ಬಾಲಿವುಡ್ ರಹಸ್ಯ! ಸಲ್ಮಾನ್ ನಾಯಕನಾಗೋ ಚಿತ್ರಗಳಲ್ಲಿ ದೀಪಿಕಾ ನಟಿಸಲ್ಲ- ಆಫರ್ಸ್ ರಿಜೆಕ್ಟ್
ಬಾಲಿವುಡ್ ಸೂಪರ್ಸ್ಟಾರ್ಗಳಾಗಿರೋ ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಇದುವರೆಗೆ ಒಂದೇ ಒಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿಲ್ಲ. ದೀಪಿಕಾ ಎಲ್ಲಾ ಚಿತ್ರ ರಿಜೆಕ್ಟ್ ಮಾಡಿದ್ದಾರೆ. ಕಾರಣ ನಿಗೂಢ

ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ದೀಪಿಕಾ ಪಡುಕೋಣೆ ಇಬ್ಬರ ಹವಾ ಜೋರಾಗಿಯೇ ಇದೆ. ಸಲ್ಮಾನ್ ಖಾನ್ಗೆ ವಯಸ್ಸು 57 ಆದರೂ ಶಾರುಖ್ ಅವರಂತೆಯೇ ಸಲ್ಮಾನ್ ಇನ್ನೂ ನಾಯಕ ನಟನಾಗಿಯೇ ಮಿಂಚುತ್ತಿದ್ದಾರೆ. ತಮಗಿಂತ 20-25 ವಯಸ್ಸು ಕಡಿಮೆ ಇರುವ ಹೀರೋಯಿನ್ ಜೊತೆ ಯುವಕರು ನಾಚುವಂತೆ ಪರದೆಯ ಮೇಲೆ ರೊಮಾನ್ಸ್ ಮಾಡುವಲ್ಲಿ ಇವರು ನಿಸ್ಸೀಮರು. ಇದಾಗಲೇ ಶಾರುಖ್ ಅವರು ಪಠಾಣ್ನಲ್ಲಿ 37 ವರ್ಷದ ದೀಪಿಕಾ ಅವರೊಂದಿಗೆ ರೊಮಾನ್ಸ್ ಮಾಡಿರುವುದೇ ಸಾಕ್ಷಿ. ಅದಕ್ಕಾಗಿಯೇ ಸಲ್ಮಾನ್ ಖಾನ್ ಜೊತೆ ಚಿತ್ರ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಇತ್ತೀಚೆಗೆ ಸಾಕಷ್ಟು ಫ್ಲಾಪ್ (Flop) ಚಿತ್ರಗಳನ್ನು ನೀಡಿದರೂ ಅವರ ಕ್ರೇಜ್ ಕಡಿಮೆಯಾಗಲಿಲ್ಲ. ಅದೇ ರೀತಿ ಈಗ ತಾನೇ ಬಾಲಿವುಡ್‌ಗೆ ಎಂಟ್ರಿ ಕೊಡುವ ಹದಿಹರೆಯದ ಹುಡುಗಿಯರೂ ಸಲ್ಮಾನ್ ಜೊತೆ ನಾಯಕಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ನಿಮಗೆ ಗೊತ್ತೆ? ಇದುವರೆಗೆ ದೀಪಿಕಾ ಪಡುಕೋಣೆ ಸಲ್ಮಾನ್ ಜೊತೆ ನಾಯಕಿಯಾಗಿ ನಟಿಸಲಿಲ್ಲ. ನಟನೆಗೆ ಬಂದಿದ್ದ ಆರು ಚಿತ್ರಗಳನ್ನು ಅವರು ರಿಜೆಕ್ಟ್ ಮಾಡಿದ್ರು!
