ಪಾಕಿಸ್ತಾನಿ ನಟಿ, ದಾವೂದ್ ಇಬ್ರಾಹಿಂ ಜೊತೆಗಿನ ತನ್ನ ಸಂಬಂಧವನ್ನು ಕಡಿದುಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧ ಮುರಿದುಬಿದ್ದಿರುವುದಕ್ಕೆ ಆಕೆ ಸುಳಿವು ನೀಡಿದ್ದಾರೆ. ಇದರಿಂದ ದಾವೂದ್‌ ಕೋಪಗೊಂಡಂತಿದೆ. 


ಭೂಗತ ಪಾತಕಿ, ಮುಂಬೈ ಬಾಂಬ್‌ ಸ್ಫೋಟಗಳ ರೂವಾರಿ ದಾವೂದ್ ಇಬ್ರಾಹಿಂ ಎಂದರೆ ಇಂದಿಗೂ ಬಾಲಿವುಡ್‌ನಲ್ಲಿ ಹಲವು ಮಂದಿ ತತ್ತರ ನಡುಗುತ್ತಾರೆ. ಎಷ್ಟೋ ಮಂದಿ ಇಂದಿಗೂ ಆತನಿಗೆ ಹಫ್ತಾ ಕೊಡುವವರಿದ್ದಾರೆ. ಆತ ಹೊರಬಿದ್ದರೆ ಎನ್‌ಕೌಂಟರ್‌ ಮಾಡಲು ಕಾಯುತ್ತಿರುವ ವೈರಿ ಗ್ಯಾಂಗ್‌ಗಳು, ಪೊಲೀಸರು ಇದ್ದಂತೆ, ಆತನಿಗಾಗಿ ಕೆಲಸ ಮಾಡುವ ವಸೂಲಿ ಗ್ಯಾಂಗ್‌ಗಳೂ ಸಕ್ರಿಯವಾಗಿವೆ. ಇಂಥ ಹೊತ್ತಿನಲ್ಲಿ, ಆತನ ಬಹುಕಾಲದ ಪ್ರೇಯಸಿಯೊಬ್ಬಳು ʼಇನಫ್‌, ನಾನಿನ್ನು ಅವನ ಗರ್ಲ್‌ಫ್ರೆಂಡ್‌ ಆಗಿರೋಲ್ಲʼ ಎಂದುಬಿಟ್ಟರ ಏನಾದೀತು?

ಏನಾದೀತು ಎಂದು ಮುಂದೆ ನೋಡಬೇಕಿದೆ. ಯಾಕೆಂದರೆ ದಾವೂದ್‌ ಇಬ್ರಾಹಿಂಗ್‌ ಜೊತೆ ಡೇಟಿಂಗ್ ನಡೆಸುತ್ತಿದ್ದ ಪಾಕಿಸ್ತಾನಿ ನಟಿ ಮೆಹ್ವಿಶ್ ಹಯಾತ್ ಇದೀಗ ತಾನು ʼಜೀವನದಲ್ಲಿ ಮುಂದಿನ ಅಧ್ಯಾಯಕ್ಕೆ ಸಿದ್ಧವಾಗಿದ್ದೇನೆʼ ಎಂದು ಖಚಿತಪಡಿಸಿದ್ದಾಳೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವಳು ತನ್ನ ಮದುವೆಯ ಯೋಜನೆಗಳ ಬಗ್ಗೆ ಮಾತಾಡಿದ್ದಾಳೆ. ಮತ್ತು ತನ್ನ ಸಂಗಾತಿಯಲ್ಲಿ ತಾನು ಏನನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾಳೆ. ಇಲ್ಲೆಲ್ಲೂ ದಾವೂದ್‌ ಪ್ರಸ್ತಾವವಿಲ್ಲ. 

