Asianet Suvarna News Asianet Suvarna News

ಮುಂದಿನ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಭಾಸ್; ಖ್ಯಾತ ನಿರ್ಮಾಣ ಸಂಸ್ಥೆ, ಅಂತಿಂಥವರಲ್ಲ ನಿರ್ದೇಶಕರು!

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಮೊದಲು ಬಿಡುಗಡೆಯಾಗಿದ್ದ 'ಉಗ್ರಂ, ಕೆಜಿಎಫ್, ಕೆಜಿಏಫ್ 2 ಚಿತ್ರಗಳು ಸೂಪರ್ ಹಿಟ್ ಆಗುವುದರ ಮೂಲಕ ಅವರು ನಿರ್ದೇಶನದ ಚಿತ್ರಕ್ಕೆ ನಿರೀಕ್ಷೆ ಮೂಡುವಂತೆ ಆಗಿದೆ.

Darling Fame Telugu actor Prabhas set to act in upcoming maruthi directional untitled movie srb
Author
First Published Dec 29, 2023, 6:29 PM IST

ತೆಲುಗು ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಅವರು ಸಲಾರ್ ಬಿಡುಗಡೆ ಬಳಿಕ ಮತ್ತಷ್ಟು ಎತ್ತರಕ್ಕೆ ಏರಿದ್ದಾರೆ. ಸಲಾರ್ ಒಂದು ವಾರ ಕಳೆಯುವ ಮೊದಲೇ 500 ಕೋಟಿ ರೂಪಾಯಿ ಗಳಿಸಿದ್ದು, ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ಪ್ರಭಾಸ್ ಹಾಗು ಪ್ರಥ್ವಿರಾಜ್ ಸುಕುಮಾರನ್ ನಟನೆಯ ಈ ಚಿತ್ರದಲ್ಲಿ ನಾಯಕಿಯಾಗಿ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ನಟಿಸಿದ್ದಾರೆ. ಸಲಾರ್ ಚಿತ್ರವು ನಿರೀಕ್ಷೆ ಹುಸಿ ಮಾಡದೇ ಸೂಪರ್ ಹಿಟ್ ಆಗುವತ್ತ ಸಾಗಿದೆ. ತೆಲುಗು ಚಿತ್ರರಂಗದ ಸ್ಟಾರತ್ ನಿರ್ದೇಶಕ ಮಾರುತಿ ನಿರ್ದೇಶನದ ಹೊಸ ಚಿತ್ರಕ್ಕೆ ಪ್ರಭಾಸ್ ಈಗ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. 

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಮೊದಲು ಬಿಡುಗಡೆಯಾಗಿದ್ದ 'ಉಗ್ರಂ, ಕೆಜಿಎಫ್, ಕೆಜಿಏಫ್ 2 ಚಿತ್ರಗಳು ಸೂಪರ್ ಹಿಟ್ ಆಗುವುದರ ಮೂಲಕ ಅವರು ನಿರ್ದೇಶನದ ಚಿತ್ರಕ್ಕೆ ನಿರೀಕ್ಷೆ ಮೂಡುವಂತೆ ಆಗಿದೆ. ಹಾಗೇ ನಟ ಪ್ರಭಾಸ್ ಅವರು ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿ ಹೊರಹೊಮ್ಮಿದ್ದರು. ಆದರೆ, ಪ್ರಭಾಸ್ ನಟನೆಯಲ್ಲಿ ಬಾಹುಬಲಿ ಬಳಿಕ ತೆರೆಗೆ ಬಂದಿದ್ದ ರಾಧೆಶ್ಯಾಮ್, ಕಲ್ಕಿ ಹಾಗೂ ಆದಿ ಪುರುಷ್ ಚಿತ್ರಗಳು ಸತತ ಸೋಲು ಅನುಭವಿಸಿ ಪ್ರಭಾಸ್ ಸ್ಟಾರ್ ಪಟ್ಟ ಅಲುಗಾಡತೊಡಗಿತ್ತು. 

ಹೊಸಬಳೊಂದಿಗೆ ಅರ್ಜನ್ ಕಪೂರ್ ಕುಚ್‌ ಕುಚ್‌; ವಿರಹ ವೇದನೆಯಲ್ಲಿ ಬೇಯುತ್ತಿರುವ ಮಲೈಕಾಗೆ ಯಾರು ಗತಿ!

ಈಗ ಬಿಡುಗಡೆಯಾಗಿರುವ ಸಲಾರ್ ಮೂಲಕ ಮತ್ತೆ ನಟ ಪ್ರಭಾಸ್ ಮಾರ್ಕೆಟ್ ಹೆಚ್ಚುತ್ತಿದೆ. ಸಲಾರ್ ಮೋಡಿ ಈಗ ಜಗತ್ತಿನ ತುಂಬಾ ವ್ಯಾಪಿಸುತ್ತಿದ್ದು, ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಪ್ರಭಾಸ್ ಮುಖದಲ್ಲಿ ಮತ್ತೆ ಮುಗುಳ್ನಗು ಮೂಡಿದೆ. ಸದ್ಯ ಪ್ರಭಾಸ್ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು, ಅದು ತೆಲುಗು ಚಿತ್ರಂಗದ ಸ್ಟಾರ್ ನಿರ್ದೇಶಕ ಮಾರುತಿ ಅವರ ನಿರ್ದೇಶನದಲ್ಲಿ ಬರಲಿದೆ ಎಂಬುದು ವಿಶೇಷ ಸಂಗತಿ.

ಎಡಗೈಯೇ ಅಪಘಾತಕ್ಕೆ ಕಾರಣ; ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್! 

ಸದ್ಯ ಪ್ರಭಾಸ್ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಮಾರುತಿ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಅಂದಹಾಗೆ, ಮಾರುತಿ ಅವರು ಈ ಮೊದಲು ' ಬಸ್ ಸ್ಟಾಪ್, ಶೈಲಜಾ ರೆಡ್ಡಿ ಅಲ್ಲುಡು, ಎ ರೋಜುಲೋ, ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಮುಂಬರುವ ಪ್ರಭಾಸ್ ಚಿತ್ರದ ಫಸ್ಟ್ ಲುಕ್‌ ಅನ್ನು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಆ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿರುವ ಪೀಪಲ್ಸ್ ಮೀಡಿಯಾ ಸಂಸ್ಥೆ ಹೇಳಿದೆ. 

ಮಹಿಳಾ ಜೇಮ್ಸ್ ಬಾಂಡ್ ಆಗಿ ನಟಿಸಲು ಬಯಸುತ್ತೇನೆ; ಪ್ರಿಯಾಂಕಾ ಹೇಳಿದ್ದೇ ತಡ, ಲಡ್ಡು ಬಂದು ಬಾಯಿಗೆ ಬಿತ್ತಾ!

Follow Us:
Download App:
  • android
  • ios