ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಒಂದು ವರ್ಷ ಪೂರ್ಣಗೊಂಡಿದೆ. ಈ ವರದಿಯು ಅವರ ಬಂಧನ, ಜೈಲುವಾಸದ ದಿನಗಳು ಮತ್ತು ಪ್ರಸ್ತುತ ಕಾನೂನು ಹೋರಾಟದ ಕುರಿತು ವಿವರಿಸುತ್ತದೆ.
ಬೆಂಗಳೂರು: ಮನೆ ತುಂಬಾ ಆಳು ಕಾಳು, ಕೆಮ್ಮಿದ್ರೆ ಸಾಕು ನೀರು ಕೊಡೋಕೆ ಜನ. ನಾಯಿ ಸಾಕೋಕೆ ಒಬ್ಬ, ಗುಡುಸಿ ಒರಸೋಕೆ ಮತ್ತೊಬ್ಬ. ಬೇಕಾದ್ದನ್ನ ಮಾಡಿ ಉಣ ಬಡಿಸೋಕೆ ಮೆಚ್ಚಿನ ಅಡುಗೆ ಭಟ್ಟ. ಓಡಾಡೋಕೆ ಬೇಕಾದ ಕಾರು, ಸಿಕ್ಕಿದ್ದನ್ನ ಧರಿಸೋಕೆ ಕೈ ತುಂಬ ಹಣ. ಜೈ ಕಾರ ಹಾಕೋದಕ್ಕೆ ಅಕ್ಕ ಪಕ್ಕ ಸಾವಿರಾರು ಜನ. ಇದು ನಟ ದರ್ಶನ್ ಐಶಾರಾಮಿ ಬದುಕು ಸುಂದರ ಕ್ಷಣ. ಆದ್ರೆ ಅದೆಲ್ಲ ಮಾಯವಾಗಿ 365 ದಿನ ಆಗಿದೆ. ದರ್ಶನ್ ಜೈಲು ಸೇರಿ ನೋಡ್ ನೋಡುತ್ತಿದ್ದಂತೆ ಒಂದು ವರ್ಷ ಆಗಿದೆ. ಆ ಬಗ್ಗೆ ಒಂದು ವರಧಿ ಇಲ್ಲಿದೆ.
ರೇಣುಕಾಸ್ವಾಮಿ ಸಹವಾಸ, ದಾಸ 365 ದಿನ ವನವಾಸ.!
ಯೆಸ್, ನಟ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ಆಗಿದ್ದವರು. ದಾಸನಿಗೆ ಸಾವಿರಾರು ಜನ ಅಭಿಮಾನಿ ಬಳಗ ಇತ್ತು. ದಚ್ಚು ಹೋದಲ್ಲಿ ಬಂದಲ್ಲೆಲ್ಲಾ ಮುತ್ತಿಕೊಳ್ತಾ ಇದ್ರು. ಸ್ಟಾರ್ಡರ್ಮ್ನ ಮೈಗೆ ಮತ್ತು ತಲೆಗೆ ಹೊತ್ತಿಸಿಕೊಂಡಿದ್ದ ದಾಸ ಮಾಡಿದ್ದ ಸಿನಿಮಾ. ಆಡಿದ್ದೇ ಆಟ ಅನ್ನೋ ಹಾಗಾಗಿತ್ತು. ಯಾಕಂದ್ರೆ ದರ್ಶನ್ ಯಾವ್ದೇ ಸಿನಿಮಾ ಬಂದ್ರೆ ಹಿಟ್ ಅನ್ನೋ ನಂಬಿಕೆ ಹುಟ್ಟಿತ್ತು. ಇದರಿಂದ ದಾಸ ಏನು ಮಾಕಾದ್ರು ಮಾಡಬಹುದು ಅನ್ನೋ ಹುಚ್ಚು ತಲೆಗೇರಿತ್ತು. ಅದರ ಎಫೆಕ್ಟೇ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ಪಟ್ಟ ಕಟ್ಟಿಕೊಳ್ಳಬೇಕಾಯ್ತು.
ದರ್ಶನ್‌ಗೆ ಕೊಲೆ ಆರೋಪಿ ಪಟ್ಟ ಕಟ್ಟಿ ಆಯ್ತು ಒಂದು ವರ್ಷ..!
