ದೆಹಲಿಯ ರಸ್ತೆಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರವೇ ದಕ್ಷಿಣ ದೆಹಲಿಯ ಆಂಡ್ರ್ಯೂಸ್ ಗಂಜ್‌ನಲ್ಲಿರುವ ರಸ್ತೆ ಸುಶಾಂತ್ ಸಿಂಗ್ ರಜಪೂತ್ ರಸ್ತೆ ಎಂದು ಕರೆಯಲ್ಪಡಲಿದೆ.

ಬದುಕಿದ್ದರೆ 35 ವರ್ಷದ ನಟನಾಗಿರುತ್ತಿದ್ದರು ಸುಶಾಂತ್. ಕಳೆದ ವರ್ಷ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನ ನಂತರ ಹೈಪ್ರೊಫೈಲ್ ತನಿಖೆ ನಡೆದರೂ ಯಾವುದೇ ಸ್ಪಷ್ಟ ಕಾರಣ ಹೊರಗೆ ಬರಲಿಲ್ಲ.

ಕಾಂಜೀವರಂ ಸೀರೆ ಬಿಟ್ಟು, ಅಪರೂಪಕ್ಕೆ ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸ್ಕೊಂಡ ರೇಖಾ

ಎಸ್‌ಡಿಎಂಸಿಯ ಕಾಂಗ್ರೆಸ್ ಕೌನ್ಸಿಲರ್ ಸುಶಾಂತ್ ಹೆಸರು ರಸ್ತೆಗೆ ನಾಮಕರಣ ಮಾಡುವ ಪ್ರಸ್ತಾಪವಿಟ್ಟಿದ್ದರು. ಬಿಜೆಪಿ ನೇತೃತ್ವದ ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಈ ಪ್ರಸ್ತಾಪವನ್ನು ನಾಗರಿಕ ಸಂಸ್ಥೆಯ ರಸ್ತೆ ನಾಮಕರಣ ಮತ್ತು ಮರುನಾಮಕರಣ ಸಮಿತಿಗೆ ಕಳುಹಿಸಿದ್ದರು.

ಸಮಿತಿಗೆ ಲಿಖಿತ ಪ್ರಸ್ತಾವನೆಯಲ್ಲಿ, ದತ್ ಅವರು ರಸ್ತೆ ಸಂಖ್ಯೆ 8 ರಲ್ಲಿ ಬಿಹಾರದಿಂದ ಬಂದಿರುವ ಹೆಚ್ಚಿನ ಸಂಖ್ಯೆಯ ಜನರು ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಮತ್ತು ಆಂಡ್ರ್ಯೂಸ್ ಗಂಜ್ನಿಂದ ಇಂದಿರಾ ಕ್ಯಾಂಪ್ ವರೆಗೆ ಸುಶಾಂತ್ ಎಂದು ಹೆಸರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ, ಅವರ ನೆನಪಿನಲ್ಲಿ ನಟನ ಹೆಸರನ್ನು ರೋಡ್ ನಂ 8ಕ್ಕೆ ಹೆಸರಿಸಲು ಪ್ರಸ್ತಾಪಿಸಲಾಗಿದೆ ಎಂದು ದತ್ ಹೇಳಿದ್ದಾರೆ.