ದೀಪಾವಳಿ ಗಿಫ್ಟ್​ ಎಂದು ನಟಿ ತಮನ್ನಾ ಭಾಟಿಯಾ ಮತ್ತು ಅವಿನಾಶ್​ ತಿವಾರಿ ಅವರಿಗೆ ಕೈಕೋಳ ಗಿಫ್ಟ್​ ಕೊಡಲಾಗಿದೆ. ನಟರು ಹೇಳಿದ್ದೇನು?  

ದೀಪಾವಳಿ ಸಡಗರ ಮುಗಿದಿದೆ. ಆದರೆ ಇದೀಗ ಬಾಲಿವುಡ್​ ನಟರಾದ ತಮನ್ನಾ ಭಾಟಿಯಾ ಮತ್ತು ಅವಿನಾಶ್​ ತಿವಾರಿ ಅವರ ದೀಪಾವಳಿ ಉಡುಗೊರೆ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ, ದೀಪಾವಳಿ ಸಂದರ್ಭದಲ್ಲಿ ಇವರಿಗೆ ನೀಡಿರುವ ಹಲವಾರು ಉಡುಗೊರೆಗಳಲ್ಲಿ ಕೈಕೋಳವನ್ನು ಕೂಡ ಯಾರೋ ಕಿಡಿಗೇಡಿಗಳು ನೀಡಿದ್ದಾರೆ. ತಮಗೆ ಸಿಕ್ಕಿರುವ ಉಡುಗೊರೆಗಳನ್ನು ಒಂದೊಂದಾಗಿ ತೋರಿಸಿದ ತಮನ್ನಾ ಮತ್ತು ಅವಿನಾಶ್​ ಅವರಿಗೆ ಶಾಕ್​ ಕೊಟ್ಟಿದ್ದು ಕೈಕೋಳ. ಉಡುಗೊರೆ ಬಾಕ್ಸ್​ನಲ್ಲಿದ್ದ ಈ ಉಡುಗೊರೆ ನೋಡಿ ನಟಿ ಸಕತ್​ ಗರಂ ಆಗಿದ್ದಾರೆ. ಇದು ತಮಾಷೆ ಮಾಡುವ ವಿಷಯವಲ್ಲ ಎಂದು ಕಿಡಿ ಕಾರಿದ್ದಾರೆ. ವಿಚಿತ್ರ ಎಂದರೆ ಅದರಲ್ಲಿ ನಿನ್ನ ಕಥೆ ಹೊರಗೆ ಬಂದಿದೆ... ಜೈಲಿನಲ್ಲಿ ನೋಡ್ಕೋತೀನಿ... ಎಂಬ ಸಂದೇಶವನ್ನೂ ಇಡಲಾಗಿದ್ದು, ಇದೇನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಇನ್ನು, ನಟಿ ತಮನ್ನಾ ಭಾಟಿಯಾ (Tamannaah Bhatia) ಬಗ್ಗೆ ಹೇಳುವುದಾದರೆ, ಇವರು ಹಾಗೂ ವಿಜಯ್ ವರ್ಮಾ ಅವರು ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್​ ಮಾಡಿದ ಮಾತ್ರಕ್ಕೆ ನಟ ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಮೊದಲಿನಿಂದಲೂ ಇದೆ. ವಿಜಯ್​ ವರ್ಮಾ ಅವರಿಗೂ 38 ವರ್ಷ ವಯಸ್ಸಾಗಿದ್ದು, ಇಬ್ಬರಿಗೂ ಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 34 ವರ್ಷ ವಯಸ್ಸು. ನಟ ವಿಜಯ್ ವರ್ಮಾ ಜೊತೆ ಡೇಟಿಂಗ್​ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್​ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್​ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. 

30ರ ಯುವಕನ ಜತೆ 49ರ ನಟಿ ಅಮಿಷಾ ಪಟೇಲ್​ ಲವ್ವಿಡವ್ವಿ: ಉದ್ಯಮಿ ಕಮೆಂಟ್​ ನೋಡಿ ಫ್ಯಾನ್ಸ್ ಶಾಕ್​! ​

