ನವದೆಹಲಿ(ಸೆ.22): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆ ವೇಳೆ ಪತ್ತೆಯಾಗಿರುವ ಮಾದಕ ವಸ್ತು ಜಾಲ ದಿನೇದಿನೇ ದೊಡ್ಡದಾಗುತ್ತಿದ್ದು, ಬೆಂಗಳೂರು ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟಎದುರಾಗುವ ಸಾಧ್ಯತೆ ಇದೆ.

ಡ್ರಗ್ಸ್‌ ಪ್ರಕರಣದ ತನಿಖೆ ವೇಳೆ ದೀಪಿಕಾ ಹೆಸರು ಪ್ರಸ್ತಾಪವಾಗಿದ್ದು, ಮುಂದಿನ ವಾರ ವಿಚಾರಣೆಗೆ ಬರುವಂತೆ ಅವರಿಗೆ ರಾಷ್ಟ್ರೀಯ ಮಾದಕ ವಸ್ತು ದಳ (ಎನ್‌ಸಿಬಿ) ಸಮನ್ಸ್‌ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿವೆ. ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಏಜೆನ್ಸಿಯಾಗಿರುವ ಕ್ವಾನ್‌ ಸಂಸ್ಥೆಯ ಉದ್ಯೋಗಿ, ತಮ್ಮ ಮ್ಯಾನೇಜರ್‌ ಕರೀಷ್ಮಾ ಎಂಬುವರ ಜತೆ ದೀಪಿಕಾ ಪಡುಕೋಣೆ ನಡೆಸಿದ್ದಾರೆ ಎನ್ನಲಾದ ಚಾಟ್‌ ಇದೀಗ ಅವರಿಗೆ ಮುಳುವಾಗಿದೆ ಎಂಬುದು ವರದಿಯ ಸಾರ.]

ನಟ ಲೂಸ್‌ ಮಾದ, ಅಯ್ಯ​ಪ್ಪಗೆ ಡ್ರಗ್ಸ್‌ ಬಿಸಿ!

‘ಗಾಂಜಾ ಬೇಡ’ ಎಂದಿದ್ದ ದೀಪಿಕಾ?

2017ರಲ್ಲಿ ಕರೀಷ್ಮಾ ಜತೆ ದೀಪಿಕಾ ವಾಟ್ಸ್‌ಆ್ಯಪ್‌ ಚಾಟ್‌ ನಡೆಸಿದ್ದರು. ಆ ಚಾಟ್‌ ಪ್ರಕಾರ, ‘ಮಾಲ್‌ ಇದೆಯಾ’ ಎಂದು ದೀಪಿಕಾ ಸಂದೇಶ ಕಳುಹಿಸುತ್ತಾರೆ. ಅದಕ್ಕೆ ಕರೀಷ್ಮಾ ‘ನನ್ನ ಮನೆಯಲ್ಲಿದೆ. ಆದರೆ ನಾನು ಬಾಂದ್ರಾದಲ್ಲಿದ್ದೇನೆ’ ಎಂಬ ಉತ್ತರ ನೀಡುತ್ತಾರೆ. ಅಲ್ಲದೆ ‘ನಿಮಗೆ ಬೇಕೆಂದರೆ ಅಮಿತ್‌ಗೆ ಹೇಳುತ್ತೇನೆ’ ಎಂದು ಸಲಹೆ ಮಾಡುತ್ತಾರೆ. ‘ಯಸ್‌!! ಪ್ಲೀಸ್‌’ ಎಂದು ದೀಪಿಕಾ ಪ್ರತಿಕ್ರಿಯಿಸುತ್ತಾರೆ. ‘ಅಮಿತ್‌ ಬಳಿ ಇದೆ, ಆತ ತರುತ್ತಿದ್ದಾನೆ’ ಎಂದು ಕರೀಷ್ಮಾ ಸಂದೇಶ ಕಳುಹಿಸುತ್ತಾರೆ. ‘ಹಶ್‌ ಹೌದಲ್ವಾ. ಗಾಂಜಾ ಬೇಡ’ ಎಂಬ ಸಂದೇಶ ದೀಪಿಕಾ ಕಡೆಯಿಂದ ರವಾನೆಯಾಗಿದೆ. ಈ ಚಾಟ್‌ ಇದೀಗ ಎನ್‌ಸಿಬಿಗೆ ದೊರೆತಿದ್ದು, ಅದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ದೀಪಿಕಾ ಅವರಿಗೆ ಸಮನ್ಸ್‌ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಅರೆಸ್ಟ್ ಆದ ನಟಿಯರ ಪರ ಪಾರುಲ್ ಬ್ಯಾಟಿಂಗ್, ಸರ್ಕಾರ, ಪೊಲೀಸರ ವಿರುದ್ಧ ಬಹಿರಂಗ ಪತ್ರ

ದೀಪಿಕಾ ಅವರು ಉಪೇಂದ್ರ ನಟನೆಯ ಕನ್ನಡ ಸಿನಿಮಾ ‘ಐಶ್ವರ್ಯಾ’ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು. ನಂತರ ಬಾಲಿವುಡ್‌ಗೆ ಕಾಲಿಟ್ಟು, ಅಲ್ಲಿ ಮಿಂಚುತ್ತಿದ್ದಾರೆ.

ದೀಪಿಕಾ ಮ್ಯಾನೇಜರ್‌ ಇಂದು ವಿಚಾರಣೆಗೆ

ಡ್ರಗ್ಸ್‌ ಆರೋಪ ಸಂಬಂಧ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್‌ಗೆ ಮಾದಕವಸ್ತು ನಿಯಂತ್ರಣ ದಳ (ಎ​ನ್‌​ಸಿ​ಬಿ) ಸಮನ್ಸ್‌ ಜಾರಿ ಮಾಡಿದೆ. ಮಂಗಳವಾರ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.