ಹೌದು. ಬಾಲಿವುಡ್ ಪ್ರಿಯರಿಗೆ ಇದೊಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ. ಪಠಾಣ್ ಚಿತ್ರದಲ್ಲಿ ಸಲ್ಮಾನ್, ದೀಪಿಕಾ (Deepika Padukone) ಇದ್ದರೂ ಇದರಲ್ಲಿ ಸಲ್ಮಾನ್ ನಾಯಕನಲ್ಲ. ಆದರೆ ಒಂದೇಒಂದು ಚಿತ್ರದಲ್ಲಿ ಇಬ್ಬರು ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳಲಿಲ್ಲ. ಸಿನಿಮಾಗಳು ಹಿಟ್ ಆದಲ್ಲಿ ನಾಯಕಿಯರಿಗೆ ಒಳ್ಳೆ ಆಫರ್‌ಗಳು ಬರುತ್ತವೆ. ಆದರೆ ಮೊದಲಿನಿಂದಲೂ ದೀಪಿಕಾ ಪಡುಕೋಣೆ ಒಂದೇ ಒಂದು ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ! ಈ ಇಬ್ಬರು ಪ್ರಮುಖ ಬಾಲಿವುಡ್ ತಾರೆಯರು ಅವಕಾಶ ಸಿಕ್ಕರೂ ಒಟ್ಟಿಗೆ ಕೆಲಸ ಮಾಡದಿರುವುದು ಆಶ್ಚರ್ಯಕರ ಎಂದೇ ಬಲ್ಲವರು ಹೇಳುತ್ತಾರೆ. ಸಲ್ಮಾನ್ ಖಾನ್ ಎದುರು ಕೆಲಸ ಮಾಡಲು ಒಂದಲ್ಲ ಆರು ದೊಡ್ಡ ಅವಕಾಶಗಳನ್ನು ದೀಪಿಕಾ ತಿರಸ್ಕರಿಸಿದ್ದಾರೆ! ಆದರೆ ದೀಪಿಕಾ ಪಡುಕೋಣೆಗೆ ಮೊದಲ ಚಿತ್ರಕ್ಕೆ ಆಫರ್ ನೀಡಿದ್ದು ಶಾರುಖ್ ಖಾನ್ ಅಲ್ಲ ಸ್ವತಃ ಸಲ್ಮಾನ್ ಖಾನ್ ಎಂದು ನಿಮಗೆ ತಿಳಿದಿದೆಯೇ?
Viral Vedio: ಫ್ಲರ್ಟ್ ಮಾಡಲು ಬಂದ ಶಾರುಖ್ಗೆ ವಯಸ್ಸಿನ ಅಂತರ ನೆನಪಿಸಿದ ದೀಪಿಕಾ
ಹೌದು! ಸಲ್ಮಾನ್ ತಮ್ಮ ಮಾಡೆಲಿಂಗ್ ದಿನದಲ್ಲಿ ತಮಗೆ ಸಿನಿಮಾ ಆಫರ್ ಮಾಡಿದ್ದನ್ನು ದೀಪಿಕಾ ಸ್ವತಃ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. “ನಾನು ತುಂಬಾ ಚಿಕ್ಕವಳಿದ್ದಾಗ ಸಲ್ಮಾನ್ ಅವರು ನನ್ನ ಮೊದಲ ಚಲನಚಿತ್ರವನ್ನು ನೀಡಿದರು ನಾನು ಕ್ಯಾಮೆರಾ ಮುಂದೆ ಇರಲು ಸಿದ್ಧವಾಗಿರಲಿಲ್ಲ. ಆದರೂ ಅವರು ಧೈರ್ಯ ತುಂಬಿದ್ದರು. ನಾನು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ಅವರು ನನಗೆ ಚಲನಚಿತ್ರವನ್ನು ಆಫರ್ ಮಾಡಿರುವುದು ದೊಡ್ಡ ವಿಷಯ ಎಂದಿದ್ದ ದೀಪಿಕಾ ನಾಯಕಿಯಾಗಿ (Heroine) ಮಾತ್ರ ಅವರ ಎದುರು ಕಾಣಿಸಿಕೊಳ್ಳಲಿಲ್ಲ. ನಾವು ಪರದೆಯ ಮೇಲೆ ಒಟ್ಟಿಗೆ ಬರಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ, ಆದ್ದರಿಂದ ನಮಗಾಗಿ ಏನಾದರೂ ವಿಶೇಷ ಕಾಯುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಆದರೆ ಅದಾದ ಮೇಲೂ ಎಲ್ಲಾ ಚಿತ್ರ ರಿಜೆಕ್ಟ್ ಮಾಡಿದ್ರು. ಇದುವರೆಗೂ ಒಟ್ಟಿಗೇ ಕಾಣಿಸಿಕೊಳ್ಳಲಿಲ್ಲ.
ಅವರ ಆರಂಭಿಕ ಪ್ರಸ್ತಾಪವನ್ನು ತಿರಸ್ಕರಿಸುವುದರ ಹೊರತಾಗಿ, ಅಂತಿಮವಾಗಿ ಬಾಲಿವುಡ್‌ಗೆ ಬಂದ ನಂತರ ಸಲ್ಮಾನ್ ಖಾನ್ ಎದುರು ದೀಪಿಕಾ ಪಡುಕೋಣೆ ನಿರಾಕರಿಸಿದ ಆರು ಚಿತ್ರಗಳು ಇಲ್ಲಿವೆ.
ಜೈ ಹೋ (Jai Ho)
ಸಲ್ಮಾನ್ ಅವರ ನಾಯಕಿಯಾಗಲು ದೀಪಿಕಾ ಪಡುಕೋಣೆ ಮೊದಲ ಆಯ್ಕೆಯಾಗಿದ್ದರು. ಆದರೆ ಆಕೆಯ ನಿರಾಕರಣೆ ಡೈಸಿ ಶಾಗೆ ದೊಡ್ಡ ಚೊಚ್ಚಲ ಪ್ರವೇಶ ಸಿಕ್ಕಿತು. ಅವರು ಅಂತಿಮವಾಗಿ ಪಾತ್ರವನ್ನು ಪಡೆದರು.