ಕೊನೆಗೂ ಇಬ್ಬರೂ ಕಳೆದ ಜೂನ್‌ನಲ್ಲಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು. 2023ರ ಹೊಸ ವರ್ಷಾಚರಣೆ ವೇಳೆ ಈ ಜೋಡಿ 'ಲಿಪ್ ಲಾಕ್' ಮಾಡಿಕೊಂಡು ಸುದ್ದಿಯಾಗಿತ್ತು. 'ಲಸ್ಟ್ ಸ್ಟೋರೀಸ್' ಚಿತ್ರದ ಬಳಿಕ ತಮನ್ನಾ ವಿಜಯ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅದಾದ ಮೇಲೆ ಇವರಿಗೆ ಹೋದಲ್ಲಿ ಬಂದಲ್ಲಿ ಮದ್ವೆ ಸುದ್ದಿಯನ್ನೇ ಕೇಳಲಾಗಿತ್ತು. 'ಜಾನೇ ಜಾನ್' ಚಿತ್ರದಲ್ಲಿ ಕರೀನಾ ವಿಜಯ್ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆ ವೇಳೆ ಕರೀನಾ ಕಪೂರ್ ತಮ್ಮ ಇಡೀ ಫ್ಯಾಮಿಲಿ ಜತೆ ಬಂದಿದ್ದರು. ಆಗ ವಿಜಯ್​ ಅವರು, ತಮಗೂ ಮಕ್ಕಳು ಬೇಕು, ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಮಾತನಾಡಿದ್ದರು. ಆಗ ಕರೀನಾ 'ನೀವು ಸರಿಯಾದ ರೂಟ್‌ನಲ್ಲಿ ಇದ್ದೀರಿ ಎನಿಸುತ್ತಿದೆ. ನೀವು ನನ್ನಿಂದ ಪ್ರೇರಣೆ ಪಡೆದಿರುವುದು ಒಳ್ಳೆಯದು. ಆದಷ್ಟು ಬೇಗ ನಿಮ್ಮ ಆಸೆ ಕೈಗೂಡಲಿ' ಎಂದಿದ್ದರು. ಒಟ್ಟಿನಲ್ಲಿ ಈ ಜೋಡಿ ಯಾವಾಗ ಹಸೆ ಮಣೆ ಏರುವುದು ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದು, ಇದೀಗ ತಮ್ಮ ಸಂಬಂಧದ ಕುರಿತು ವಿಜಯ್​ ವರ್ಮಾ ಓಪನ್​ ಆಗಿ ಮಾತನಾಡಿದ್ದಾರೆ. 

ತಮನ್ನಾ ಕುರಿತು ಓಪನ್​ ಆಗಿ ಮಾತನಾಡಿರುವ ವಿಜಯ್ ವರ್ಮಾ, "ನಾನು 2005 ರಲ್ಲಿ ಹೈದರಾಬಾದ್ ತೊರೆದು ಮುಂಬೈಗೆ ಬಂದಿದ್ದೆ. ಮತ್ತು ಅದೇ ವರ್ಷ ಅವಳು ಮುಂಬೈನಿಂದ ಹೈದರಾಬಾದ್‌ಗೆ ಬಂದಳು. ಅವಳು ಹೈದರಾಬಾದ್‌ನಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡ ಮುಂಬೈ ಹುಡುಗಿ ಮತ್ತು ನಾನು ಹೈದರಾಬಾದ್​ನಲ್ಲಿ ಸ್ಥಾಪಿತಗೊಂಡಿರುವ ಹುಡುಗ. ಅವಳು ನಿರರ್ಗಳವಾಗಿ ತಮಿಳು ಮತ್ತು ತೆಲುಗು ಮಾತನಾಡುತ್ತಾಳೆ, ಆದ್ದರಿಂದ ನಮ್ಮ ಸಂಬಂಧವು ತುಂಬಾ ಆಸಕ್ತಿದಾಯಕವಾಗಿದೆ ಎಂದಿದ್ದಾರೆ ವಿಜಯ್​ ವರ್ಮಾ. ತಮ್ಮ ಸಂಬಂಧದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಅವರು, "ನಮ್ಮ ಸಂಬಂಧವು ಲಸ್ಟ್ ಸ್ಟೋರಿಗಳ ನಂತರ ಪ್ರಾರಂಭವಾಯಿತು, ಮೊದಲು, ನಾವು ಸಹ ನಟರಾಗಿ, ತುಂಬಾ ಚಿತ್ರಗಳಲ್ಲಿ ನಟಿಸಿದ್ದೇವೆ, ಭೇಟಿಯಾಗಿದ್ದೆವು. ಆದರೆ ಲಸ್ಟ್​ ಸ್ಟೋರೀಸ್​ -2 ಬಳಿಕ ಪ್ರೀತಿ ಗಾಢವಾಯಿತು. ತಮನ್ನಾ ಜೊತೆ ನನಗೆ ತುಂಬಾ ಮಜಾ ಬರುತ್ತದೆ. ಆಕೆಯ ಜೊತೆ ಇರುವುದು ರೋಚಕ ಎಂದಿದ್ದಾರೆ ನಟ. 

ಶಾರುಖ್​ ಖಾನ್​ ಹಣವೇ ಕೊಡದಿದ್ರೂ ಬೀದಿ ವ್ಯಾಪಾರಿಗಳು ಮಾಲಾಮಾಲ್​- ಇದು ನಟನ ಕಮಾಲ್​!

View post on Instagram