Asianet Suvarna News Asianet Suvarna News

ಬರೀ ಕೇಸರಿ ಬಿಕನಿಯಿಂದ ಸುದ್ದಿಯಾಗಿದ್ದ ಡಿಪ್ಪಿ ಬೇರೆ ಏನೋ ಸುದ್ದಿ ಕೊಡ್ತಿದ್ದಾರೆ!

ಇಂದು 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ದೀಪಿಕಾ ಪಡುಕೋಣೆ ತಾಯಿಯಾಗುವ ಸುದ್ದಿ ನೀಡಬಹುದು ಎಂಬ ಕಾತರದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.

 

Deepika Padukone Birthday girl plan on having kids
Author
First Published Jan 5, 2023, 5:21 PM IST

ಬಹು ನಿರೀಕ್ಷಿತ ಪಠಾಣ್​ ಚಿತ್ರದ ಮೂಲಕ ವಿವಾದಕ್ಕೆ ಸಿಲುಕಿರುವ ನಟಿ, ಕರಾವಳಿಯ ಬೆಡಗಿ ದೀಪಿಕಾ ಪಡುಕೋಣೆಯವರಿಗೆ ಇಂದು 37ನೇ ಹುಟ್ಟುಹಬ್ಬದ (Birthday) ಸಂಭ್ರಮ. ನಟ ರಣಬೀರ್​ ಸಿಂಗ್​ ಅವರ ಜೊತೆಗೆ 2018ರಲ್ಲಿ ದಾಂಪತ್ಯಕ್ಕೆ ಕಾಲಿಸಿರೋ ಈ ನಟಿ ಶೀಘ್ರದಲ್ಲಿಯೇ ಸಿಹಿ ಸುದ್ದಿ ಕೊಡಲಿದ್ದಾರೆ ಎನ್ನುವ ಬಿಸಿಬಿಸಿ ಮಾತು ಬಾಲಿವುಡ್​ ಅಂಗಳದಲ್ಲಿ ಸುಳಿದಾಡುತ್ತಿದೆ.

ಈಗ ರಣವೀರ್ ಸಿಂಗ್ ಮತ್ತು ದೀಪಿಕಾ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಅವರ ಅಭಿಮಾನಿಗಳು ಶೀಘ್ರದಲ್ಲೇ ಸಿಹಿ ಸುದ್ದಿಯನ್ನು ಘೋಷಿಸುತ್ತಾರೆ ಎಂದೇ ಅಂದುಕೊಂಡಿದ್ದಾರೆ. ಆಲಿಯಾ ಭಟ್‌, ಸೋನಂ ಕಪೂರ್‌ ಸೇರಿದಂತೆ ಬಾಲಿವುಡ್​ನಲ್ಲಿ ಅಮ್ಮನಾಗುವ ಪರ್ವ ಶುರು ಆಗಿರುವ ಹಿನ್ನೆಲೆಯಲ್ಲಿ ಈ ಜೋಡಿಯೂ ಖುಷಿ ಸುದ್ದಿ ಕೊಡಬಹುದು ಎನ್ನುವ ಊಹೆ ಅಭಿಮಾನಿಗಳದ್ದು.

'ಬೇಶರಂ ರಂಗ್'​ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?

ಅಂದ ಮಾತ್ರಕ್ಕೆ ಈ ಜೋಡಿ ಮಕ್ಕಳ ಬಗ್ಗೆ ಪ್ಲ್ಯಾನ್‌ ಮಾಡಿಲ್ಲ ಎಂದೇನಲ್ಲ. ಈ ಹಿಂದೆ ದೀಪಿಕಾ ಪಡುಕೋಣೆ (Deepika Padukone), ಫ್ಯಾಮಿಲಿ ಪ್ಲಾನಿಂಗ್ (Family Planning) ಬಗ್ಗೆ ಮಾತನಾಡಿದ್ದರು. ನಮಗೂ ಮಕ್ಕಳೆಂದರೆ ಇಷ್ಟ, ಮಗುವನ್ನು ನಾವೂ ಬಯಸುತ್ತಿದ್ದೇವೆ, ಆದರೆ ಯಾವಾಗ ಎಂದು ಗೊತ್ತಿಲ್ಲ ಎಂದಿದ್ದರು. ರಣವೀರ್ ಮತ್ತು ನಾನು ಕುಟುಂಬವನ್ನು ಪ್ರಾರಂಭಿಸಿದಾಗ, ನಮ್ಮ ಬಾಲ್ಯ ಹೇಗಿತ್ತೋ ಅದನ್ನೇ ನಮ್ಮ ಮಕ್ಕಳಿಗೂ ನೀಡಲು ಸಾಧ್ಯವಾಗುತ್ತದೆ ಎಂದುಕೊಂಡಿದ್ದೇನೆ ಎಂದಿದ್ದರು. ಆದ್ದರಿಂದ  ಈ ಜೋಡಿ ಸಿಹಿ ಸುದ್ದಿ ಯಾವಾಗ ಕೊಡಲಿದೆ ಎನ್ನುವುದು ಅಭಿಮಾನಿಗಳ ಪ್ರಶ್ನೆ.

