ನಟ ಪ್ರಭಾಸ್ ಅವರು ವರ್ಷ 40 ಆದರೂ ಇನ್ನು ಮದುವೆಯಾಗಿಲ್ಲ. ಸಮಾಜದ ದೃಷ್ಟಿಯಿಂದ ಮದುವೆ ಅನ್ನೋದು ಭಾರತದಲ್ಲಿ ಅನಿವಾರ್ಯ ಎಂಬಂತಾಗಿದೆ. ಈಗೀಗ ಈ ಟ್ರೆಂಡ್ ಸಾಕಷ್ಟು ಬದಲಾಗುತ್ತಿದ್ದರೂ ಇನ್ನೂ ಕೂಡ ಜನರು 'ಮದುವೆ ಆಗಿಲ್ವಾ? 'ಹಾಗೂ 'ಯಾವಾಗ ಮದುವೆ' ಎಂದು ಪ್ರಶ್ನೆ ಕೇಳುವುದನ್ನು ಬಿಟ್ಟಿಲ್ಲ.
ಇದು ಪ್ರಭಾಸ್ ಇತ್ತೀಚಿನ ಕಥೆ
Prabhas: ಟಾಲಿವುಡ್ ನಟ, 'ಡಾರ್ಲಿಂಗ್' ಖ್ಯಾತಿಯ ಪ್ರಭಾಸ್ (Prabhas) ಅವರೀಗ ಸಖತ್ ಸುದ್ದಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಸಂದರ್ಶನವೊಂದರಲ್ಲಿ ಆಡಿರುವ ಮಾತೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಸದ್ಯಕ್ಕೆ ನಟ ಪ್ರಭಾಸ್ ಅವರು ಮಾರುತಿ ನಿರ್ದೇಶನದ ಈ ಕಾಮಿಡಿ ಹಾರರ್ ಗ್ರಿಲ್ಲರ್ 'ದಿ ರಾಜಾ ಸಾಹೇಬ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ದಿ ಕುಮಾರ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಸಹ ಈ ಸಿನಿಮಾದ ಭಾಗವಾಗಿದ್ದಾರೆ. ದಿ ರಾಜಾ ಸಾಹೇಬ್ (The Raja Saab) ಸಿನಿಮಾ ಜನವರಿ 9, 2026ರ ಸಂಕ್ರಾಂತಿ ಹಬ್ಬದಂದು ವನ್ನು ಆಚರಿಸಲು ಬಿಡುಗಡೆಯಾಗಲಿದೆ.
ಪ್ರೀ-ರಿಲೀಸ್ ಸಮಾರಂಭ
ಇದೀಗ ಈ ಸಿನಿಮಾ ಪ್ರಚಾರಕಾರ್ಯ ಆರಂಭಿಸಿದ್ದು, ಸಿನಿಮಾ ಪ್ರಚಾರದ ಭಾಗವಾಗಿ ಶನಿವಾರ (ಡಿಸೆಂಬರ್ 27) ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಸಮಾರಂಭ ನಡೆಯಿತು. ನಾಯಕ ಪ್ರಭಾಸ್ ಮತ್ತು ಇಡೀ ಚಿತ್ರತಂಡ ಈ ಸಮಾರಂಭದಲ್ಲಿ ಭಾಗವಹಿಸಿತ್ತು. ಪ್ರಭಾಸ್ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಏತನ್ಮಧ್ಯೆ, ಪ್ರೀ-ರಿಲೀಸ್ ಕಾರ್ಯಕ್ರಮದ ಭಾಗವಾಗಿ, ನಿರೂಪಕಿ ಸುಮಾ ಅವರು ನಟ ಪ್ರಭಾಸ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರಲ್ಲಿ ಕೆಲವು ಅಭಿಮಾನಿಗಳು 'ಪ್ರಭಾಸ್ ಅವರನ್ನು ಮದುವೆಯಾಗಲು ಯಾವ ಗುಣಗಳನ್ನು ಹೊಂದಿರಬೇಕು' ಎಂದು ಕೇಳುವ ಫಲಕವನ್ನು ಹಿಡಿದಿದ್ದರು. ಇದನ್ನು ನೋಡಿದ ಆಂಕರ್ ಸುಮಾ ತಕ್ಷಣ ಪ್ರಭಾಸ್ ಬಳಿಗೆ ಹೋಗಿ ಆ ಬಗ್ಗೆ ಕೇಳಿದ್ದಾರೆ.
ಮದುವೆ ಆಗದ ಸತ್ಯ ಹೇಳಿದ ಪ್ರಭಾಸ್
'ನಾನು ನಿನ್ನನ್ನು ಮದುವೆಯಾಗಲು ಬಯಸಿದರೆ, ಒಂದು ಗುಣವನ್ನು ಹೇಳು' ಎಂದು ಅವರು ಪ್ರಭಾಸ್ ಅವರನ್ನು ಕೇಳಿದ್ದಾರೆ ಸುಮಾ. ಇದಕ್ಕೆ ನಟ ಪ್ರಭಾಸ್, 'ಆ ಗುಣ ನನಗೆ ತಿಳಿದಿಲ್ಲದ ಕಾರಣ ನಾನು ಇಷ್ಟು ದಿನ ಮದುವೆಯಾಗಿಲ್ಲ' ಎಂದು ಉತ್ತರಿಸಿದರು. ಪ್ರಭಾಸ್ ಈ ಮಾತು ಕೇಳಿ ನಿರೂಪಕಿ ಸುಮಾ, ಅತಿಥಿಗಳು ಮತ್ತು ಪ್ರೇಕ್ಷಕರು ಸೇರಿದಂತೆ ಎಲ್ಲರೂ ನಗೆಗಡಲಲ್ಲಿ ತೇಲಿದರು. ಪ್ರಸ್ತುತ, ಮದುವೆಯ ಬಗ್ಗೆ ಪ್ರಭಾಸ್ ಅವರ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಹೌದು, ನಟ ಪ್ರಭಾಸ್ ಅವರು ವರ್ಷ 40 ಆದರೂ ಇನ್ನು ಮದುವೆಯಾಗಿಲ್ಲ. ಸಮಾಜದ ದೃಷ್ಟಿಯಿಂದ ಮದುವೆ ಅನ್ನೋದು ಭಾರತದಲ್ಲಿ ಅನಿವಾರ್ಯ ಎಂಬಂತಾಗಿದೆ. ಈಗೀಗ ಈ ಟ್ರೆಂಡ್ ಸಾಕಷ್ಟು ಬದಲಾಗುತ್ತಿದ್ದರೂ ಇನ್ನೂ ಕೂಡ ಜನರು 'ಮದುವೆ ಆಗಿಲ್ವಾ? 'ಹಾಗೂ 'ಯಾವಾಗ ಮದುವೆ' ಎಂದು ಪ್ರಶ್ನೆ ಕೇಳುವುದನ್ನು ಬಿಟ್ಟಿಲ್ಲ. ಹೀಗಾಗಿ, ನಟ ಪ್ರಭಾಸ್ ಅವರ ಮದುವೆ ಒಂದು ಇಂಟರ್‌ನ್ಯಾಷನಲ್ ಇಶ್ಯೂ ಎಂಬಂತೆ ಬಿಂಬಿತವಾಗುತ್ತಿದೆ. ಆದರೆ, ಇದೀಗ ನಟ ಪ್ರಭಾಸ್ ಕೊಟ್ಟಿರೋ ತಮಾಷೆಯ ಉತ್ತರ ಸಾಕಷ್ಟು ವೈರಲ್ ಆಗುತ್ತಿದೆ.


