ಮುಂದೆ ಬರಲಿರುವ ವಿಚಾರಗಳ ಕುರಿತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೊಂದು ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ್ದಾರೆ. ತನ್ನ ಫ್ಯಾನ್ಸ್ ಒಂದು ಸರ್ಪೈಸ್ ನಿರೀಕ್ಷಿಸಿ ಎಂಬಂತಿದೆ ನಟಿಯ ಮೆಸೇಜ್.

ನೀಲಾಕಾಶದಲ್ಲಿ ಒಂಟಿ ತೆಂಗಿನ ಮರವಿರುವ ಫೋಟೋ ಶೇರ್ ಮಾಡಿದ ನಟಿ, 3 ಡೇಸ್ ಟು ಗೋ ಎಂದು ಬರೆದಿದ್ದಾರೆ. ನಿರ್ದೇಶಕ ಶುಕನ್ ಭಾತ್ರಾ ಜೊತೆಗಿನ ಹೊಸ ಸಿನಿಮಾ ಬಗ್ಗೆ ಹೇಳಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಸ್ಪಷ್ಟವಿಲ್ಲ.

ಶಾರೂಕ್, ದೀಪಿಕಾ ಸಿನಿಮಾವನ್ನು ನಾನ್‌ಸೆನ್ಸ್ ಎಂದಿದ್ದ ಜಯಾಬಚ್ಚನ್..!

ಪೋಸ್ಟ್‌ನಲ್ಲಿ ಧರ್ಮ ಪ್ರೊಡಕ್ಷನ್, ಶಕುನ್, ಸಿದ್ಧಾರ್ಥ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ ಅವರನ್ನು ಟ್ಯಾಗ್ ಮಾಡಿದ್ದಾರೆ. ಕಳೆದ ವಾರವಷ್ಟೇ ದೀಪಿಕಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು.

ಶಕುನ್ ಸಿನಿಮಾ ಶೂಟ್‌ಗಾಗಿ ಗೋವಾ ಹೊರಟಿದ್ದರು ನಟಿ. ಕೊರೋನಾ ಲಾಕ್‌ಡೌನ್ ನಂತರ ನಟಿ ಮೊದಲ ಬಾರಿ ಶೂಟಿಂಗ್‌ನತ್ತ ತೆರಳುತ್ತಿದ್ದಾರೆ. ಚಪಾಕ್‌ನಂತೆಯೇ ಎಮೋಷನಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರಂತೆ.

ಡ್ರಗ್ಸ್ ಪಾರ್ಟಿ: ದೀಪಿಕಾ, ಮಲೈಕಾ ಸೇರಿ ಹಲವರ ವಿರುದ್ಧ NCBಗೆ ದೂರು, ಕಂಪ್ಲೇಂಟ್ ಕೊಟ್ಟಿದ್ದು ದೆಹಲಿ MLA

ಈ ಸಿನಿಮಾದ ಕಥೆಯಂತದ್ದನ್ನು ನಾವು ಭಾರತೀಯ ಸಿನಿಮಾದಲ್ಲಿ ಅಷ್ಟಾಗಿ ನೋಡಿರಲಾರೆವು. ಪಿಕು, ತಮಾಶ, ಲವ್ ಆಜ್‌ ಕಲ್‌ನಂತಹ ಮನುಷ್ಯ ಸಂಬಂಧಗಳ ಬಗ್ಗೆ ಮಾತನಾಡುವ ಸಿನಿಮಾ ಇದು ಎಂದು ನಟಿ ಹೇಳಿದ್ದಾರೆ