ಸಂದರ್ಶನದಲ್ಲಿ ಮೆಹ್ವಿಶ್, ತಾನು ಮದುವೆಯಾಗುವ ಬಗ್ಗೆ ಬಲವಾಗಿ ಯೋಚಿಸುತ್ತಿದ್ದೇನೆ ಎಂದಳು. "ನಾನು ಈಗ ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿರುವೆ. ಏಕೆಂದರೆ ನನ್ನ ತಾಯಿ ಇದೀಗ ನೀನು ಮದುವೆಯಾಗುವ ಸಮಯ ಎಂದು ಹೇಳುತ್ತಿದ್ದಾಳೆ. ಹಾಗಾಗಿ ನಾನು ಅದನ್ನು ಪರಿಗಣಿಸುತ್ತಿದ್ದೇನೆ" ಎಂದಿದ್ದಾಳೆ. ʼನೀವು ಯಾವ ರೀತಿಯ ಸಂಗಾತಿಯನ್ನು ಹುಡುಕುತ್ತಿದ್ದೀರಿ?ʼ ಎಂದು ಮೆಹ್ವಿಶ್ ಳನ್ನು ಕೇಳಿದಾಗ, "ಅವರು ಎಲ್ಲರಂತೆ ಇರಬೇಕು" ಎಂದಿದ್ದಾಳೆ ನಟಿ. ಎಲ್ಲರಂತೆ ಎಂದರೆ, ಭೂಗತ್‌ ಡಾನ್‌ನಂತೆ ಅಲ್ಲದೆ ಸಾಮಾನ್ಯ ವ್ಯಕ್ತಿ ಎಂದರ್ಥವಿರಬಹುದು, ನಮಗೆ ಗೊತ್ತಿಲ್ಲ. ಅವಳೂ ಹೇಳಿಲ್ಲ. 

"ಒಬ್ಬ ವ್ಯಕ್ತಿಯಲ್ಲಿ ಕೇವಲ ಒಂದು ಗುಣವನ್ನು ಎತ್ತಿ ಹಿಡಿಯುವುದು ತುಂಬಾ ಕಷ್ಟ. ಅವನು ತನ್ನ ಕುಟುಂಬದೊಂದಿಗೆ ಸಂವಹನ ನಡೆಸುವ ವಿಧಾನ ಹೇಗೆ, ಅವನು ತನ್ನ ಮನೋಧರ್ಮವನ್ನು ಹೇಗೆ ನಿರ್ವಹಿಸುತ್ತಾನೆ ಎಂಬುದೆಲ್ಲ ಮುಖ್ಯವಾಗುತ್ತದೆ" ಎಂದಿದ್ದಾಳೆ. ಸದ್ಯ, ಮೆಹ್ವಿಶ್‌ ತನ್ನನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ತಿಳಿದು ದಾವೂದ್‌ ಗರಂ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದರಿಂದ ಎಲ್ಲಿ ಯಾರ ತಲೆ ಹೇಗೆ ಯಾವಾಗ ಉರುಳುತ್ತದೋ ತಿಳಿಯದು. 

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ದಾವೂದ್ ಇಬ್ರಾಹಿಂ ಜೊತೆಗಿನ ಮೆಹ್ವಿಶ್ ಸಂಬಂಧ 2019ರಲ್ಲಿ ಶುರುವಾಯಿತು. ಅದು ಮೆಹ್ವಿಶ್‌ ಪಾಕಿಸ್ತಾನದ ನಾಗರಿಕ ಗೌರವ ತಮ್ಘಾ-ಎ-ಇಮ್ತಿಯಾಜ್ ಅನ್ನು ಪಡೆದ ವರ್ಷ. ಅದರ ನಂತರ ಇಬ್ಬರ ನಡುವೆ ಗೆಳೆತನ ಪ್ರಾರಂಭವಾಯಿತು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ 27 ವರ್ಷ! ದಾವೂದ್ ಇಬ್ರಾಹಿಂ ಭಾರತದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್. 1993 ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬ.‌ ಆತ ಸಿಕ್ಕರೆ ಅಲ್ಲೇ ಹೊಡೆದು ಹಾಕಲು ಭಾರತದ ಗುಪ್ತಚರ ಇಲಾಖೆಯೂ ಕಾಯುತ್ತಿರುವಂತಿದೆ. ಆತನ ವೈರಿ ಗ್ಯಾಂಗ್‌ಗಳೂ ಸಾಕಷ್ಟು ಬಲಿಷ್ಠವಾಗಿವೆ. ಇದೆಲ್ಲದರ ನಡುವೆ ಮೆಹ್ವಿಶ್‌, ದಾವೂದ್‌ನನ್ನು ಯಾಕೆ ಆರಿಸಿಕೊಂಡಳೋ ಗೊತ್ತಿಲ್ಲ. ಬಹುಶಃ ಆತ ಧಮಕಿ ಹಾಕಿರಬಹುದು. ಪಾಕಿಸ್ತಾನದಲ್ಲಿ ಆತನ ಗ್ಯಾಂಗ್‌ ಈಗಲೂ ಬಲಿಷ್ಠವಾಗಿದೆ. ಭಯೋತ್ಪಾದಕರ ಬೆಂಬಲವೂ ಅವನಿಗೆ ಇರಬಹುದು. ಹೀಗಾಗಿ ಮೆಹ್ವಿಶ್‌ ಹೆದರಿಕೊಂಡಳೋ ಏನೋ ಗೊತ್ತಿಲ್ಲ. 

