Asianet Suvarna News Asianet Suvarna News

ಕುಡಿದು ಚಾಲನೆ ಮಾಡಿದ್ದಕ್ಕೆ ಬಾಲಿವುಡ್​ ಹಿರಿಯ ನಟ ದಲೀಪ್​ಗೆ ಜೈಲು ಶಿಕ್ಷೆ! ಏನಿದು ಘಟನೆ?

 2018ರಲ್ಲಿ ಕುಡಿದು ಚಾಲನೆ ಮಾಡಿದ್ದಕ್ಕೆ ಬಾಲಿವುಡ್​ ಹಿರಿಯ ನಟ ದಲೀಪ್​ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಏನಿದು ಘಟನೆ? 
 

Dalip Tahil gets 2 months jail for drunk driving suc
Author
First Published Oct 22, 2023, 1:09 PM IST

ಅನೇಕ ಚಲನಚಿತ್ರಗಳು, ಟಿವಿ ಶೋಗಳು ಮತ್ತು ರಂಗಭೂಮಿಯಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ನಟ ದಲೀಪ್ ತಾಹಿಲ್ (Actor Dalip Tahil) ಕೆಲವು ಕಾರಣಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. 'ಬಾಜಿಗರ್'  'ರಾಜಾ'  'ಹಮ್ ಹೇ ರಹೀ ಪ್ಯಾರ್ ಕೆ' ,  'ಕಯಾಮತ್ ಸೆ ಕಯಾಮತ್ ತಕ್' ಬ್ಲಾಕ್​ಬಸ್ಟರ್​ ಚಿತ್ರ ನೀಡಿರುವ ನಟನಿಗೆ ಈಗ ಜೈಲು ಶಿಕ್ಷೆಯಾಗಿದೆ. ಅದಕ್ಕೆ ಕಾರಣ, ಕುಡಿದು ಚಾಲನೆ ಮಾಡಿದ್ದು.  ಅಷ್ಟಕ್ಕೂ ಇದು ಇಂದು ನಿನ್ನೆಯ ಪ್ರಕರಣವಲ್ಲ. 2018ರಲ್ಲಿ ನಡೆದ ಘಟನೆ.  ಹಿಟ್ ಆ್ಯಂಡ್ ರನ್ ಪ್ರಕರಣ ಇದಾಗಿದ್ದು,  ಕುಡಿದು ವಾಹನ ಚಲಾಯಿಸಿ ಪ್ರಯಾಣಿಕರನ್ನು ಗಾಯಗೊಳಿಸಿದ್ದಕ್ಕಾಗಿ  ನಟನಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ಐದು ವರ್ಷಗಳ ಬಳಿಕ ಈ ತೀರ್ಪು ಹೊರಬಂದಿದ್ದು, ನಟನೆಗೆ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.  ವರದಿಯ ಪ್ರಕಾರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟ ದಲೀಪ್ ತಾಹಿಲ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು,   ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.   


ಕಾನೂನಿನ ವಿಳಂಬ ಪ್ರಕ್ರಿಯೆ ಹೊಸತೇನಲ್ಲ.  ದಶಕಗಳವರೆಗೂ ನಡೆಯುವ ಕೇಸ್​ಗಳು, ಜೀವನ ಕೊನೆಗೊಂಡರೂ ಬರದ ತೀರ್ಪುಗಳು ಇವೆಲ್ಲವೂ ಕಾಮನ್​ ಆಗಿ ಬಿಟ್ಟಿದೆ. ಚಿಕ್ಕ ಪುಟ್ಟ ಪ್ರಕರಣಗಳು ಕೂಡ ಹತ್ತಾರು ವರ್ಷ ಕೋರ್ಟ್​ನಲ್ಲಿ ಚ್ಯೂಯಿಂಗ್​ಗಮನಂತೆ ಎಳೆಯುವುದನ್ನು ನೋಡಬಹುದು. ಇದೀಗ ಎರಡು ತಿಂಗಳು ಶಿಕ್ಷೆ ವಿಧಿಸಬಹುದಾದ ಪ್ರಕರಣವೊಂದು ಐದು ವರ್ಷ ಕೋರ್ಟುಗಳಲ್ಲಿ ಅಲೆದಾಡಿರುವುದಕ್ಕೆ ನಟನ ಫ್ಯಾನ್ಸ್​ ಕೋಪಗೊಂಡಿದ್ದಾರೆ. ಕೆಲವರು ಕಡಿಮೆ ಶಿಕ್ಷೆ ನೀಡಿರುವುದಕ್ಕೆ ಕೋರ್ಟ್​ಗೆ ಅಭಿನಂದನೆಯನ್ನೂ ಸಲ್ಲಿಸುತ್ತಿದ್ದಾರೆ. ಅದೇನೇ ಇದ್ದರೂ, ಕಾನೂನು ಎಲ್ಲರಿಗೂ ಒಂದೇ. ಈ ಪ್ರಕರಣದಲ್ಲಿ ಹಿಟ್​ ಆ್ಯಂಡ್​ ರನ್​ ಆಗಿದ್ದ ಸಂದರ್ಭದಲ್ಲಿ ನಟ ಸಿಕ್ಕಿಬಿದ್ದಾಗ,  ಪೊಲೀಸರಿಗೆ ಆಲ್ಕೋಹಾಲ್ ಪರೀಕ್ಷೆಗೆ ಬ್ಲಡ್‌ ಸ್ಯಾಂಪಲ್‌ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ. 

