ಖ್ಯಾತ ನೃತ್ಯ ಸಂಯೋಜಕ ಪ್ರಭುದೇವ್ ತಮ್ಮ ಮಗ ರಿಷಿ ರಾಘವೇಂದ್ರ ದೇವ್ ರನ್ನು ನೃತ್ಯದ ವಿಡಿಯೋ ಮೂಲಕ ಪರಿಚಯಿಸಿದ್ದಾರೆ. ತಂದೆ-ಮಗನ ಜೋಡಿಯ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ರಿಷಿಯನ್ನು ಪ್ರಭುದೇವ್ ರ ಝೆರಾಕ್ಸ್ ಕಾಪಿ ಎಂದು ಹೊಗಳಿದ್ದಾರೆ. ಪ್ರಭುದೇವ್ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿದ್ದು, ಉತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಚಲನಚಿತ್ರ ನಿರ್ಮಾಪಕ, ನಟ ಮತ್ತು ನೃತ್ಯ ಸಂಯೋಜಕ ಪ್ರಭುದೇವ (Prabhudeva) ತಮ್ಮ ಡ್ಯಾನ್ಸ್ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ಅವರ ಡ್ಯಾನ್ಸ್ ಮೂವ್ ಗಳಿಗೆ ಅಭಿಮಾನಿಗಳು ಪ್ರಪಂಚದಾದ್ಯಂತ ಕಂಡುಬರುತ್ತಾರೆ. ಪ್ರಭುದೇವ ಸ್ಟೇಜ್ ಮೇಲೆ ಅಥವಾ ತೆರೆಯ ಮೇಲೆ ಬಂದ್ರೆ ಸಾಕು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವ ಕಾಲವೊಂದಿದ್ದು. ಇವರನ್ನು ಭಾರತೀಯ ಮೈಕಲ್ ಜಾಕ್ಸನ್ ಅಂತಾನೂ ಕರೆಯುತ್ತಾರೆ. ಇದೀಗ ತಮ್ಮ ಝೆರಾಕ್ಸ್ ಕಾಪಿಯೊಂದನ್ನು ಪ್ರಭುದೇವ ಸೃಷ್ಟಿಸಿದ್ದಾರೆ. ಏನಪ್ಪಾ ಹೇಳ್ತಿದ್ದಾರೆ ಅಂದ್ಕೊಂಡ್ರ? ಇತ್ತೀಚೆಗೆ, ಪ್ರಭುದೇವ ತಮ್ಮ ಮಗ ರಿಷಿ ರಾಘವೇಂದ್ರ ದೇವ (Rishi Raghavendar Deva) ಅವರನ್ನು ಪವರ್ ಪ್ಯಾಕ್ಡ್ ಡ್ಯಾನ್ಸ್ ವಿಡಿಯೋ ಮೂಲಕ ಪರಿಚಯಿಸಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡೀಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ಅಮವಾಸ್ಯೆಯಂದು ಹುಟ್ಟಿದ ನೃತ್ಯಲೋಕದ ಈ ಚಂದಿರ 'ಡ್ಯಾನ್ಸ್ ಆಫ್ ಗಾಡ್'..!

ವಿಡಿಯೋದಲ್ಲಿ ಕಾಣಿಸಿಕೊಂಡ ತಂದೆ-ಮಗ ಜೋಡಿ
ಪ್ರಭುದೇವ ಮಂಗಳವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram account) ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ತಂದೆ-ಮಗ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಶೋ ನೀಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಪ್ರಭುದೇವ ಮತ್ತು ಅವರ ಮಗ ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಅಭಿಮಾನಿಗಳು ಅವರನ್ನು ಹುರಿದುಂಬಿಸುತ್ತಿದ್ದಾರೆ. ರಿಷಿಯನ್ನು ನೋಡಿದ್ರೆ ಸಿನಿಮಾ ಜೀವನ ಆರಂಭದಲ್ಲಿ ಪ್ರಭುದೇವ ಹೇಗಿದ್ರೋ ಹಾಗೇ ಕಾಣಿಸುತ್ತಿದ್ದಾರೆ. ಅಪ್ಪನಂತೆ ತಾವು ಕೂಡ ಡ್ಯಾನ್ಸ್ ಮೂವ್ಸ್ ಮಾಡಿ, ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿದ್ದಾರೆ. 