ಸನ್ನಿ ಲಿಯೋನ್, ಐಶ್ವರ್ಯಾ ರೈ, ಶಾರುಖ್, ತ್ರಿಷಾ ಸೇರಿದಂತೆ ಸಿನಿಮಾ ತಾರೆಯರ ಪಾಸ್‌ಪೋರ್ಟ್‌ ಫೋಟೋಸ್ ವೈರಲ್!

ಏತನ್ಮಧ್ಯೆ, ಮೆಹ್ವಿಶ್ ಕೆಲವು ಫಿಲಂಗಳಲ್ಲಿ ನಟಿಸಿದಳು. ಹಯಾತ್ ಫಿರ್ ಚಂದ್ ಪೆ ದಸ್ತಕ್, ಮಿರಾತ್-ಉಲ್-ಉರೂಸ್, ಇಷ್ಕ್ ಮೇ ತೇರೇ, ರು ಬಾರು ಮತ್ತು ಅಂಜುಮ್ ಶಹಜಾದ್ , ಕಭಿ ಕಭಿ ಅವರ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಕೆಲವು. ನಹಿ ಜಾವೂಂಗಿ (2017), ಲೋಡ್ ವೆಡ್ಡಿಂಗ್ (2018) ಮತ್ತು ಲಂಡನ್ ನಹಿ ಜಾವೂಂಗಾ ಅವಳ ಅತಿ ಹೆಚ್ಚು ಗಳಿಕೆಯ ಪಾಕಿಸ್ತಾನಿ ಚಲನಚಿತ್ರಗಳು. ಅಷ್ಟರ ಮಟ್ಟಿಗೆ ಅವಳು ಯಶಸ್ವಿ ನಟಿಯೇ. 

1988ರಲ್ಲಿ ಜನಿಸಿದ ಹಯಾತ್‌ಗೆ ಈಗ 36 ವರ್ಷ. ಮದುವೆ ಆಗಬೇಕಾದ ಪ್ರಾಯವೇ. ತುಸು ತಡವೇ ಆಯಿತೇನೋ. 1955ರಲ್ಲಿ ಜನಿಸಿದ ದಾವೂದ್‌ಗೆ ಈಗ 68 ವರ್ಷ. ಹಲವು ರೋಗಗಳು ಆತನನ್ನು ಕಾಡುತ್ತಿವೆ ಎನ್ನಲಾಗುತ್ತಿದೆ. ಇಂಥವನಲ್ಲಿ ಮೆಹ್ವಿಶ್‌ ಏನನ್ನು ಕಂಡಳೋ! ಇರಲಿ. ಈಕೆ ಪಾಕಿಸ್ತಾನದ ಚಿತ್ರರಂಗದಲ್ಲಿ ಉಲ್ಕೆಯಂತೆ ದಿಡೀರ್‌ ಮೇಲೇಳಲು ದಾವೂದೇ ಕಾರಣ ಎಂದು ಕೂಡ ಹೇಳಲಾಗುತ್ತಿದೆ. ಈತನಿಂದಾಗಿಯೇ ಆಕೆಗೆ ಪಾಕ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಕ್ಕಿದೆ ಎಂದು ಕೂಡ ಹೇಳಲಾಗುತ್ತಿದೆ.

ನಿನ್ನ ಕಥೆ ಹೊರಗೆ ಬಂದಿದೆ... ಜೈಲಿನಲ್ಲಿ ನೋಡ್ಕೋತೀನಿ... ದೀಪಾವಳಿ ಗಿಫ್ಟ್​ ಹೆಸರಲ್ಲಿ ತಮನ್ನಾಗೆ ಕೈಕೋಳ!