ಬಜರಂಗಿ ಭಾಯಿಜಾನ್ (Bajarangi Bhaijan)
ವರದಿಗಳ ಪ್ರಕಾರ, ಕರೀನಾ ಕಪೂರ್ 2015ರಲ್ಲಿ ಈ ಹಿಟ್ ಚಿತ್ರದ ಭಾಗವಾಗಲು ಕಾರಣ, ದೀಪಿಕಾ ಪಡುಕೋಣೆ. ಏಕೆಂದರೆ, ಈ ಬೃಹತ್ ಹಿಟ್ ಚಿತ್ರವನ್ನು ದೀಪಿಕಾ ಕಡೆಗಣಿಸಿದ್ದರು. ಮೊದಲು, ದೀಪಿಕಾ ಅವರನ್ನು ಪಾತ್ರಕ್ಕೆ ಪರಿಗಣಿಸಲಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ.
ಕಿಕ್ (Kick)
ಈ ಚಿತ್ರದಲ್ಲಿ ನರ್ಗೀಸ್ ಫಕ್ರಿ ನಟಿಸುವುದಕ್ಕೂ ಮೊದಲು ದೀಪಿಕಾಗೆ ಕೇಳಿಕೊಳ್ಳಲಾಗಿತ್ತು. ಇದರಲ್ಲಿ ನಗ್ರೀಸ್ ಮಾಡಿದ್ದ ಐಟಂ ಹಾಡಿಗೆ ದೀಪಿಕಾ ಸೊಂಟ ಬಳುಕಿಸಲು ಆಫರ್ ನೀಡಲಾಗಿತ್ತು. ಆದರೆ ಆದರೆ ದೀಪಿಕಾ ಮತ್ತೆ ಸಲ್ಮಾನ್ ಖಾನ್ ಚಿತ್ರಕ್ಕೆ ನೋ ಹೇಳಿದ್ದರು. ಹ್ಯಾಪಿ ನ್ಯೂ ಇಯರ್‌ನಲ್ಲಿ ತಾವು ಮಾಡಿದ ಐಟಂ ಸಾಂಗ್‌ನಂತೆಯೇ ಇದು ಇರುವ ಕಾರಣ, ಮಾಡುವುದಿಲ್ಲ ಎಂದು ನೆಪ ಹೇಳಿದ್ದರು.
ಪ್ರೇಮ್ ರತನ್ ಧನ್ ಪಾಯೋ (Prem Ratan Dhan Payo)
ಈ ಚಿತ್ರವು ನಟಿ ಸೋನಮ್ ಕಪೂರ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಸಲಿಗೆ ಈ ಚಿತ್ರದಲ್ಲಿ ಸಲ್ಲುಭಾಯಿ ಜೊತೆ ದೀಪಿಕಾ ಕಾಣಿಸಿಕೊಳ್ಳಬೇಕಿತ್ತು. ಆದರೆ ಅವರು ಒಪ್ಪಲಿಲ್ಲ.
ಸಲ್ಮಾನ್ ಖಾನ್ ಬೇಡವೆಂದ ಚಿತ್ರ ನಿರ್ದೇಶಿಸಿ ಆದಿತ್ಯ ಚೋಪ್ರಾ ಪಟ್ಟ ಪಾಡು ಅಷ್ಟಿಷ್ಟಲ್ಲ!
ಸುಲ್ತಾನ್ (Sultan)
ದೀಪಿಕಾ ತಿರಸ್ಕರಿಸಿದ ಈ ಚಿತ್ರ ಬ್ಲಾಕ್ಬಸ್ಟರ್ ಚಿತ್ರವಾಯಿತು. ಇದು ಐದನೇ ಬಾರಿಗೆ ದೀಪಿಕಾ ಡೇಟ್ಸ್ ಕಾರಣ ನೀಡಿ ಸಲ್ಮಾನ್ ಅವರನ್ನು ತಿರಸ್ಕರಿಸಿದ್ದರು. ಪಾತ್ರವು ಅನುಷ್ಕಾ ಶರ್ಮಾಗೆ ಹೋಯಿತು.
ಶುದ್ಧಿ (Shuddhi)
ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ಆಲಿಯಾ ಭಟ್ ಅವರ ಹೆಸರನ್ನು ಪರಿಗಣಿಸುವ ಮೊದಲು, ಸಲ್ಮಾನ್ ಮತ್ತು ದೀಪಿಕಾಗೆ ಆಫರ್ ನೀಡಲಾಯಿತು ಮತ್ತು ಇಬ್ಬರೂ ಪರಸ್ಪರ ಹೆಸರು ಕೇಳಿ ರಿಜೆಕ್ಟ್ ಮಾಡಿದ್ದರು.