ಘಜಿನಿ, ಕ್ವೀನ್‌, ಸೂಪರ್‌ 30 ನಿರ್ಮಾಪಕನಿಗೆ ನಾಳೆ ಡ್ರಿಲ್‌

ಬಾಲಿವುಡ್‌ ಡ್ರಗ್ಸ್‌ ಪ್ರಕರಣ ಸಂಬಂಧ ಸಿನಿಮಾ ನಿರ್ಮಾಪಕ ಮಧು ಮಂಟೇನಾ ವರ್ಮಾ ಅವರನ್ನು ಬುಧವಾರ ಎನ್‌ಸಿಬಿ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಲಾಗಿದೆ. ವರ್ಮಾ ಅವರು ಘಜಿನಿ, ಕ್ವೀನ್‌, ಸೂಪರ್‌ 30ಯಂತಹ ಸಿನಿಮಾಗಳ ನಿರ್ಮಾಪಕರಾಗಿದ್ದಾರೆ. ದೀಪಿಕಾ ಪಡುಕೋಣೆ ಜತೆ ಚಾಟ್‌ ನಡೆಸಿದ ಕರೀಷ್ಮಾ ಕೆಲಸ ಮಾಡುತ್ತಿರುವ ಕ್ವಾನ್‌ ಕಂಪನಿಯ ಓರ್ವ ಹೂಡಿಕೆದಾರರಾಗಿದ್ದಾರೆ.

ಸಾರಾ, ಶ್ರದ್ಧಾಗೆ ಮುಂದಿನ ವಾರ ಸಮನ್ಸ್‌ ಜಾರಿ ಸಂಭವ

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜ​ಪೂತ್‌ ಸಾವು ಪ್ರಕ​ರ​ಣಕ್ಕೆ ಸಂಬಂಧಿ​ಸಿದ ಡ್ರಗ್ಸ್‌ ಕೇಸ್‌ ಕುರಿ​ತಂತೆ ನಟಿ​ಯ​ರಾದ ಸಾರಾ ಅಲಿ ಖಾನ್‌ ಹಾಗೂ ಶ್ರದ್ಧಾ ಕಪೂರ್‌ ಅವ​ರಿಗೆ ಈ ವಾರ ಮಾದಕವಸ್ತು ನಿಯಂತ್ರಣ ದಳ (ಎ​ನ್‌​ಸಿ​ಬಿ) ಸಮನ್ಸ್‌ ನೀಡುವ ಸಾಧ್ಯತೆ ಇದೆ. ಇದೇ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನಟಿ ಹಾಗೂ ಸುಶಾಂತ್‌ ಪ್ರೇಯಸಿ ರಿಯಾ ಚಕ್ರ​ವರ್ತಿ ಅವ​ರನ್ನು ಈಗಾ​ಗಲೇ ಬಂಧಿ​ಸ​ಲಾ​ಗಿದ್ದು, ಅವರು ವಿಚಾ​ರಣೆ ವೇಳೆ ನಟ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾ ಹಾಗೂ ಶ್ರದ್ಧಾ ಕಪೂರ್‌ ಅವರ ಹೆಸ​ರು ಹೇಳಿದ್ದಾರೆ. ರಿಯಾ ಅವರ ವಾಟ್ಸ್‌ಆ್ಯಪ್‌ ಚಾಟ್‌​ಗ​ಳಲ್ಲಿ ಇವ​ರಿ​ಬ್ಬರ ಹೆಸರು ಉಲ್ಲೇ​ಖ​ವಾ​ಗಿ​ದೆ ಎಂದು ಮೂಲ​ಗಳು ಹೇಳಿವೆ.

ಡ್ರಗ್ ಕೇಸ್ : ಕಿಶೋರ್‌, ಅಕೀಲ್‌ ಪೊಲೀಸ್‌ ಕಸ್ಟಡಿಗೆ

ಇದ​ಲ್ಲದೆ, ‘ಸಾರಾ ಸಮ್ಮು​ಖ​ದಲ್ಲಿ ನಡೆದ ಪಾರ್ಟಿ​ಯೊಂದರಲ್ಲಿ ಸುಶಾಂತ್‌ ಹೈ ಡೋಸ್‌ ಡ್ರಗ್ಸ್‌ ಸೇವಿ​ಸಿ​ದ್ದರು ಎಂದು ರಿಯಾ ಹೇಳಿ​ದ್ದಾರೆ. ಈ ಕಾರ​ಣಕ್ಕೇ ವಿಚಾ​ರ​ಣೆ​ಗಾಗಿ ಸಾರಾ ಅವ​ರನ್ನು ವಿಚಾ​ರ​ಣೆಗೆ ಕರೆಸುವ ಸಾಧ್ಯತೆ ಇದೆ’ ಎಂದು ವರ​ದಿ​ಗಳು ಹೇಳಿ​ವೆ.

ಸಾರಾ ಹಾಗೂ ಸುಶಾಂತ್‌ ನಡುವೆ ‘ಕೇ​ದಾ​ರ​ನಾ​ಥ್‌’ ಚಿತ್ರದ ಚಿತ್ರೀ​ಕ​ರ​ಣದ ವೇಳೆ ಪ್ರೇಮಾಂಕು​ರ​ವಾ​ಗಿತ್ತು ಎಂದು ಇತ್ತೀ​ಚೆಗೆ ವರ​ದಿ​ಯಾ​ಗಿ​ತ್ತು.