ಶ್ರೀ ರೆಡ್ಡಿ ಕಿಕಿ ನೃತ್ಯದ ವಿಡಿಯೋ ವೈರಲ್ ಆಗುತ್ತಿದೆ ವಿವಾದಗಳನ್ನೇ ಹೆಚ್ಚು ಪ್ರೀತಿಸುವ ಶ್ರೀ ರೆಡ್ಡಿ ಇದೀಗ ಕಿಕಿ ನೃತ್ಯ ಮಾಡಿದ್ದಾರೆ. ಶ್ರೀ ರೆಡ್ಡಿ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಜೋರಾಗಿಯೇ ಹರಿದಾಡುತ್ತಿದೆ. ಟಾಲಿವುಡ್ ನಟಿ ಶ್ರೀರೆಡ್ಡಿ ಚಿತ್ರರಂಗಲ್ಲಿ ಪಾತ್ರಕ್ಕಾಗಿ ಮಂಚ ಏರಬೇಕಾದ ಪರಿಸ್ಥಿತಿ ಇದೆ ಎಂದು ಗಂಭೀರ ಆರೋಪ ಮಾಡಿದ್ದರು.ಅರೆ ಬೆತ್ತಲೆ ಪ್ರತಿಭಟನೆ ಮಾಡಿಯೂ ಸುದ್ದಿಯಾಗಿದ್ದರು.

ಶ್ರೀರೆಡ್ಡಿ ಅರೆಬೆತ್ತಲೆ ಪ್ರತಿಭಟನೆ

ಕೆಲವು ತಿಂಗಳ ಹಿಂದೆ ತೆಲುಗು ಚಿತ್ರೋದ್ಯಮದ ಮುಂದೆ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡದು ಕೆಲವು ದಿನಗಳ ನಂತರ ನಟ ರಾಣಾ ದಗ್ಗುಬಟ್ಟಿ ಅವರ ಸಹೋದರ ರಾಣಾ ಅಭಿಷೇಕ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಇದೀಗ ಕಿಕಿ ನೃತ್ಯ ಮಾಡಿದ್ದಾರೆ. ಕಾರಿನಿಂದ ಇಳಿದು ನೃತ್ಯ ಮಾಡುತ್ತಿರುವ ದೃಶ್ಯ ಯೂ ಟುಬ್ ಗೂ ಅಪ್ ಲೋಡ್ ಮಾಡಲಾಗಿದೆ.