ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಮುನ್ನೆಲೆಗೆ ಬಂದ ಡ್ರಗ್ಸ್ ಮಾಫಿಯಾ ಚರ್ಚೆಯಲ್ಲಿ ಇದೀಗ ಮಸ್ತಾನಿ ದೀಪಿಕಾ ಪಡುಕೋಣೆ ಹೆಸರೂ ಕೇಳಿ ಬಂದಿದೆ.

ಈ ಹಿಂದೆಯೇ ದೀಪಿಕಾ ಬಗ್ಗೆ ಸಣ್ಣದಾಗಿ ಚರ್ಚೆಯಾಗಿದ್ದರೂ, ಡ್ರಗ್ಸ್ ವಿಚಾರದಲ್ಲಿ ಪದ್ಮಾವತ್ ನಟಿ ಈಗ ಭಾರೀ ಚರ್ಚೆಗೊಳಗಾಗಿದ್ದಾರೆ. ನೆಟ್ಟಿಗರಂತೂ ನಟಿಯನ್ನು ಡ್ರಗ್ಸ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಬಾಲಿವುಡ್‌ ಡ್ರಗ್ಸ್‌ ಸುಳಿಯಲ್ಲಿ ದೀಪಿಕಾ ಪಡುಕೋಣೆ?

ನಟಿ ದೀಪಿಕಾ ಪಡುಕೋಣೆ ಹಾಗೂ ಕರಿಷ್ಮಾ ನಡುವೆ ನಡೆದಿದೆ ಎನ್ನಲಾದ ಒಂದು ಚಾಟ್ ತುಣುಕು ಕೂಡಾ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. 2017ರ ಅಕ್ಟೋಬರ್‌ನಲ್ಲಿ ನಡೆದಿದೆ ಎನ್ನಲಾದ ದೀಪಿಕಾ ಪಡುಕೋಣೆಯ ವಾಟ್ಸಾಪ್ ಚಾಟ್ ನಟಿಯ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ.

ದೀಪಿಕಾ ಮಾಲು ಇದೆಯಾ ಎಂದು ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರಲ್ಲಿ ಕೇಳಿದ್ದಾರೆ. ಎನ್‌ಸಿಬಿ ದೀಪಿಕಾ ಮ್ಯಾನೇಜರ್ ಕರಿಷ್ಮಾಳನ್ನು ಎನ್‌ಸಿನಿ ವಿಚಾರಣೆಗೊಳಪಡಿಸಲಿದೆ ಎನ್ನಲಾಗಿದೆ.

ಬ್ಯಾಡ್ಮಿಂಟನ್, ನೋ ಲೇಟ್ ನೈಟ್, ನೋ ಮೂವೀಸ್, ಅದು ನನ್ನ ಬದುಕು ಎಂದು ದೀಪಿಕಾ

ಚಾಟ್ ವಿಚಾರವಾಗಿ ದೀಪಿಕಾ ಹೆಸರು ಹೊರ ಬರುತ್ತಿದ್ದಂತೆ ಸೋಷಿಯಾ ಮೀಡಿಯಾದಲ್ಲಿ ನಟಿ ಟ್ರೆಂಡ್ ಆಗಿದ್ದಾರೆ. ಟ್ವಿಟರ್ ಸೇರಿ ಹಲವು ಸೋಷಿಯಲ್ ಮೀಡಿಯಾ ಫ್ಲಾಟ್‌ ಫಾರ್ಮ್‌ಗಳಲ್ಲಿ ಮೆಮ್ಸ್ ಹರಿದಾಡುತ್ತಿವೆ.

ರಿತು ಎಂಬ ಟ್ವಿಟರ್ ಬಳಕೆದಾರರೊಬ್ಬರು, ಬಾಲಿವುಡ್‌ನ ಕಪ್ಪು ಕೊಳಕು ಜಗತ್ತು ಕೊನೆಯಾಗುವ ಸಮಯ ಬಂತು ಎಂದು ಬರೆದಿದ್ದಾರೆ. ಮೆಮೊವರ್ಟ್ ಎಂಬ ಮೆಮ್ಸ್ ಪೇಜ್ ಕೂಡಾ ರಿಯಾ ದೀಪಿಕಾ ಮತ್ತು ಶ್ರದ್ಧಾಳಿಗಾಗಿ ಜೈಲಿನಲ್ಲಿ ಕಾಯುತ್ತಿರುವುದು ಎಂದು ಎಡಿಟೆಡ್ ಫೋಟೋ ಶೇರ್ ಮಾಡಿದೆ.

