ಮುಂಬೈ(ಏ.26): ಕೊರೋನಾ ವೈರಸ್ ದೇಶವನ್ನೇ ಹೈರಾಣಿಗಿಸಿದೆ. ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಆರೋಗ್ಯ ಕಾರ್ಯಕರ್ತರು, ವೈದ್ಯರು, ಫ್ರಂಟ್‌ಲೈನ್ ವರ್ಕಸ್ , ಕೊರೋನಾ ವಾರಿಯರ್ಸ್ ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ. ಇದೀಗ ಫ್ರಂಟ್‌ಲೈನ್ ಕಾರ್ಯಕರ್ತರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ 5,000 ಆಹಾರ ಪೊಟ್ಟಣ ವಿತರಿಸಿದ್ದಾರೆ. 

ಮೊದಲ ಬಾರಿ ಹೀರೋಯಿನ್‌ಗೆ ಮುತ್ತಿಟ್ಟ ಸಲ್ಮಾನ್ ಖಾನ್; ರಾಧೆ ಟ್ರೈಲರ್‌ ವೈರಲ್!.

ಮುಂಬೈ ನಗರದ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸೇರಿದಂತೆ  ಫ್ರಂಟ್‌ಲೈನ್ ವರ್ಕಸ್‌ಗೆ ಸಲ್ಮಾನ್ ಖಾನ್ 5,000 ಆಹಾರ ಪ್ಯಾಕೆಟ್ ವಿತರಿಸಿದ್ದಾರೆ. ಕಳೆದ ಬಾರಿ ಲಾಕ್‌ಡೌನ್ ಆಗಿದ್ದ ವೇಳೆ ಸಲ್ಮಾನ್ ಕೆಲ ಸಹಾಯ ಮಾಡಿದ್ದರು. ಇದೀಗ ತಮ್ಮ ಫಾರ್ಮ್‌ ಹೌಸ್‌ನಿಂದ ಹೊರಬಂದಿರುವ ಸಲ್ಮಾನ್ ಖಾನ್, ಇದೀಗ ಆರೋಗ್ಯ ಕಾರ್ಯಕರ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಈ ಕುರಿತ ಸಲ್ಮಾನ್ ಖಾನ್ ವಿಡಿಯೋ ಇದೀಗ ವೈರಲ್ ಆಗಿದೆ.

 

ಸಲ್ಮಾನ್ ಖಾನ್ ಅಭಿನಯದ ರಾಧೆ ಯುಆರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊರೋನಾ ವೈರಸ್ ಹೆಚ್ಚಾಗಿರುವ ಕಾರಣ ಲಾಕ್‌ಡೌನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿದೆ. ಹೀಗಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮೇ.13ರಂದು ಬಿಡುಗಡೆಯಾಗಲಿದೆ.