ಚೆನ್ನೈ(ಡಿ.  28)  ಭಾರತೀಯ ಸಿನಿಮಾ ಸಂಗೀತ ಲೋಕದ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ತಾಯಿ ಕರೀಮಾ ಬೇಗಂ ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರು ಕೊನೆಯುಸಿರೆಳೆದಿದ್ದು ತಾಯಿಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ  ರೆಹಮಾನ್ ಹಂಚಿಕೊಂಡಿದ್ದಾರೆ.

ಪಬ್ಲಿಸಿಟಿಗಾಗಿ ಗಾಯಕಿಯ ಪ್ರಗ್ನೆನ್ಸಿ ಸ್ಟಂಟ್!

ಶ್ರೇಯಾ ಘೋಷಾಲ್‌, ಶೇಖರ್ ಕಪೂರ್‌, ವಿಘ್ನೇಶ್‌ ಶಿವನ್‌ ರೆಹಮಾನ್ ಗೆ ಸಾಂತ್ವನ ತಿಳಿಸಿದ್ದಾರೆ.  ನಾನು ಸಂಗೀತ ಲೋಕ ಆಯ್ಕೆ ಮಾಡಿಕೊಳ್ಳಲು ತಾಯಿಯೇ ಕಾರಣ ಎಂದು ರೆಹಮಾನ್ ಹಲವು ಕಡೆಗಳಲ್ಲಿ ಹೇಳಿದ್ದರು.

ರೆಹಮಾನ್ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು ಅವರನ್ನು ಜೋಪಾನ ಮಾಡಿದ್ದು ಇದೇ  ತಾಯಿ. ರೆಹಮಾನ ಇಡೀ  ಭಾರತೀಯ ಸಿನಿಮಾ ಜಗತ್ತಿಗೆ ಮಾಂತ್ರಿಕ. ರೆಹಮಾನ್ ಅವರಿಗೆ ಈ ಸಂದರ್ಭದಲ್ಲಿ ಇಡೀ ಸಿನಿರಂಗ ಶಕ್ತಿ ತುಂಬುವ ಮಾತುಗಳನ್ನು ಆಡಿದೆ.