Pathaan: ಮುಖ ಮುಚ್ಕೊಂಡು ಹೋಗಿ ಸಿನಿಮಾ ವೀಕ್ಷಿಸಿದ ನಟಿ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾ ನೋಡಲು ಮುಖ ಮುಚ್ಚಿಕೊಂಡು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ರಿಲೀಸ್ ಆಗಿ ದೊಡ್ಡ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಪಠಾಣ್ ಕೋಟಿ ಕೋಟಿ ಲೋಟಿ ಮಾಡಿದೆ. ಸಿನಿಮಾ ರಿಲೀಸ್ ಆಗಿ 5 ದಿನಗಳಾಗಿದ್ದು 400 ಕೋಟಿಗ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಪಠಾಣ್‌ನಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದು ಕರಾವಳಿ ಸುಂದರಿಯ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ದೀಪಿಕಾ ಮುಖ ಮುಚ್ಕೊಂಡು ಹೋಗಿ ಸಿನಿಮಾ ವೀಕ್ಷಿಸಿದ್ದಾರೆ. ಮುಂಬೈ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ.
ಭಾನುವಾರ (ಜನವರಿ 29) ದೀಪಿಕಾ ಮುಂಬೈನ ಐಕಾನಿಕ್ ಗೈಯಿಟಿ ಗ್ಯಾಲಕ್ಸಿಗೆ ಭೇಟಿ ನೀಡಿದ್ದರು. ಮುಖವನ್ನು ಕಪ್ಪು ಮುಚ್ಚಿಕೊಂಡು ಮಾರುವೇಷದಲ್ಲಿ ಹೋಗಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ದೀಪಿಕಾ ಕದ್ದುಮುಚ್ಚಿ ಹೋಗಿ ಸಿನಿಮಾ ವೀಕ್ಷಿಸಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಚಿತ್ರಮಂದಿರಗಲ್ಲಿ ಅಭಿಮಾನಿಗಳ ರಿಯಾಕ್ಷನ್ ಹೇಗಿದೆ ಎಂದು ತಿಳಿದುಕೊಳ್ಳಲು ದೀಪಿಕಾ ಮುಖ ಮುಚ್ಚಿಕೊಂಡು ಸಿನಿಮಾ ವೀಕ್ಷಿಸಿದ್ದಾರಂತೆ.
ದೀಪಿಕಾ ಥಿಯೇಟರ್‌ಗೆ ಭೇಟಿ ನೀಡಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಪ್ಪು ಕ್ಯಾಪ್, ಕಪ್ಪು ಮಾಸ್ಕ್ ಧರಿಸಿದ್ದರು. ಪಠಾಣ್ ತಂಡ ಯಾವುದೇ ಪ್ರಮೋಷನ್ ಇಲ್ಲದೇ ಸಿನಿಮಾ ಪ್ರಚಾರ ಮಾಡಿ ಸಕ್ಸಸ್ ಕಂಡಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಪ್ರಮೋಷನ್ ಗೆ ಹೆಚ್ಚು ತಲೆಕೆಡಿಸಿಕೊಳ್ಳಲಾಗುತ್ತಿದೆ. ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಆದರೆ ಪಠಾಣ್ ತಂಡ ಯಾವುದೇ ಪ್ರಮೋಷನ್ ಮಾಡಿದೆ ಸೂಪರ್ ಸಕ್ಸಸ್ ಕಂಡಿದ್ದಾರೆ.
ಶಾರುಖ್ ಖಾನ್ ಇಲ್ಲವೇ ಸೆಕ್ಸ್ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?
ಶಾರಖ್ ಮೊದಲ ದರ್ಶನ
ಇದೀಗ ಸಿನಿಮಾ ರಿಲೀಸ್ ಬಳಿಕ ದೀಪಿಕಾ ಕದ್ದು ಮುಚ್ಚಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು ಅಚ್ಚರಿ ಮೂಡಿಸಿದೆ. ಸಿನಿಮಾ ಸಕ್ಸಸ್ ಬಳಿಕ ಸಿನಿಮಾತಂಡ ಎಲ್ಲೂ ಕಾಣಿಸಿಕೊಂಡಿಲ್ಲ. ಇತ್ತೀಚಿಗಷ್ಟೆ ಶಾರುಖ್ ಖಾನ್ ಅಭಿಮಾನಿಗಳಿಗೆ ಮೊದಲ ದರ್ಶನ ನೀಡುವ ಮೂಲಕ ಸಂತಸ ಹೆಚ್ಚಿಸಿದ್ದರು. ತಮ್ಮ ಮನ್ನತ್ ನಿವಾಸದ ಬಾಲ್ಕನಿಯಲ್ಲಿ ಕಾಣಿಸಿಕೊಂಡ ಶಾರುಖ್ ಅಭಿಮಾನಿಗಳತ್ತ ಕೈ ಬೀಸಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ತಮ್ಮ ಮನ್ನತ್ ನಿವಾಸದ ಮುಂದೆ ಅಭಿಮಾನಿ ಸಾಗರವೇ ನೆರೆದಿದ್ದು. ಮನ್ನತ್ ಮುಂದೆ ಸಾವಿರಾರು ಜನ ಸೇರುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನೋಡಿ ಶಾರುಖ್ ಸಂಭ್ರಮಿಸಿದ್ದಾರೆ. ಶಾರುಖ್ ನೋಡಿ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.
ಪಠಾಣ್ ಸಕ್ಸಸ್: ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟಪಡೋದು; ಕಂಗನಾ ಅಚ್ಚರಿ ಹೇಳಿಕೆ
ಪಠಾಣ್ ಸಕ್ಸಸ್ ಸಿನಿಮಾತಂಡಕ್ಕೆ ಹಾಗೂ ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಸಂತಸ ತಂದಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಪಠಾಣ್ ವೀಕೆಂಡ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದಿರುವ ಪಠಾಣ್ ಸಿನಿಮಾದಲ್ಲಿ ವಿಲನ್ ಆಗಿ ಜಾನ್ ಅಬ್ರಾಹಂ ನಟಿಸಿದ್ದಾರೆ.