ಟ್ರಾಫಿಕ್ ರೂಲ್ಸ್ ಗಳನ್ನು ಫಾಲೋ ಮಾಡಿ ಎಂದು  ಎಂದು ಸರ್ಕಾರ ಎಷ್ಟೇ ಹೇಳಿದ್ರು ಜನ ಮಾತ್ರ ಕೇಳುವುದಿಲ್ಲ ಎನ್ನುತ್ತಾರೆ. ಇರುವುದೇ ಬ್ರೇಕ್ ಮಾಡುವುದಕ್ಕೆ ಎನ್ನುವಂತಹ ಪ್ರಕರಣಗಳೇ ಜಾಸ್ತಿ. ಇದರಿಂದ ಬೇಸತ್ತ ಸರ್ಕಾರ ಇದೀಗ ಕಠಿಣವಾದ ಕಾನೂನನ್ನು ಜಾರಿಗೆ ತಂದಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಬಾರೀ ಮೊತ್ತದ ದಂಡ ಹಾಕುವುದರಿಂದ ಭಯಬಿದ್ದು ರೂಲ್ಸ್ ಫಾಲೋ ಮಾಡ್ತಾ ಇದ್ದಾರೆ. 

ಬಾಲಿವುಡ್ ಡಿಂಪಲ್ ಕ್ವೀನ್ ಪ್ರೀತಿ ಝಿಂಟಾ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ‘ಜನರನ್ನು ಬಿಟ್ಟು ಬಿಡಿ. ಹಸು ಟ್ರಾಫಿಕ್ ರೂಲ್ಸನ್ನು ಹೇಗೆ ಫಾಲೋ ಮಾಡುತ್ತದೆ ನೋಡಿ. ನನ್ನ ಮಾತನ್ನು ನಂಬಬೇಡಿ. ಈ ವಿಡಿಯೋ ನೋಡಿ’ ಎಂದು ಬರೆದುಕೊಂಡಿದ್ದಾರೆ. 

 

ಈ ವಿಡಿಯೋವನ್ನು ನೆಟ್ಟಿಗರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಇದುವರೆಗೂ 56,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮೂಕಪ್ರಾಣಿಯ ಡಿಸಿಪ್ಲೀನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪ್ರೀತಿ ಝಿಂಟಾ ದಿಲ್, ಕ್ಯಾ ಕೆಹನಾ, ಹರ್ ದಿಲ್ ಜೋ ಪ್ಯಾರ್ ಕರೇಗಾ, ಕಲ್ ಹೋ ನಾ ಹೋ, ಕಭಿ ಅಲ್ವಿದಾ ನಾ ಕೆಹನಾ, ದಿಲ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿನಿಮಾ ಮಾತ್ರವಲ್ಲ. ಐಪಿಎಲ್ ನಲ್ಲೂ ಗುರುತಿಸಿಕೊಂಡಿದ್ದರು.  ಕಿಂಗ್ಸ್ ಇಲೆವನ್ ಪಂಜಾಬ್ ಗೆ ಒಡತಿಯಾಗಿದ್ದರು. ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಕರಣ್ ನಾಯರ್ ಕರ್ನಾಟಕದಿಂದ ಆಟವಾಡಿದ್ದರು.