ಹೆಮ್ಮೆಯಿಂದ ಮಗನನ್ನು ಪರಿಚಯಿಸಿದ ಪ್ರಭುದೇವ
ಮಗನ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡೀಯೋ ಶೇರ್ ಮಾಡಿರುವ ಪ್ರಭುದೇವ "ನನ್ನ ಮಗ ರಿಷಿ ರಾಘವೇಂದ್ರ ದೇವ ಅವರನ್ನು ಪರಿಚಯಿಸಲು ಹೆಮ್ಮೆಪಡುತ್ತೇನೆ, ಏಕೆಂದರೆ ನಾವು ಮೊದಲ ಬಾರಿಗೆ ಜೊತೆಯಾಗಿ ಸ್ಪಾಟ್ ಲೈಟ್ ಗೆ ಬಂದಿದ್ದೇವೆ! ಇದು ನೃತ್ಯಕ್ಕಿಂತ ಹೆಚ್ಚಿನದಾಗಿದೆ - ಇದು ಪರಂಪರೆ, ಉತ್ಸಾಹ ಮತ್ತು ಈಗಷ್ಟೇ ಪ್ರಾರಂಭವಾದ ಪ್ರಯಾಣ ಎಂದು ಮಗನ ಬಗ್ಗೆ ಹೆಮ್ಮೆಯಿಂದ ಮಗನನ್ನು ಪರಿಚಯಿಸಿದ್ದಾರೆ (Prabhudeva introduces son). ಅಷ್ಟೇ ಆಲ್ಲ ಮಗ ನೃತ್ಯ ಮಾಡಿದ ಮೇಲೆ ಹೆಮ್ಮೆಯ ತಂದೆ ಪ್ರಭುದೇವ ಮಗನನ್ನು ಮುದ್ದಿಸಿದ್ದಾರೆ. ಜೊತೆಗೆ ವೇದಿಕೆಗೆ ನಮಸ್ಕರಿಸುವಂತೆ ತಿಳಿಸಿರುವುದು, ಪ್ರಭುದೇವ ವೇದಿಕೆಗೆ ಎಷ್ಟೊಂದು ಗೌರವ ಕೊಡುತ್ತಾರೆ ಅನ್ನೋದನ್ನು ತೋರಿಸುತ್ತೆ. 

ಒಬ್ಬನಿಂದ ನಂಬಿಕೆ ದ್ರೋಹ ಮತ್ತೊಬ್ಬನಿಗೆ ಜಾತಿ ಮತಾಂತ; ಹಳೆ ಲವರ್‌ಗಳ ಅಸಲಿ ಸತ್ಯ ಬಿಚ್ಚಿಟ್ಟ ನಯನತಾರ

ಅಭಿಮಾನಿಗಳು ಹೇಳಿದ್ದೇನು?
ಪ್ರಭುದೇವ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೂಡಲೇ, ಅವರ ಅಭಿಮಾನಿಗಳು ಕಾಮೆಂಟ್ ಸೆಕ್ಷನ್ ನಲ್ಲಿ ಮೆಚ್ಚುಗೆಯನ್ನು ನೀಡಲು ಪ್ರಾರಂಭಿಸಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್ ನಲ್ಲಿ ತಂದೆಯಂತೆ ಮಗ (Like father like son), ಪ್ರಭುದೇವರನ್ನು ಆರಂಭದಲ್ಲಿ ನೋಡಿದಾಗ ಹೇಗಿದ್ರೋ, ಮಗ ಈಗ ಹಾಗೆಯೇ ಇದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ನೋಡೋದಕ್ಕೂ ಆಪ್ಪನಂತೆ, ಡ್ಯಾನ್ಸ್ ಕೂಡ ಅಪ್ಪನಂತೆ ಇದೆ ಎಂದಿದ್ದಾರೆ. 

ಪ್ರಭುದೇವರ ಕರಿಯರ್
ಪ್ರಭುದೇವ ಅವರ ಕೆಲಸದ ಬಗ್ಗೆ ಹೇಳೋದಾದ್ರೆ ಪ್ರಭುದೇವ ಪ್ರಸಿದ್ಧ ನೃತ್ಯ ಸಂಯೋಜಕ (dance choreographer), ನಿರ್ದೇಶಕ ಮತ್ತು ನಟ. ಅಭಿಮಾನಿಗಳು ಅವರನ್ನು ಭಾರತದ ಮೈಕೆಲ್ ಜಾಕ್ಸನ್ ಎಂದು ಕರೆಯುತ್ತಾರೆ. ಅವರು ಅನೇಕ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ. ನೃತ್ಯದ ಜೊತೆಗೆ, ಪ್ರಭುದೇವ ಹಲವಾರು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಇತ್ತೀಚೆಗೆ, ಅವರು ಹಿಮೇಶ್ ರೇಶಮಿಯಾ ಅವರ 'ಬಡಾಸ್ ರವಿಕುಮಾರ್' ಚಿತ್ರದಲ್ಲಿ ಕಾಣಿಸಿಕೊಂಡರು. ಇನ್ನು ಹೆಚ್ಚಿಗೆ ಹೇಳಬೇಕು ಅಂದ್ರೆ ಪ್ರಭುದೇವ ಅವರು ನಮ್ಮ ಕರ್ನಾಟಕದ ಕುವರ, ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ತಮ್ಮ ಕರಿಯರ್ ಆರಂಭಿಸಿದ್ದು, ನೆಲೆಯೂರಿದ್ದು ಇವರು ತಮಿಳು ನಾಡಿನಲ್ಲಿ. ಪ್ರಭುದೇವ ತಂದೆ ಮುಗೂರು ಸುಂದರ್ ಹಾಗೂ ತಾಯಿ ಮಹಾದೇವಮ್ಮ. 

View post on Instagram