ಸದ್ಯ ದೀಪಿಕಾರಿಗೆ ಯಾವ ಚಿತ್ರಗಳೂ ಕೈಹಿಡಿದಿಲ್ಲ.  2018ರಲ್ಲಿ ನಟಿಸಿದ ‘ಪದ್ಮಾವತ್​’,  2020ರಲ್ಲಿ ರಿಲೀಸ್ ಆದ ‘ಚಪಾಕ್​’ ಎಲ್ಲವೂ ತೋಪೆದ್ದು ಹೋದವು. ಇದರ ನಡುವೆ 2019ರಲ್ಲಿ ನಟಿಸಿದ್ದ ಯಾವ ಚಿತ್ರಗಳೂ ಸಕ್ಸಸ್​ ಕಾಣಿಸಲಿಲ್ಲ. ಬ್ಯಾಕ್​​ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಪಠಾಣ್​ ಚಿತ್ರದಲ್ಲಿ ಹಾಟ್​ ಆಗಿ ಕಾಣಿಸಿಕೊಳ್ಳುವ ಮೂಲಕ ಹಿಟ್​ ಚಿತ್ರ ನೀಡಬೇಕು ಎಂದು ಅಂದುಕೊಂಡರೆ ಅಲ್ಲಿ ಆಗಿರುವುದೇ ಬೇರೆ. ಕೇಸರಿ ಬಿಕಿನಿ (Safron Bikini)  ಧರಿಸಿ ಬೇಷರಂ ರಂಗ್​ ಎಂದು ಹಾಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಈಕೆ ಗುರಿಯಾಗಿದ್ದಾರೆ.

ಯಾರಿಗೇಕೆ ಬಾದರ್ ಮಾಡಬೇಕು, ಬೇಶರಮ್ ಹಾಡಿಗೆ ಪ್ಲಸ್ ಸೈಜ್ ಯುವತಿ ಡ್ಯಾನ್ಸಿಗೆ ಫ್ಯಾನ್ಸ್ ಫಿದಾ!

ಪಠಾಣ್​ (Pathaan) ಚಿತ್ರ ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿ ಬೈಕಾಟ್​ ಬಿಸಿ ಎದುರಿಸುತ್ತಿದೆ. ಬಿಡುಗಡೆಗೆ ಮುನ್ನ ವಿವಾದ ಸೃಷ್ಟಿಸುವ ಹಲವು ಚಿತ್ರಗಳು ಭಾರಿ ಹಿಟ್​ ಆಗುವುದು ಹೊಸ ವಿಷಯವೇನಲ್ಲ. ಆದರೆ ಪಠಾಣ್​ ವಿಷಯದಲ್ಲಿ ಹಾಗಾಗಲಿಲ್ಲ. ಬೈಕಾಟ್​ ಬಿಸಿಯಿಂದಾಗಿ ಚಿತ್ರದ ಶೀರ್ಷಿಕೆ ಸೇರಿದಂತೆ ಕೇಸರಿ ಬಿಕಿನಿಯನ್ನೂ ಬದಲಾಯಿಸುವ ಪ್ರಸಂಗ ಬಂದಿದೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಇದಕ್ಕೂ ಮೊದಲು ಇದೇ ರೀತಿ ವಿವಾದಕ್ಕೆ ಸಿಲುಕಿದವರು ನಟಿ ದೀಪಿಕಾ. 2020ರಲ್ಲಿ ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಸಿನಿಮಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಈ ಚಿತ್ರ ಸೋಲಲು ದೀಪಿಕಾ ನಿರ್ಧಾರ ಕೂಡ ಕಾರಣ ಎನ್ನಲಾಗಿದೆ.

ಅದೇನೇ ಇರಲಿ. ಸದ್ಯ ಈ ಬೆಡಗಿಯ ಹುಟ್ಟುಹಬ್ಬಕ್ಕೆ ಬರುತ್ತಿರುವ ಶುಭಾಶಯಗಳ ಮಹಾಪೂರದಲ್ಲಿ  ದೀಪಿಕಾ ಬರ್ತ್​ಡೇ ಸಂದರ್ಭ ಅಭಿಮಾನಿಗಳ ಪ್ರಶ್ನೆ ಅವರ ಫ್ಯಾಮಿಲಿ ಪ್ಲಾನಿಂಗ್ (Family Planing) ಬಗ್ಗೆ. 2023ರಲ್ಲಿ ಅಮ್ಮನಾಗ್ತಾರಾ ದೀಪಿಕಾ ಎನ್ನುವ ಕುತೂಹಲ ಅಭಿಮಾನಿಗಳದ್ದು.

ದೀಪಿಕಾ ಮತ್ತು ರಣವೀರ್ ಈ ವರ್ಷ ಪೋಷಕರಾಗುತ್ತಾರೆ. ಮಕ್ಕಳನ್ನು ಪಡೆಯುವುದಕ್ಕೂ ಮುಂಚಿತವಾಗಿ  ಈ ಜೋಡಿಯ  ಮಾತೃಭಾಷೆ ಕೊಂಕಣಿ (Konkani) ಕಲಿಯಲು ಪ್ಲಾನ್ ಮಾಡಿದ್ದಾರೆ ಎನ್ನುವ ಗುಸುಗುಸುವೂ ಶುರುವಾಗಿರುವ ಕಾರಣ ಇಷ್ಟೊಂದು ಪ್ಲ್ಯಾನ್‌ ರೂಪಿಸಿರುವ ಜೋಡಿ ಸಿಹಿ ಸುದ್ದಿ ಕೊಡುವುದು ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ.

 

Follow Us:
Download App:
  • android
  • ios