ ವರ್ಮಾ ಹೇಳಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳು ವ್ಯಕ್ತವಾಗಿದೆ. ಕೈಯಲ್ಲಿರುವ ದುಡ್ಡು ಖಾಲಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಭಾವುಕಳಾಗಿರುವ ಸಾಧ್ಯತೆ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಹ್ವಾಶ್ ಜೊತೆ ಕಾಣಿಸಿದ ಬೆನ್ನಲ್ಲೇ ಚಹಲ್ ಜೊತೆಗಿನ ಎಲ್ಲಾ ಫೋಟೋ ಡಿಲೀಟ್ ಮಾಡಿದ ಧನಶ್ರಿ

ಧನಶ್ರೀ ವರ್ಮಾ ಭಾವುಕಳಾಗಿದ್ದೇಕೆ?
ಧನಶ್ರಿ ವರ್ಮಾ ಭಾವುಕರಾಗಲು ಪ್ರಮುಖ ಕಾರಣವಿದೆ. ಬಾಲಿವುಡ್ ನಟ ಅಭಿಷೇಕ್ ಅಭಿನಯದ ಬಿ ಹ್ಯಾಪಿ ಚಿತ್ರ ಪ್ರದರ್ಶನಕ್ಕೆ ಧನಶ್ರೀ ವರ್ಮಾ ಹಾಜರಾಗಿದ್ದರು. ಮುಂಬೈನಲ್ಲಿ ಈ ಚಿತ್ರವನ್ನು ಧನಶ್ರೀ ವರ್ಮಾ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಿಸಿ ಹೊರಬಂದ ಧನಶ್ರೀ ವರ್ಮಾ ಬಳಿ ಮಾಧ್ಯಮ ಪ್ರಶ್ನಿಸಿತ್ತು. ಚಿತ್ರದ ಕುರಿತು ಕೇಳಿತ್ತು. ಇದಕ್ಕೆ ಉತ್ತರಿಸಿದ ಧನಶ್ರೀ ವರ್ಮಾ ಚಿತ್ರ ಉತ್ತಮವಾಗಿದೆ. ನಾನು ತೀರಾ ಭಾವುಕಳಾಗಿದ್ದೇನೆ ಎಂದಿದ್ದಾರೆ. ಅಭಿಷೇಕ್ ಬಚ್ಚನ್ ಅಭಿನಯದ ಬಿ ಹ್ಯಾಪಿ ಚಿತ್ರ ವೀಕ್ಷಿಸಿ ಧನಶ್ರೀ ವರ್ಮಾ ಭಾವುಕರಾಗಿದ್ದಾರೆ. 

View post on Instagram

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ವಿಡಿಯೋಗಳು ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಧನಶ್ರೀ ವರ್ಮಾ ಚಹಾಲ್ ಜೊತೆಗಿನ ಫೋಟೋಗಳನ್ನು ಪ್ರೈವೇಟ್ ಮಾಡಿದ್ದರು. ಆದರೆ ಕೆಲವೇ ದಿನದಲ್ಲಿ ಮತ್ತೆ ರಿಸ್ಟೋರ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಯುಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಅವರ ವಿಚ್ಚೇದನ ಅರ್ಜಿ ಕೋರ್ಟ್ ಮೆಟ್ಟಿಲೇರಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ, ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಅನುಮಾನಗಳು ಹೆಚ್ಚಾಗುತ್ತಿದೆ.

ಧನಶ್ರೀ ವರ್ಮಾ ಹಾಗೂ ಚಹಾಲ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಕಳೆದೊಂದು ವರ್ಷದಿಂದ ಪದೇ ಪದೇ ಕೇಳಿಬರುತ್ತಿದೆ. ಹೀಗಾಗಿ ಇವರಿಬ್ಬರ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದೆ.

ಚಹಾಲ್‌ನಿಂದ ದೂರವಾದ ಬಳಿಕ 1 ಕೋಟಿ ರೂ ಕಾರಿನಲ್ಲಿ ಏರ್‌ಪೋರ್ಟ್‌ಗೆ ಬಂದ ಧನಶ್ರಿ