ಸಿನಿಮಾ ಭಾರತೀಯ ವಾಯ ಸೇನೆಯನ್ನು ಕೆಟ್ಟ ರೀತಿಯಲ್ಲಿ ತೋರಿಸುತ್ತದೆ. ಹಾಗಾಗಿ ಸಿನಿಮಾಗೆ ಸ್ಟೇ ನೀಡಬೇಕೆಂದು ಕೇಂದ್ರ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಾಜೀವ್ ಶಖ್ದರ್, ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗುವ ಮುನ್ನ ಯಾಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜಾಹ್ನವಿ ಕಪೂರ್ ನಟಿಸಿದ ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್‌ ಸಿನಿಮಾಗೆ ಸ್ಟೇ ನೀಡುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಗುಂಜನ್ ಸಕ್ಸೇನಾ ಸಿನಿಮಾ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿರುವುದರಿಂದ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ತನ್ನದೇ ಸಿನಿಮಾ ಗುಂಜನ್ ಸಕ್ಸೇನಾ ಬ್ಯಾನರ್‌ನಲ್ಲಿ ಕರಣ್ ಹೆಸರಿಲ್ಲ, ತಿರುಗಿಬಿತ್ತಾ ನೆಪೊಟಿಸಂ ಬಾಣ..?

ಐಎಎಫ್ ಲಿಂಗಬೇಧ ಮಾಡುತ್ತದೆ ಎಂದು ಸಿನಿಮಾದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಕೇಂದ್ರದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ತಿಳಿಸಿದ್ದಾರೆ.

ಧರ್ಮ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್‌ನಿಂದ ಈ ಸಂಬಂಧ ಕೋರ್ಟ್ ಸ್ಪಷ್ಟನೆ ಕೇಳಿದೆ. ಕೇಂದ್ರದ ಅರ್ಜಿಗೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್‌ ನೆಟ್‌ಫ್ಲಿಕ್ಸ್ ಹಾಗೂ ಸಿನಿಮಾ ನಿರ್ಮಿಸಿದ ಧರ್ಮ ಪ್ರೊಡಕ್ಷನ್‌ಗೆ ಹೇಳಿದೆ. ಮಾಜಿ ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರಿಗೂ ಅವರ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.