ಟಾಲಿವುಡ್‌ ಸ್ಟೈಲಿಶ್ ನಟ ಅಲ್ಲ ಅರ್ಜುನ್ ಎಕ್ಸ್ ಪೆರಿಮೆಂಟ್ ಮಾಡವುದರಲ್ಲಿ ಎತ್ತಿದ ಕೈ. ಒಂದು ಸಿನಿಮಾದಲ್ಲಿ ಡ್ಯಾನ್ಸ್‌ನಿಂದ ಜನರ ಪ್ರೀತಿ ಗೆದ್ದರೆ ಮತ್ತೊಂದು ಚಿತ್ರದಲ್ಲಿ ಅವರ ಲವ್ಲಿ ಡೈಲಾಗ್‌ಗೆ ಹುಡುಗಿಯರು ಫುಲ್ ಫಿದಾ ಆಗುತ್ತಾರೆ. ಅಷ್ಟೇ ಯಾಕೆ, ನೀವು ಗಮನಿಸಿದರೆ ಅವರ ಪ್ರತಿಯೊಂದೂ ಚಿತ್ರದಲ್ಲಿಯೂ ವಿಭಿನ್ನ ಹೇರ್‌ ಸ್ಟೈಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಇನ್ನು 'ಅಲಾ ವೈಕುಂಠಪುರಂಲ್ಲೊ' ಚಿತ್ರದಲ್ಲಿ ಪೂಜಾ ಹೆಗ್ಡೆಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಅಲ್ಲು ಅರ್ಜುನ್ ಹೇರ್‌ ಸ್ಟೈಲ್ ಸಿಕ್ಕಾಪಟ್ಟೆ ಡಿಫರೆಂಟ್‌ ಆಗಿದೆ. ಇದನ್ನು ಗಮನಿಸಿದ ಕಾಂಟ್ರೋವರ್ಸಿ ನಟಿ ಶ್ರೀ ರೆಡ್ಡಿ ಕಾಮೆಂಟ್ ಮಾಡಿದ್ದಾರೆ. 

ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್; ಹೇಗಿದೆ 7 ಕೋಟಿ ರೂಪಾಯಿ ವಾಹನ?

'ಅರ್ಜುನ್ ನಿಮ್ಮ ಚಿತ್ರಗಳಲ್ಲಿ ವಿಭಿನ್ನ ಹೇರ್‌ ಸ್ಟೈಲ್ ಮಾಡ್ತೀಯಾ. ಇದು ನಿನ್ನ ನಿಜವಾದ ಕೂದಲಾ ಅಥವಾ ಹೇರ್‌ ಎಕ್ಸ್‌ಟೆನ್ಷನ್ ಬಳಸುತ್ತೀಯಾ?' ಎಂದು ಕೇಳಿದ್ದಾರೆ.  ಶ್ರೀ ರೆಡ್ಡಿ ಕಾಮೆಂಟ್ ಮಾಡುತ್ತಿದ್ದಂತೆ ಅಲ್ಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ವೈರಲ್ ಆಯ್ತು ಶ್ರೀರೆಡ್ಡಿ ಕಿಕಿ ಡ್ಯಾನ್ಸ್

ಈ ಹಿಂದೆ ಕೇರಳ ಪ್ರವಾಹ ವಿಚಾರದಲ್ಲೂ ಅಲ್ಲು ಕಾಲೆಳೆದಿದ್ದರು ಶ್ರೀ. 'ಜನರು ಕೇರಳದಲ್ಲಿ ನರಳುತ್ತಿದ್ದಾರೆ. ನೀನು ಅವರಿಗೆ ಸಹಾಯ ಮಾಡುತ್ತಿಲ್ಲ. ಆದರೆ 10 ಕೋಟಿ ರೂ. ವೆಚ್ಚದ ವ್ಯಾನಿಟಿ ವ್ಯಾನ್ ತಯಾರಿಸಲು ಹಣವಿದೆ' ಎಂದು ಕಾಲೆಳೆದಿದ್ದರು. ಸಾಮಾನ್ಯವಾಗಿ ಅರ್ಜುನ್ ಇಂಥ ಮಾತುಗಳಿಗೆ ಕಿವಿ ಕೊಡುವುದಿಲ್ಲ, ವಿವಾದಗಳಿಂದ ದೂರ ಉಳಿಯುತ್ತಾರೆ. ಆದರೆ, ಶ್ರೀಗೋ ಸದಾ ಸುದ್ದಿಯಲ್ಲಿರೋ ಚಪಲ. ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿಯೂ ಸುದ್ದಿಯಾಗಿದ್ದರು.