ಅಬ್ಬಾ! ನನ್ನ ಮಗು ಗಾಜಾದಲ್ಲಿ ಹುಟ್ಟಿದ್ರೆ ಏನಾಗ್ತಿತ್ತು? ಅಲ್ಲಿಯ ಮಕ್ಕಳಿಗಾಗಿ ಸ್ವರಾ ಭಾಸ್ಕರ್‌ ಕಣ್ಣೀರು- ಭಾವುಕ ಪೋಸ್ಟ್‌

ಅಷ್ಟಕ್ಕೂ ದಲೀಪ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ,  ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ  ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ಜೆನಿತಾ ಗಾಂಧಿ (21) ಮತ್ತು ಗೌರವ್ ಚುಗ್ (22) ಗಾಯಾಳುಗಳು. ಕಾರು ಗುದ್ದಿದ ಪರಿಣಾಮ ಜೆನಿತಾ ಗಾಂಧಿ ಅವರ ಬೆನ್ನು ಮತ್ತು ಕುತ್ತಿಗೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಜೆನಿತಾ ಗಾಂಧಿ ಮತ್ತು ಗೌರವ್ ಚುಗ್ ಆಟೋರಿಕ್ಷಾದಿಂದ ಇಳಿದು ನೋಡಿದಾಗ ನಟ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಗಣೇಶ ವಿಸರ್ಜನಾ ಮೆರವಣಿಗೆ ಇದ್ದ ಕಾರಣ ರಸ್ತೆಯಲ್ಲಿ ಜನಸಂದಣಿಯಿಂದಾಗಿ ಅವರ ಕಾರು ಹೆಚ್ಚು ದೂರ ಹೋಗಲು ಸಾಧ್ಯವಾಗಲಿಲ್ಲ.  ಹೀಗಾಗಿ ದಲೀಪ್ ಸಿಕ್ಕಿ ಹಾಕಿಕೊಂಡಿದ್ದರು ಎಂದು ಕೋರ್ಟ್​ಗೆ ಸಲ್ಲಿಸಲಾದ ವರದಿಯಲ್ಲಿ ಪೊಲೀಸರು ಹೇಳಿಕೆ ನೀಡಲಾಗಿದೆ. ಐದು ವರ್ಷಗಳ ಬಳಿಕ ಅಂತೂ ತೀರ್ಪು ಹೊರಗೆ ಬಿದ್ದಿದ್ದು ನಟನಿಗೆ ಶಿಕ್ಷೆಯಾಗಿದೆ. 

 ದಲೀಪ್ ತಾಹಿಲ್ ಉತ್ತರ ಪ್ರದೇಶದ ಆಗ್ರಾದ ನಿವಾಸಿ. ಅವರು ಭಾರತದ ವಿಭಜನೆಯ ಸಮಯದಲ್ಲಿ ಸಿಂಧ್‌ನಿಂದ ವಲಸೆ ಬಂದ ಸಿಂಧಿ ಹಿಂದೂ ಕುಟುಂಬಕ್ಕೆ ಸೇರಿದವರು.  ಅವರು ಕೇವಲ 10 ವರ್ಷದವರಾಗಿದ್ದಾಗ ನಟನಾ ಲೋಕಕ್ಕೆ ಪದಾರ್ಪಣೆ ಮಾಡಿದರು.  ತಾಹಿಲ್ 1968 ರಲ್ಲಿ  ಕುಟುಂಬದೊಂದಿಗೆ ಮುಂಬೈಗೆ ತೆರಳಿದರು. ಆಗ ಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಅವರನ್ನು ಗಮನಿಸಿದರು, ಅವರು ತಮ್ಮ 'ಅಂಕುರ್' (1974) ಚಿತ್ರದಲ್ಲಿ ಅವರಿಗೆ ಪಾತ್ರವನ್ನು ನೀಡಿದರು, ನಂತರ ಅವರು ರಮೇಶ್ ಸಿಪ್ಪಿ ಅವರ 'ಶಾನ್' ಚಿತ್ರದಲ್ಲಿ ಕೆಲಸ ಮಾಡಿದರು. ಅದಾದ ಬಳಿಕ ದಲಿಪ್​ ಅವರು 'ಬಾಜಿಗರ್' (1993), 'ರಾಜಾ' (1995), 'ಹಮ್ ಹೇ ರಹೀ ಪ್ಯಾರ್ ಕೆ' (1993), ಮತ್ತು 'ಕಯಾಮತ್ ಸೆ ಕಯಾಮತ್ ತಕ್' (1988) ನಂತಹ ಚಲನಚಿತ್ರಗಳಲ್ಲಿನ ಕೆಲಸ ಮಾಡಿದ್ದಾರೆ.  1986 ರಲ್ಲಿ 'ಬುನಿಯಾದ್' ಸೀರಿಯಲ್​ ಮೂಲಕ ಕಿರುತೆರೆಗೂ ಪ್ರವೇಶಿಸಿದ್ದಾರೆ.  'ಮಿಸ್ ಇಂಡಿಯಾ' (2004) ಮತ್ತು 'ಸಿಯಾ ಕೆ ರಾಮ್' (2015) ನಂತಹ ಶೋಗಳಲ್ಲಿ ಕೆಲಸ ಮಾಡಿದ್ದಾರೆ. 

16ಕ್ಕೆ ಮದ್ವೆ, 17ಕ್ಕೆ ಇಬ್ಬರು ಮಕ್ಕಳು, 18ಕ್ಕೆ ಡಿವೋರ್ಸ್‌: ಕಿರುತೆರೆಗೆ ಮರಳಿದ ಈ ಬಿಗ್‌ಬಾಸ್‌ ವಿಜೇತೆ!

Follow Us:
Download App:
  • android
  • ios