ಶಾರೂಕ್, ದೀಪಿಕಾ ಸಿನಿಮಾವನ್ನು ನಾನ್‌ಸೆನ್ಸ್ ಎಂದಿದ್ದ ಜಯಾಬಚ್ಚನ್..!

ದೀಪಿಕಾಳ ಫೋಟೋಸ್ ಕೊಲೇಜ್ ಮಾಡಿ ಪಾರ್ಟಿಯ ಮೊದಲು, ಪಾರ್ಟಿಯ ನಂತರ ಎಂದು ಟ್ರೋಲ್ ಮಾಡಲಾಗಿದೆ. ದೀಪಿಕಾ ಪಡುಕೋಣೆ ಮತ್ತು ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ನಡುವಿನ ವಾಟ್ಸಾಪ್ ಚಾಟ್ ಹೀಗಿತ್ತು:

ಡಿ: ಕೆ ನಿಮಲ್ಲಿ ಮಾಲ್ ಇದೆಯಾ?
ಕೆ: ನನ್ನಲ್ಲಿದೆ, ಆದರೆ ಮನೆಯಲ್ಲಿದೆ, ನಾನು ಬಾಂದ್ರಾದಲ್ಲಿದ್ದೇನೆ
ಕೆ: ನಿಮಗೆ ಬೇಕಿದ್ದರೆ ಸುಮಿತ್‌ಗೆ ಕೇಳಲಾ
ಡಿ: ಯಸ್, ಪ್ಲೀಸ್
ಕೆ: ಅಮಿತ್‌ನಲ್ಲಿದೆ, ಅದನ್ನು ತರುತ್ತಿದ್ದಾನೆ.
ಡಿ: ಹಾಶ್ ಅಲ್ವಾ?
ಡಿ: ವೀಡ್ ಅಲ್ಲಾ ಅಲ್ವಾ?
ಕೆ: ನೀವು ಕೋಕೋಗೆ ಎಷ್ಟು ಹೊತ್ತಿಗೆ ಬರುತ್ತೀರಿ
ಡಿ:11.30/12
ಡಿ: ಅಲ್ಲಿ ಎಷ್ಟು ಹೊತ್ತಿರುತ್ತೀರಿ?
ಕೆ: 11.30ರ ತನಕ ಅನನಿಸುತ್ತದೆ, 12ಕ್ಕೆ ಬೇರೆ ಕಡೆ ಹೋಗುವುದಿದೆ.

ಡಿ ಮತ್ತು ಕೆ ಸಂಭಾಷಣೆ ಕರಿಷ್ಮಾ ಮತ್ತು ದೀಪಿಕಾ ನಡುವೆ ನಡೆದಿದೆ ಎನ್ನಲಾಗಿದೆ. ಮುಂಬೈನ ಕಮಲಾ ಮಿಲ್ಸ್ ಪ್ರದೇಶದಲ್ಲಿರುವ ಹೊಟೇಲ್ ಹೆಸರು ಕೋಕೋ. ಎನ್‌ಸಿಬಿ ಈಗಾಗಲೇ ಸುಶಾಂತ್ ಸಿಂಗ್ ರಜಪೂತ್‌ನ ಮಾಜಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿಯನ್ನು ಅರೆಸ್ಟ್ ಮಾಡಿದೆ. ರಿಯಾ ಸಹೋದರ ಶೋವಿಕ್, ಸುಶಾಂತ್‌ನ ಸಹಾಯಕರೂ ಅರೆಸ್ಟ್ ಆಗಿದ್ದಾರೆ.

ಹೈಸೊಸೈಟಿಯ ರಿಚ್ ಸ್ಟಾರ್ ಕಿಡ್‌ಗಳು ಕ್ಲಾಸ್ ಆಗಿರ್ತಾರೆ, ಅವರನ್ನು ಚೆನ್ನಾಗಿ ಬೆಳೆಸಿದ್ದಾರೆ ಎನ್ನಲಾಗುತ್ತದೆ. ಅವರು ತಮ್ಮ ಮ್ಯಾನೇಜರ್ ಹತ್ರ ಮಾಲ್ ಇದ್ಯಾ ಅಂತ ಕೇಳ್ತಾರೆ ಎಂದು ನಟಿ ಕಂಗನಾ ಟಾಂಗ್ ಕೊಟ್ಟಿದ್ದಾರೆ