ನಟ ದರ್ಶನ್ ಸ್ಯಾಂಡಲ್ವುಡ್ನಲ್ಲಿ 3 ದಶಕಗಳಿಂದ ಕಷ್ಟ ಪಟ್ಟು ತನ್ನದೇ ಒಂದು ಸಾಮ್ರಾಜ್ಯ ಕಟ್ಟಿದ್ರು. ಆದ್ರೆ ದೊಣ್ಣೆಗೆ ಒಂದೇ ನಿಮಿಷ ಅನ್ನೋ ಮಾತಿನಂತೆ ಒಂದೇ ಒಂದು ಏಟು ದರ್ಶನ್ ಕಟ್ಟಿದ್ದ ಕೋಟೆ ಬಾಗಿಲೇ ಮುರಿದು ಹೋಗೋ ಹಾಗಾಯ್ತು. ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಪದ ಬಳಸಿದಾ ಅನ್ನೋ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ ಆರೋಪ ರಾತ್ರಿ ಬೆಳಗಾಗೋದ್ರೊಳಗೆ ದರ್ಶನ್ ಮೇಲೆ ಬಂದು ಬಿಡ್ತು. ಈಗ ದರ್ಶನ್ ಈ ಪ್ರಕಣದಲ್ಲಿ ಆರೋಪಿ ಆಗಿ ಜೈಲು ಸೇರಿ ಒಂದು ವರ್ಷ ಆಗಿದೆ.
ಕೊಲೆ ಆರೋಪಕ್ಕೆ 20 ತಿಂಗಳು. ಜೈಲು ವಾಸಕ್ಕೆ 365 ದಿನ!
ನಟ ದರ್ಶನ್ ಮೇಲೆ ಕೊಲೆ ಆರೋಪ ಬಂದು 20 ತಿಂಗಳು ಆಗಿದೆ. ಆದ್ರೆ ಜೈಲು ಸೇರಿ ಒಟ್ಟು 365 ದಿನ ಕಳೆದಿದೆ. ಅಂದರೆ ಮೊದಲ ಬಾರಿ 2024 ಜೂನ್ 11 ರಂದು ಮೈಸೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದ ದರ್ಶನ್ 2024 ಅಕ್ಟೋಬರ್ 30ರ ತನಕ ಅಂದರೆ 131 ದಿನಗಳ ಕಾಲ ಪರಪ್ಪನ ಅಗ್ರಹಾರ ಹಾಗು ಬಳ್ಳಾರಿ ಜೈಲಿನಲ್ಲೇ ಇದ್ರು.
ಇದಾದ ಬಳಿಕ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ರು. ಆದ್ರೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ರದ್ದು ಆಗಿದ್ದಕ್ಕೆ ಮತ್ತೆ ದಾಸನ ಬಂಧನವಾಗಿತ್ತು. ನಟ ದರ್ಶನನ್ನು 14 ಆಗಸ್ಟ್ 2025ರಂದು ಮತ್ತೆ ಪರಪ್ಪನ ಅಗ್ರಹಾರ ಸೇರಿಕೊಂಡ್ರು. ಅಲ್ಲಿಂದ ಇಲ್ಲಿಯ ತನಕ ದಾಸ ಜೈಲು ಗೋಡೆಗಳನ್ನ ಬಿಟ್ಟರೆ ಮತ್ತಿನ್ನೇನನ್ನೂ ನೋಡಿಲ್ಲ.
ಎರಡನೇ ಬಾರಿ ದಾಸ ಬಂಧನವಾಗಿ ಕಳೆಯಿತು 226 ದಿನ!
ದಿ ಡೆವಿಲ್ ಸಿನಿಮಾದ ರಿಲೀಸ್ ವೇಳೆ ನಟ ದರ್ಶನ್ ತನ್ನ ಸೆಲೆಬ್ರಿಟಿಗಳು ಸಿನಿಮಾವನ್ನು ಗೆಲ್ಲಿಸುವುದನ್ನು ಕಣ್ತುಂಬಿಕೊಳ್ಳಲು ಆಗದೆ ಜೈಲಿನಲ್ಲಿ ಕೊರಗಿದ್ರು. ಡೆವಿಲ್ ಈಗ ಥಿಯೇಟರ್ನಲ್ಲಿ 100 ಡೇಸ್ ಆಗಿಲ್ಲ. ಆದ್ರೆ ದಾಸ ಎರಡನೇ ಬಾರಿ ಬಂಧನಕ್ಕೆ ಒಳಗಾಗಿ 226 ದಿನ ಕಳೆದಿದೆ. ದರ್ಶನ್ ಹೊರ ಬರೋದಕ್ಕೆ ಕಾನೂನು ಹೋರಾಟ ನಡಿತಾ ಇದೆ.


