Asianet Suvarna News Asianet Suvarna News

ಪತಿ ರಣ್ವೀರ್ ಕೈ ಹಿಡಿಯಲು ನಿರಾಕರಿಸಿದ ದೀಪಿಕಾ; 'ಏನೋ ಸರಿ ಇಲ್ಲ' ಎಂದ ಫ್ಯಾನ್, ವಿಡಿಯೋ ವೈರಲ್

ಈವೆಂಟ್‌ನಲ್ಲಿ ಪತಿ ರಣ್ವೀರ್ ಸಿಂಗ್ ಕೈ ಹಿಡಿಯಲು ನಿರಾಕರಿಸಿದ ದೀಪಿಕಾ ಪಡುಕೋಣೆ ವಿಡಿಯೋ ವೈರಲ್ ಆಗಿದೆ. ಇಬ್ಬರ ನಡುವ 'ಏನೋ ಸರಿ ಇಲ್ಲ' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

Deepika Padukone ignores to hold Ranveer Singh hand at event fans say something is off sgk
Author
First Published Mar 24, 2023, 3:27 PM IST

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಅಂಡ್ ಪವರ್‌ಫುಲ್ ಕಪಲ್‌ಗಳಲ್ಲಿ ಒಂದು. ಈ ಜೋಡಿಯನ್ನು ಒಟ್ಟಿಗೆ ನೋಡುವುದೇ ಅಭಿಮಾನಿಗಳ ಕಣ್ಣಿಗೆ ಹಬ್ಬ. ಬಾಲಿವುಡ್ ಸ್ಟಾರ್ ಜೋಡಿ ಇತ್ತೀಚೆಗೆ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ ನಾಲ್ಕನೇ ಆವೃತ್ತಿಯ ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್‌ನ ಅನೇಕ ಮಂದಿ ಕಾಣಿಸಿಕೊಂಡಿದ್ದರು. ಅದರಲ್ಲಿ ದೀಪಿಕಾ ಮತ್ತು ರಣ್ವೀರ್ ಸಿಂಗ್ ಜೋಡಿ ಕೂಡ ಒಂದು. ಈ ಸ್ಟಾರ್ ಜೋಡಿ ರೆಡ್ ಕಾರ್ಪೆಟ್ ಮೇಲೆ ಸ್ಟೈಲಿಶ್ ಎಂಟ್ರಿ ಕೊಟ್ಟರು. ದೀಪಿಕಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಪಪತಿ ರಣ್ವೀರ್ ಸಿಂಗ್ ಸೂಟ್ ಧರಿಸಿದ್ದರು. 

ರೆಡ್ ಕಾರ್ಪೆಟ್‌ ಮೇಲೆ ಎಂಟ್ರಿ ಕೊಡುತ್ತಿದ್ದಂತೆ ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಕೈ ಹಿಡಿಯಲು ಮುಂದಾದರು. ಆದರೆ ದೀಪಿಕಾ ಕೈ ನೀಡಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ನಡುವೆ ಏನೋ ಸರಿ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಈವೆಂಟ್ ನಲ್ಲಿ ದೀಪಿಕಾ ಪತಿಯನ್ನು ನಿರ್ಲಕ್ಷ್ಯ ಮಾಡಿದ್ದೇಕೆ ಎಂದು ಅಭಿನಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

ಕಳೆದ ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ವಿಚ್ಛೇದನ ವದಂತಿ ವೈರಲ್ ಆಗಿತ್ತು. ದೀಪಿಕಾ ಮತ್ತು ರಣ್ವೀರ್ ನಡುವೆ ಯಾವುದು ಸರಿ ಇಲ್ಲ. ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಈ ಬಗ್ಗೆ ದೀಪಿಕಾ ಅಥವಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲವು ದಿನಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು. ಇದೀಗ ಮತ್ತೆ ಇಬ್ಬರ ನಡುವೆ ಮುನಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇಬ್ಬರ ಮುನಿಸಿನ ವದಂತಿಗೆ ಕಾರಣವಾಗಿದ್ದು ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ ಈವೆಂಟ್.  

ರ್ಯಾಪ್ ಸಾಂಗ್ ಆಗಿ ಬದಲಾದ ಆಸ್ಕರ್‌ನಲ್ಲಿ ದೀಪಿಕಾ ಮಾಡಿದ ಭಾಷಣ; ಹೇಗಿದೆ ಹಾಡು ನೋಡಿ

ದೀಪಿಕಾ ಮತ್ತು ರಣ್ವೀರ್ ಇಬ್ಬರೂ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗಿ ಪಾಪರಾಜಿಗಳಿಗೆ ಪೋಸ್ ನೀಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಲು ಪ್ರಾರಂಭಿಸಿದರು. 'ಅವರಿಬ್ಬರೂ ಜಗಳವಾಡಿದ್ದರೂ ಅಂತ ಕಾಣುತ್ತೆ, ಯಾಕೆಂದರೆ ಅವರ ಬಾಡಿಲಾಂಗ್ವೇಜ್ ಸಂಪೂರ್ಣವಾಗಿ ಬದಲಾಗಿದೆ' ಎಂದು ಹೇಳಿದ್ದಾರೆ. ದೀಪಿಕಾ ಪತಿಯ ಕೈ ಹಿಡಿಯಲು ಇಷ್ಟಪಟ್ಟಿಲ್ಲ, ರಣ್ವೀರ್ ಪತ್ನಿ ಜೊತೆ ಪೋಸ್ ನೀಡಲು ಇಷ್ಟಪಡುತ್ತಿಲ್ಲ' ಎಂದು ಹೇಳಿದರು. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, 'ಅವರ ನಡುವೆ ಏನೋ ಸಮಸ್ಯೆಯಾಗಿದೆ' ಎಂದು ಹೇಳಿದ್ದಾರೆ. ಇದು ಪತಿಗೆ ಮಾಡಿದ ಅಗೌರವ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.

ಅನುಷ್ಕಾ, ಕತ್ರಿನಾ, ದೀಪಿಕಾ ಜೊತೆ ಲಿಫ್ಟ್‌ನಲ್ಲಿ ತಗಲಾಕ್ಕೊಂಡ್ರೆ ಏನ್ ಮಾಡ್ತಾರಂತೆ ರಣ್ವೀರ್ ಸಿಂಗ್?

ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಆಸ್ಕರ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿಯ ಆಸ್ಕರ್ ಈವೆಂಟ್‌ನಲ್ಲಿ ದೀಪಿಕಾ ವಿಶೇಷ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಆಸ್ಕರ್ ವೇದಿಕೆ ಮೇಲೆ ದೀಪಿಕಾ ಆರ್ ಆರ್ ಆರ್ ಸಿನಿಮಾದ ಬಗ್ಗೆ ವಿವರಣೆ ನೀಡಿದ್ದರು. ದೀಪಿಕಾ ಮಾತು ಎಲ್ಲರ ಹೃದಯ ಗೆದ್ದಿತ್ತು. ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಕೊನೆಯದಾಗಿ ಪಠಾಣ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ ನಲ್ಲಿ ಬರ್ತಿರುವ ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ದೀಪಿಕಾ ಹೃತಿಕ್ ರೋಷನ್ ಜೊತೆ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ರಣ್ವೀರ್ ಸಿಂಗ್ ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಥಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.     
 

Latest Videos
Follow Us:
Download App:
  • android
  • ios