ನಟಿ ದೀಪಿಕಾ ಪಡುಕೋಣೆಗೆ ಈಗ ನಾಲ್ಕು ತಿಂಗಳು. ಇದರ ಹೊರತಾಗಿಯೂ ಸಾಹಸಮಯ ದೃಶ್ಯದಲ್ಲಿ ಶೂಟಿಂಗ್‌ ಮಾಡಲು ಶೂಟಿಂಗ್‌ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್‌ ಹೇಳ್ತಿರೋದೇನು?  

ಬಾಲಿವುಡ್​ ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪಠಾಣ್​, ಜವಾನ್​ ಸಕ್ಸಸ್​ ಆದರೆ ಫೈಟರ್​ನಲ್ಲಿ ಅಶ್ಲೀಲ ಎಂಬಂತೆ ಕಾಣಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಮಗುವಿನ ಸುದ್ದಿ ನೀಡಿದ್ದಾರೆ.

ಬರುವ ಸೆಪ್ಟೆಂಬರ್​ ತಿಂಗಳಿನಲ್ಲಿ ಮಗು ಹುಟ್ಟುತ್ತಿರುವುದಾಗಿ ದೀಪಿಕಾ ಪಡುಕೋಣೆ ಈಚೆಗೆ ಬಹಿರಂಗಪಡಿಸಿದ್ದರು. ನಟಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಣೆಯನ್ನು ಮಾಡಿದ್ದು, ನಾನು ಗರ್ಭಿಣಿಯಾಗಿದ್ದೇನೆ ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜನ್ಮ ನೀಡುತ್ತೇನೆ ಎಂದಿದ್ದರು. ಅವರು "ಸೆಪ್ಟೆಂಬರ್ 2024" ದಿನಾಂಕವನ್ನು ಬರೆದಿರುವ ಸಿಹಿ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಜೊತೆಗೆ ಮಕ್ಕಳ ಉಡುಪುಗಳ ಗ್ರಾಫಿಕ್ಸ್, ಆಟಿಕೆಗಳು ಮತ್ತು ನೀಲಿ ಮತ್ತು ಗುಲಾಬಿ ಬಣ್ಣದ ಬಲೂನ್‌ಗಳನ್ನು ಇಟ್ಟಿದ್ದರು. ಇದರ ಪ್ರಕಾರ ನೋಡಿದರೆ ದೀಪಿಕಾ ಅವರಿಗೆ ಈಗ ನಾಲ್ಕು ತಿಂಗಳು. ಹೆಚ್ಚಿನ ಮಹಿಳೆಯರು ಈ ಸಮಯದಲ್ಲಿ ತುಂಬಾ ಜಾಗಕರೂಕರಾಗಿ ಯಾವುದೇ ಕೆಲಸವನ್ನು ಮಾಡಲು ಹಿಂದೇಟು ಹಾಕುತ್ತಾರೆ.

ಕಾಂಗ್ರೆಸ್‌ನಿಂದ ಆಮೀರ್‌ ಖಾನ್ ಹೆಸರು ದುರ್ಬಳಕೆ: ಡೀಪ್‌ಫೇಕ್‌ ವಿರುದ್ಧ ನಟನಿಂದ ದೂರು- ಎಫ್‌ಐಆರ್‌

ಆದರೆ ದೀಪಿಕಾ ಶೂಟಿಂಗ್‌ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಪೊಲೀಸ್‌ ಅಧಿಕಾರಿಯಾಗಿ. ಪೊಲೀಸ್‌ ಅಧಿಕಾರಿಯೆಂದರೆ ಸಾಮಾನ್ಯವಾಗಿ ಫೈಟಿಂಗ್‌ ಇದ್ದೇ ಇರುತ್ತದೆ. ಆದರೆ ಗರ್ಭಿಣಿ ಹೊರತಾಗಿಯೂ ನಟಿ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಪ್ಪಿಕೊಂಡ ಸಿನಿಮಾವನ್ನು ಕಂಪ್ಲೀಟ್ ಮಾಡಲು ಬಯಸಿದ್ದಾರೆ. ಅಂದಹಾಗೆ ಈ ಚಿತ್ರದ ಹೆಸರು ‘ಸಿಂಗಂ ಅಗೇನ್‌. ದೀಪಿಕಾ ಪಡುಕೋಣೆ, ನಿರ್ದೇಶಕ ರೋಹಿತ್ ಶೆಟ್ಟಿ ಅವರ ‘ಸಿಂಗಂ ಎಗೇನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಫೋಟೋಗಳು ವೈರಲ್‌ ಆಗಿವೆ.

ಈ ಚಿತ್ರದಲ್ಲಿ ದೀಪಿಕಾ ಶಕ್ತಿ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಳಳಲಿದ್ದಾರೆ. ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ದೀಪಿಕಾ ಸೆಟ್‌ಗೆ ಬಂದಿದ್ದಾರೆ ಎನ್ನಲಾಗಿದೆ. ಇದರಿಂದ ಅಭಿಮಾನಿಗಳು ತುಂಬಾ ಚಿಂತಿತರಾಗಿದ್ದಾರೆ. ವೈರಲ್‌ ಆಗಿರೋ ಫೋಟೋಗಳಲ್ಲಿ ದೀಪಿಕಾ ಅವರ ಸಣ್ಣ ಬೇಬಿ ಬಂಪ್ ಅನ್ನು ಸಹ ಕಾಣಬಹುದು. ಇನ್ನು ಹಲವರು ನಟಿಯ ನಿಷ್ಠೆ ಹಾಗೂ ಅವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ‘ಸಿಂಗಂ ಎಗೇನ್’ ರೋಹಿತ್ ಶೆಟ್ಟಿಯವರ ಹಿಟ್ ಕಾಪ್ ಫ್ರಾಂಚೈಸ್ ‘ಸಿಂಗಂ’ ನ ಭಾಗವಾಗಿದೆ. ಇದು ಬಹುತಾರಾಗಣದ ಚಿತ್ರವಾಗಿದ್ದು, ದೀಪಿಕಾ ಪಡುಕೋಣೆ, ಅಜಯ್ ದೇವಗನ್, ರಣವೀರ್ ಸಿಂಗ್, ಕರೀನಾ ಕಪೂರ್ ಖಾನ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದಾರೆ.

ಡೆಲಿವರಿ ಡೇಟ್​ ಅನೌನ್ಸ್​ ಮಾಡಿದ ದೀಪಿಕಾ: ಗಮನ ಸೆಳೆದ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ...

Scroll to load tweet…